ಗಂಗಾವತಿ: ಶ್ರೀಚನ್ನಬಸವಸ್ವಾಮಿ ಪಟ್ಟಣ ಸೌಹಾರ್ದ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ೧.೬೩ ಕೋಟಿ ರೂ.ಗಳ ನಿವ್ವಳ ಲಾಭವನ್ನು ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಗಿರಿಯಪ್ಪ ಹೊಸಕೇರಿ ಹಾಗೂ ಸಿ.ಇ.ಓ. ನಾಗೇಶ್ ಗೌಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಬ್ಯಾಂಕು ರೂ. ೨.೨೯ ಕೋಟಿ ಗಳÀ ಒಟ್ಟು ಲಾಭವನ್ನು ಗಳಿಸಿದೆ. ಇದರಲ್ಲಿ ಆದಾಯ ತೆರಿಗೆ ಮತ್ತು ಎನ್.ಪಿ.ಏ. ಪ್ರಾವಿಜನ್ ರೂ. ೦.೬೬ ಕೋಟಿ ಮೊತ್ತವನ್ನು ತೆಗೆದಿರಿಸಿ, ನಿವ್ವಳ ರೂ. ೧.೬೩ ಕೋಟಿ ಲಾಭವನ್ನು ಗಳಿಸಿದೆ. ಇದು ಹಿಂದಿನ ಸಾಲಿನಲ್ಲಿ ಗಳಿಸಿದ ನಿವ್ವಳ ಲಾಭ ಮೊತ್ತ ರೂ.೧.೨೨ ಹೋಲಿಸಿದಲ್ಲಿ ಬ್ಯಾಂಕು ಪ್ರಸಕ್ತ ಸಾಲಿನಲ್ಲಿ ಲಾಭ ಗಳಿಕೆಯಲ್ಲಿ ಶೇ. ೩೨.೮ ರ ಗಮನಾರ್ಹ ಪ್ರಗತಿಯನ್ನು ದಾಖಲಿಸಿದೆ. ಪ್ರಸಕ್ತ ಸಾಲಿನ ಅಂತ್ಯಕ್ಕೆ ಬ್ಯಾಂಕು ರೂ. ೭೨.೫೮ ಕೋಟಿ ಠೇವಣಿಗಳು, ರೂ.೪೯.೫೭ ಕೋಟಿ ಸಾಲ ಮತ್ತು ಮುಂಗಡಗಳು, ರೂ.೩೧.೭೨ ಕೋಟಿಗಳ ಹೂಡಿಕೆಯನ್ನು ಮತ್ತು ರೂ.೯೧.೭೭ ಕೋಟಿ ದುಡಿಯುವ ಬಂಡವಾಳವನ್ನು ದಾಖಲಿಸಿದೆ ಹಾಗೂ ಪ್ರಸಕ್ತ ಸಾಲಿಗೆ ಹಾಕಿಕೊಂಡ ಗುರಿಯನ್ನು ತಲುಪಿದೆ. ಬ್ಯಾಂಕಿನ ಪ್ರಥಮ ಶಾಖೆಯನ್ನು ಕಾರಟಗಿ ಪಟ್ಟಣದಲ್ಲಿ ಪ್ರಾರಂಭಿಸಲು ಆಡಳಿತ ಮಂಡಳಿಯು ಹಾಕಿಕೊಂಡ ಯೋಜನೆಯನ್ನು ಯಶಸ್ವಿಗೊಳಿಸಲಾಗಿದೆ. ಈ ಸಾಧನೆಗೆ ಸಹಕಾರ ನೀಡಿದ ಗ್ರಾಹಕರು ಹಾಗೂ ಠೇವಣಿದಾರರನ್ನು ಹೊಸಕೇರಿ ಸ್ಮರಿಸಿದ್ದಾರೆ.
ಸಿ.ಬಿ.ಎಸ್.ಬ್ಯಾಂಕಿಗೆ ಪ್ರಸಕ್ತ ೧.೬೩ ಕೋಟಿ ನಿವ್ವಳ ಲಾಭ
ಜಾಹೀರಾತು