Breaking News

ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯಕ್ಕೆ ಶಾಸಕ ಎಮ್ ಆರ್ ಮಂಜುನಾಥ್ ಭೇಟಿ.

MLA MR Manjunath visit to Brahmakumari Ishwari University.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ವರದಿ :ಬಂಗಾರಪ್ಪ ಸಿ

ಹನೂರು:ಮಾನವನಾಗಿ ಹುಟ್ಟಿದ ಮೆಲೆ ಸದಾ ಸಮಸ್ಯೆಗಳನ್ನು ಬಗೆಹರಿಸಲು ಪರಿಣಾಮವಾಗಿ ಸಕ್ರಿಯವಾಗಬೇಕಾಗುತ್ತದೆ ಅಂತಹ ಸಂದರ್ಭದಲ್ಲಿ ಮಠಮಾನ್ಯ ,ಆಶ್ರಮ, ಆದ್ಯಾತ್ಮ ಕೆಂದ್ರಗಳು ಅವಶ್ಯಕತೆಯಿದೆ ಎಂದು ಹನೂರು ಪಟ್ಟಣದ ಪ್ರಜಾಪಿತಾ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯಕ್ಕೆ ಶುಕ್ರವಾರದಂದು ಶಾಸಕ ಎಂ.ಆರ್. ಮಂಜುನಾಥ್ ಬೇಟಿ ನೀಡಿದ ಸಮಯದಲ್ಲಿ ತಿಳಿಸಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಸ್ಥೆಯವರ ಆಹ್ವಾನದ ಮೇರೆಗೆ ಆಗಮಿಸಿ ಮಾತನಾಡಿದ ಶಾಸಕರು ದೇಶದಲ್ಲಿ ವಿಶ್ವ ಶಾಂತಿಗಾಗಿ ಕೆಲಸ ಮಾಡುತ್ತಿರುವ ಏಕೈಕ ಸಂಸ್ಥೆಯೆಂದರೆ ಅದು ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಇಂತಹ ಆಧ್ಯಾತ್ಮಿಕ ಜ್ಞಾನ ಕೇಂದ್ರವನ್ನು ಹನೂರಿನಲ್ಲಿ ತೆರೆದಿರುವುದು ಸಂತೋಷದ ವಿಷಯ , ಇಲ್ಲಿಗೆ ಆಗಮಿಸುವ ಪ್ರತಿಯೋಬ್ಬರಿಗೂ ನೆಮ್ಮದಿ ಲಭಿಸುತ್ತದೆ,ಇದರಿಂದ ಆಧ್ಯಾತ್ಮಿಕವಾಗಿ ಮನಸನ್ನು ಸದೃಡಗೊಳಿಸಬಹುದು ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡು .ನಂತರ
ಶಾಂತಿ, ಸಹಬಾಳ್ವೆ, ಸೋದರತೆಯಂತಹ ಮೌಲ್ಯಯುತ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕಗೆ ಬಹು ಪ್ರಾಮುಖ್ಯತೆ ನೀಡುತ್ತಿದ್ದು, ಸಂಸ್ಥೆಯು ಸ್ವಾಸ್ಥ್ಯ ಸಮಾಜದ ನಿರ್ಮಾಣ ಮಾಡುವ ಕಾಯಕದಲ್ಲಿ ತೊಡಗಿರುವುದು ಉತ್ತಮ ಬೆಳವಣಿಗೆಯಾಗಿದೆ ಅಷ್ಟೇ ಅಲ್ಲದೆ ಜ್ಞಾನ ಹಾಗೂ ರಾಜಯೋಗ ಶಿಕ್ಷಣ ಕೇಂದ್ರವು ಸಹ ಮಾದರಿಯಾಗಿದೆ ಎಂದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮೈಸೂರು ಸಂಸ್ಥೆಯ ಮುಖ್ಯ ಸಂಚಾಲಕರಾದ ಲಕ್ಷ್ಮಿ ಜೀ. ಮೈಸೂರು ಹಿರಿಯ ಉಪನ್ಯಾಸಕರಾದ ಬಿ.ಕೆ ರಂಗನಾಥ್, ಚಾಮರಾಜನಗರ ಮುಖ್ಯ ಸಂಚಾಲಕ ಬಿ.ಕೆ ಪ್ರಭಾಮಣಿ ಜೀ, ಹನೂರು ಸೇವಾ ಕೇಂದ್ರದ ಮುಖ್ಯ ಸಂಚಾಲಕರು, ಬಿ.ಕೆ ಬಿಂದು ,ಸಂಸ್ಥೆಯ ಪದಾಧಿಕಾರಿಗಳು,ಹಾಗೂ ಜೆ ಡಿ ಎಸ್ ಮುಖಂಡರುಗಳಾದ ಹನೂರು ಮಂಜೇಶ್, ಮೋಹನ್ ಕುಮಾರ್ ಹಾಜರಿದ್ದರು .

About Mallikarjun

Check Also

ವಾಲ್ಮೀಕಿ ಸಮಾಜದ ಪೂರ್ವಭಾವಿ ಸಭೆ, ದಿ, 25.09.25 ರಂದು  ಬೃಹತ್ ಪ್ರತಿಭಟನೆ ನೆಡೆಸಲು ತೀರ್ಮಾನ.

Valmiki Samaj's preliminary meeting, The, decided to hold a massive protest on 25.09.25. ಗಂಗಾವತಿ. ನಗರಸಭೆ …

Leave a Reply

Your email address will not be published. Required fields are marked *