Breaking News

ಕಾಮಗೆರೆ ಸಮೀಪದಲ್ಲಿ ಮಲ ತ್ಯಾಜ್ಯನಿರ್ವಹಣಾ ಘಟಕವನ್ನುನಿರ್ಮಿಸಲು ಗುದ್ದಲಿಪೂಜೆನೆರವರಿಸಿದ ಶಾಸಕ ಎಮ್ ಆರ್ ಮಂಜುನಾಥ್

MLA M R Manjunath helped Gudali Pooja to build a faecal waste management unit near Kamagere.

ಜಾಹೀರಾತು
Screenshot 2024 03 15 19 41 42 77 6012fa4d4ddec268fc5c7112cbb265e7 300x216


ವರದಿ : ಬಂಗಾರಪ್ಪ ಸಿ .
ಹನೂರು :ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕೊಂಗರಳ್ಳಿ ಸಮೀಪದಲ್ಲಿ
ಸುಮಾರು‌ 70ಲಕ್ಷ ರೂ ವೆಚ್ಚದಲ್ಲಿ ಮಲ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಶಾಸಕರಾದ ಎಮ್ ಆರ್ ಮಂಜುನಾಥ್ ನೆರವೆರಿಸಿದರು.
ಕಾಮಗೆರೆ ಸಮೀಪದ ಕೊಂಗರಳ್ಳಿಯಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ ನಂತರ
ಮಾತನಾಡಿದ ಶಾಸಕರು ಈಗಾಗಲೇ ಸರ್ಕಾರವು
ನಗರ ಪ್ರದೇಶಗಳಲ್ಲಿ ಇಲ್ಲದೇ ಇರುವಂತಹ ಸೌಲಭ್ಯಗಳನ್ನು ಗ್ರಾಮೀಣ ವ್ಯಾಪ್ತಿಗಳಿಗೆ ಒದಗಿಸುವ ಉದ್ದೇಶದಿಂದ ಈ ಘಟಕ ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಸಹಕಾರಿಯಾಗುತ್ತದೆ ಗುತ್ತಿಗೆದಾರರು ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ನಿರ್ಮಿಸಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಗುತ್ತಿಗೆದಾರರಿಗೆ ತಿಳಿಸಿದರು. ಇಂತಹ ಕಟ್ಟಡಗಳನ್ನು
ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು .

ಇದೇ ಸಮಯದಲ್ಲಿ ಗ್ರಾಪಂ ಚಿಕ್ಕಸ್ವಾಮಿ. ಮುಖಂಡರಾದ ಸಿಂಗನಲ್ಲೂರು ರಾಜಣ್ಣ. ಮಂಜೇಶ್ .
ಇ,ಓ. ಶ್ರೀನಿನಾಸ್ .
ಎಇಇ ಹರೀಶ್ .ಪಿಡಿಒ ಮಹೇಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ಉಪ ಲೋಕಾಯುಕ್ತರಿಂದ ಅ.30, 31 ರಂದು ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ

Public inquiry reception program by the Deputy Lokayukta on October 30th and 31st ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.