Breaking News

ಮಳೆ ನೀರನ್ನು ಹಿಡಿದಿಡುವಲ್ಲಿ ನಾವು ವಿಪಲವಾಗಿದ್ದೇವೆ : ಸಹಜ ಕೃಷಿ ವಿಜ್ಞಾನಿ ಡಾ| ಮಂಜುನಾಥ.

We are bad at retaining rain water: Sahaja Agricultural Scientist Dr Manjunath.

ಜಾಹೀರಾತು
0 300x135

ಜೆ ಎಸ್ ಬಿ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಯಳಂದೂರು ತಾಲೂಕಿನ ಹೊನ್ನೂರಿನ ಮಹೇಂದ್ರ ಅವರ ತೋಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೇಸಿಗೆಯಲ್ಲಿ ತೋಟಗಳ ನಿರ್ವಹಣೆ – ಕ್ಷೇತ್ರ ಪ್ರಾತ್ಯಕ್ಷಿಕೆ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ಬಿಸಿಲಿನ ತಾಪವನ್ನು ತಡೆಯಲು ಆಗುತ್ತಿಲ್ಲ.

ತಿಂಗಳ ಪೂರ್ತಿ ಬಿಸಿಲಿನ ತಾಪ ಜಾಸ್ತಿಯಾಗಿ ನೀರಿನ ಬವಣೆ ಜಾಸ್ತಿಯಾಗುತ್ತಿದೆ. ಬಿಸಿಲು ಜಾಸ್ತಿಯಾದ್ರೆ ಸೂಕ್ಷ್ಮ ಜೀವಿಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಸೂಕ್ಷ್ಮ ಜೀವಿಗಳು ಗಿಡ-ಮರಗಳಿಗೆ ಆಹಾರ ಪೂರೈಕೆ ಮಾಡದಿದ್ದರೆ, ಅವು ಬಹಳ ಕಾಲ ಉಳಿಯುವುದಿಲ್ಲ. ನಾವು ತೋಟಗಳನ್ನು ಉಳಿಸಲು ಮಾರ್ಗಗಳನ್ನು ಹುಡುಕಿಕೊಳ್ಳಬೇಕಿದೆ.

ಈ ನಿಟ್ಟಿನಲ್ಲಿ ಬಹಳ ಚರ್ಚೆ ನಡೆಯಬೇಕಿದೆ. ಇವತ್ತು ರೈತರು ಬೆಳೆದು ನಿಂತಿರುವ ತೋಟಗಳನ್ನು ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಹತ್ತು ಕೊಳವೆ ಬಾವಿ ಕೊರೆಸಿದರೆ ಒಂದೆರಡರಲ್ಲಿ ಮಾತ್ರ ನೀರು ಲಭ್ಯ. ಅತ್ತ ಹಣವೂ ಇಲ್ಲ, ಇತ್ತ ನೀರೂ ಸಿಗುತ್ತಿಲ್ಲ. ಒಂದು ವೇಳೆ ನೀರು ಸಿಕ್ಕರೂ ಒಂದೆರಡು ತಿಂಗಳಲ್ಲೇ ಒಣಗುವ ಕೊಳವೆ ಬಾವಿಗಳೇ ಹೆಚ್ಚು. ಹೀಗಿರುವಾಗ, ಹವಾಮಾನ ಬದಲಾವಣೆಗೆ ನಾವು ಹೊಂದಿಕೊಳ್ಳುವ ಬಗೆಯನ್ನು ಕಲಿಯಬೇಕಿದೆ. ನಾವು ಬದುಕನ್ನು ರೂಪಿಸಿಕೊಳ್ಳುವ ಬಗೆಯನ್ನು ತಿಳಿಯಬೇಕಿದೆ.

ನಾವು ನಮ್ಮ ಊರಲ್ಲೇ ಉಳಿದ, ಬದುಕಲು ಸಾಕಷ್ಟು ಕೆಲಸ ಮಾಡಬೇಕಿದೆ. ಅದೆಂದರೆ, ಮೊದಲು ಉಳುಮೆ ರಹಿತವಾದ ವ್ಯವಸಾಯ ಮಾಡುವುದನ್ನು ಕಲಿಯಬೇಕು. ಭೂಮಿಯ ಮೇಲ್ಮೈಯಲ್ಲಿ ಸದಾ ಮುಚ್ಚುಗೆ ಇರುವಂತೆ ನೋಡಿಕೊಳ್ಳಬೇಕು. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ನಿಲ್ಲಿಸಬೇಕು. ಮಿಶ್ರ ಬೆಳೆಗಳನ್ನು ಬೆಳೆಯಬೇಕು. ಬರವನ್ನು ಎದುರಿಸುವ ಸಾಮರ್ಥ್ಯ ತೋಟವನ್ನು ಸಜ್ಜುಗೊಳಿಸಬೇಕು. ಸದಾಕಾಲವೂ ತಂಪಾಗಿರುವಂತೆ ನೋಡಿಕೊಳ್ಳಬೇಕು. 

