Breaking News

ಲೋಕಸಭಾಚುನಾವಣೆ ಕಾಂಗ್ರೆಸಗೆ 20ಸ್ಥಾನ ಖಚಿತ:ಶಿವರಾಜತಂಗಡಗಿ

20 seats are certain for Congress in Lok Sabha elections: Shivraj Thangadagi

ಜಾಹೀರಾತು
Screenshot 2024 03 22 21 48 07 29 6012fa4d4ddec268fc5c7112cbb265e7 300x172

ಯಲಬುರ್ಗಾ.ಮಾ.22.: ಕೇಂದ್ರ ಸರಕಾರ ಯಾವ ಅಭಿವೃದ್ಧಿ ಯೋಜನೆಗಳನ್ನು ನೀಡದ ಕಾರಣ ಕರ್ನಾಟಕದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಜಾರಿ ಹಿನ್ನಲೆ ಕಾಂಗ್ರೆಸ್ ಪಕ್ಷ ಸುಮಾರು 20ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಬಿಜೆಪಿಗರು ಜನತೆಗೆ ಸುಳ್ಳನ್ನು ಹೇಳುವ ಮೂಲಕ ಕೇವಲ ಜಾತಿ-ಧರ್ಮ ಹೆಸರಲ್ಲಿ ರಾಜಕಾರಣ ಮಾಡುತ್ತಾರೆ ಆದರೆ ಕಾಂಗ್ರೆಸ್ ಪಕ್ಷ ಹಾಗಲ್ಲ ವಿಧಾನ ಸಭಾ ಚುನಾವಣೆಯಲ್ಲಿ 5ಗ್ಯಾರಂಟಿ ಯೋಜನೆಗಳ ಭರವಸೆ ಪೂರ್ಣಗೊಳಿಸಿದ್ದು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಆದರೆ ಬಿಜೆಪಿ ಇಲ್ಲಿಯವರೆಗೆ ಯಾವ ಜನಪರ ಯೋಜನೆಗಳನ್ನು ನೀಡಿಲ್ಲ ಚುನಾವಣೆ ಬಂದಾಗ ಮಾತ್ರ ಎಲ್ಲವು ನೆನಪಾಗುತ್ತೆ ಶ್ರೀರಾಮನ ಭಕ್ತರಂತೆ ನಟಿಸುವ ಇವರು ರಾಮಮಂದಿರ ಕಟ್ಟಿದ್ದೇವೆ ಎನ್ನುತ್ತಾರೆ ಆದರೆ ಸುಮಾರು 60ದಶಕಗಳ ಹೆಚ್ಚು ಕಾಲ ಕೇಂದ್ರ-ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಬಡವರ ಧೀನ ದಲಿತರ ನೊಂದವರ ಪರ ಕೆಲಸ ಮಾಡುವ ಮೂಲಕ ಭಾರತ ದೇಶದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಡ್ಯಾಮಗಳ ಅಭಿವೃದ್ಧಿ, ನ್ಯಾಷನಲ್ ಹೈವೇ, ರೈಲ್ವೆ ಯೋಜನೆ, ನಿರ್ಮಲ ಭಾರತ, ಉದ್ಯೋಗ ಖಾತ್ರಿ, ಆಶ್ರಯ ಮನೆಗಳ ಯೋಜನೆ, ಉಳುವವನೆ ಭೂ ವಡೆಯ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷದ ಸರಕಾರ ಈ ಯೋಜನೆಗಳನ್ನೇ ಬಿಜೆಪಿಗರು ಸ್ವಲ್ಪ ಹೆಸರು ಬದಲಿಸಿ ತಮ್ಮ ಯೋಜನೆ ಎಂದು ಸುಳ್ಳು ಹೇಳುವದು ಎಷ್ಟು ಸರಿ? ಕಾಂಗ್ರೆಸ್ ನಲ್ಲಿಯು ಜೈ ಸೀತಾ-ರಾಮ್ ಭಕ್ತರಿದ್ದು ಹನುಮಂತನ ಮಾಲೆ ಹಾಕಿ ಹನುಮಾನ್ ಚಾಲೀಸ್ ಪಠಣವನ್ನು ಪ್ರತಿ ವರ್ಷ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರ ಇನ್ನೂ 4ವರ್ಷಗಳ ಕಾಲ ಸಂಪೂರ್ಣ ಅಧಿಕಾರ ನಡೆಸಲಿದೆ ಎಂದ ಅವರು ಮುಖ್ಯಮಂತ್ರಿ ಸಿದ್ರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ಜನತೆಯ ವಿಶ್ವಾಸಕ್ಕೆ ಋಣಿಯಗಿದ್ದಾರೆ. ಕೊಪ್ಪಳ ಲೋಕಸಭಾ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರನ್ನು ಜನತೆ ಬೆಂಬಲಿಸಬೇಕು ಎಂದ ಅವರು ಯಲಬುರ್ಗಾದಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಕಾರ್ಯಕಾರ್ಯಕರ್ತರ ಸಭೆ ನಡೆಯಲಿದೆ ಎಂದ ಅವರು ಕೊಪ್ಪಳ ಲೋಕಸಭಾ ಹಾಲಿ ಸಂಸದ ಸಂಗಣ್ಣ ಕರಡಿ ಪ್ರಧಾನಮಂತ್ರಿಯವರನ್ನು ಹೊಗಳಿ ಭಾಷಣ ಮಾಡುತ್ತಿದ್ದರು ಇಂದು ಅವರಿಗೆ ಬಿಜೆಪಿ ಟಿಕೆಟ್ ನೀಡದೆ ಕಡೆಗಣಿಸಲಾಗಿದೆ ಎಂದರು. ಶಾಸಕರಾದ ಬಸವರಾಜ ರಾಯರಡ್ಡಿ ಮಾತನಾಡಿ ಯಲಬುರ್ಗಾ ಕ್ಷೇತ್ರದಲ್ಲಿ ಕೆರೆಗಳ ಅಭಿವೃದ್ಧಿ ಸೇರಿ ಇತರ ಅಭಿವೃದ್ಧಿ ಯೋಜನೆಗಳ ಜಾರಿಗೆ ತರಬೇಕಾದರೆ ಲೋಕಸಭಾ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರನ್ನು ಮತದಾರರು ಗೆಲ್ಲಿಸುವಂತೆ ಮನವಿ ಮಾಡಿದರು. ಈ ಸಭೆಯಲ್ಲಿ ಕೊಪ್ಪಳ ಶಾಸಕರಾದ ರಾಘವೇಂದ್ರ ಹಿಟ್ನಾಳ, ಲೋಕಸಭಾ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಯಲಬುರ್ಗಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಸೇರಿ ಇತರರು ಮಾತನಾಡಿದರು. ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಯಂಕಣ್ಣ ಯರಾಶಿ, ಡಾ.ಶಿವನಗೌಡ ದಾನರಡ್ಡಿ, ಸುಧೀರ ಕೊರ್ಲಳ್ಳಿ, ವೀರನಗೌಡ ಬಳೂಟಗಿ. ಸತ್ಯನಾರಾಯಣ ಹರಪನಹಳ್ಳಿ, ಹನಮಂತಗೌಡ ಚೆಂಡುರ, ಎಮ್ ಎಫ್ ನದಾಫ್, ಅಕ್ತರಸಾಬ ಖಾಜಿ, ರಿಯಾಜ್ ಖಾಜಿ, ಹನಮಂತ ಭಜಂತ್ರಿ, ಇಕ್ಬಾಲಸಾಬ ವಣಗೇರಿ ಸೇರಿ ಇತರರು ಇದ್ದರು.

ವರದಿ: ಖಾಜಾವಲಿ ಎಫ್ ಜರಕುಂಟಿ.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.