ಮಳೆ ನೀರಿನ ಪೂರ್ಣ ಬಳಕೆ – ನಮ್ಮ ತೋಟದಲ್ಲಿ ಬಿದ್ದ ಒಂದು ಹನಿ ಮಳೆ ನೀರು ಈಚೆ ಹೋಗುವಂತಿಲ್ಲ. ಮುಚ್ಚಿಗೆ ಮತ್ತು ಗಿಡಗಳ ಸಾಂದ್ರತೆ ಕಾರಣಗಳಿಂದ ನೆಲವೆಲ್ಲಾ ಸ್ಪಂಜಿನಂತಾಗಿ, ಎಲ್ಲಾ ನೀರನ್ನು ಒಳಗೆ ತೆಗೆದುಕೊಳ್ಳುತ್ತದೆ. ತೀಕ್ಷ್ಮಜೀವಿಗಳು, ಎರೆಹುಳು, ಗೊದ್ದ, ಇರುವೆ ಮತ್ತು ಗಿಡಮರಗಳ ಬೇರುಗಳು ಇದಕ್ಕೆ ಸಹಾಯ ಮಾಡುತ್ತವೆ.

ಮೊದಲು – ಗೊಬ್ಬರ, ಪೋಷಕಾಂಶಗಳ ನಿರ್ವಹಣೆ, ಎರಡನೆಯದಾಗಿ – ನೀರಿನ ನಿರ್ವಹಣೆ, ಮೂರನೆಯದು – ಗಿಡಗಳ ಸವರುವಿಕೆ ಮಾಡಿ, ಸರಿಯಾದ ಆಕಾರ ಕೊಟ್ಟು ಬೆಳೆಸಬೇಕು, ಕೊನೆಯದಾಗಿ – ಬದುಗಳಲ್ಲಿ ಅಗಸೆ, ಕರಿಬೇವು, ನಗ್ಗೆ ಇಂತಹ ಗಿಡಗಳನ್ನು ಬೆಳೆಯಬೇಕು. 

ವಿವಿಧ ಬೆಳೆಗಳನ್ನು ಬೆಳೆದು ಬೆಳೆಗಳ ಮಾರ್ಪಾಡು ಮಾಡುವುದರಿಂದ ಕೀಟಗಳು ಮತ್ತು ರೋಗಗಳ ಪ್ರಸರಣವನ್ನು ತಡೆಯುತ್ತದೆ ಮತ್ತು ತೋಟಗಳನ್ನು ಅಪಾಯಕಾರಿ ರೋಗಗಳಿಂದ ರಕ್ಷಿಸುತ್ತದೆ. ಇದರಿಂದ ಮಣ್ಣಿನ ರಚನೆಯನ್ನು ಸುಧಾರಿಸುತ್ತದೆ ಮತ್ತು ಕಳೆಗಳ ಹರಡುವಿಕೆಯು ಕಡಿಮೆ ಮಾಡುತ್ತದೆ, ಇದು ನಿಮ್ಮ ತೋಟ ನಿರ್ವಹಣೆಯ ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಹೊನ್ನೂರು ಪ್ರಕಾಶ, ಜೆಎಸ್’ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ, ಪ್ರಸನ್ನ, ಪ್ರತಾಪ ಅರಸು, ಈಶಪ್ರಸಾದ, ಮೆಲ್ಲಹಳ್ಳಿ ಚಂದ್ರಮೌಳೀಶ, ಕೆಸ್ತೂರು ನಾಗರಾಜಪ್ಪ, ಯರಗಂಬಳ್ಳಿ ವೃಷಬೇಂದ್ರ, ಬಸವಟ್ಟಿ ಶಂಕರಮೂರ್ತಿ, ಮಲ್ಲಿಗೆಹಳ್ಳಿ ಮಹೇಶ, ಬೆಂಗಳೂರಿನಿಂದ ಶಶಾಂಕ, ಸಿದ್ದಪ್ಪ, ಮಾದಪ್ಪ, ಕೊಳ್ಳೇಗಾಲದಿಂದ ಚಂದ್ರಶೇಖರಯ್ಯ, ಪ್ರವೀಣ, ಮತ್ತಿತರರು, ಸ್ಥಳೀಯ ರೈತರು ಮತ್ತು ಗ್ರಾಮಸ್ಥರಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.