How right is it that High Command gave ticket to MP Sanganna and gave ticket to those sitting at home..

ಗಂಗಾವತಿ: 2024ಕ್ಕೆ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಲೋಕಸಭೆಗೆ ಮೂರನೇ ಬಾರಿಗೆ ಬಿಜೆಪಿಯಿಂದ ಸಂಗಣ್ಣ ಕರಡಿಯವರಿಗೆ ಹ್ಯಾಟ್ರಿಕ್ ಗೆಲುವು ತಪ್ಪಿಸಿದ್ದು ಮತ್ತು ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸಿ, ಮನೆಯಲ್ಲಿ ಕುಳಿತವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ್ದು ಎಷ್ಟರಮಟ್ಟಿಗೆ ಸರಿ..? ಸದಾ ಜನರ ಮಧ್ಯೆ ಓಡಾಟ- ಒಡನಾಟ ಮಾಡಿಕೊಂಡು ಎರಡು ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದ ಸಂಸದ ಸಂಗಣ್ಣ ಕರಡಿಗೆ ಮೂರನೇ ಬಾರಿಯ ಅವರಿಗೆ ಟಿಕೆಟ್ ಪಕ್ಕ ಎಂಬುವುದು ನಮ್ಮ ಅಭಿಲಾಷೆಯಾಗಿತ್ತು. ಆದರೆ ಹೊಸ ಮುಖದವರಿಗೆ ಬಿಜೆಪಿ ಟಿಕೆಟ್ ನೀಡಿದ್ದು ಈ ಕ್ಷೇತ್ರದಲ್ಲಿ ಸಮಂಜಸವಲ್ಲ ಎಂದು ಗಂಗಾವತಿ ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಹನುಮಂತಪ್ಪ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಸದ ಸಂಗಣ್ಣ ಕರಡಿಯವರು ಎರಡನೇ ಬಾರಿಯ ಅವಧಿಯಲ್ಲಿ ಶಕ್ತಿಮೀರಿ ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ತಂದು ಇಡೀ ಲೋಕಸಭೆ ವ್ಯಾಪ್ತಿಯ ಎಲ್ಲಾ ಕ್ಷೇತ್ರ, ತಾಲೂಕಗಳಲ್ಲಿ ಅತ್ಯಾಧ್ಬುತವಾದ ಕೆಲಸಗಳನ್ನು ಮಾಡಿಸಿದ್ದಾರೆ. ಇಡೀ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಗಣ್ಣ ಕರಡಿಯವರ ಪಾತ್ರ ಬಹುದೊಡ್ಡದು. ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿಯೊಂದು ಜಾತಿ, ಮತ, ಪಂಥ, ಭೇದ, ಭಾವ ಮಾಡದೆ ಎಲ್ಲರೊಂದಿಗೆ ಪ್ರೀತಿಯಿಂದ ರಾಜಕಾರಣ ಮಾಡಿದವರು. ಪ್ರತಿಯೊಂದು ತಾಲೂಕ ಕೇಂದ್ರದಲ್ಲಿ ಸಂಗಣ್ಣನವರ ಕೆಲಸಗಳು ಕಾಣುತ್ತವೆ. ಕೊಪ್ಪಳದಲ್ಲಿ ಭಾಗ್ಯನಗರ, ಕಿನ್ನಾಳ, ಕುಷ್ಟಗಿ, ಮುನಿರಾಬಾದ, ಗಿಣಿಗೇರಾ, ಬನ್ನಿಕೊಪ್ಪ ರಸ್ತೆಗಳಿಗೆ ಮತ್ತು ಹೀಗೆ ಅನೇಕ ಕಡೆಗೆ ಫ್ಲೈ ಓವರ್ ಗಳನ್ನು ಕಟ್ಟಿಸಿದ್ದಾರೆ, ಗಂಗಾವತಿಯಿಂದ ಹುಬ್ಬಳ್ಳಿ, ಬೆಂಗಳೂರಿಗೆ ನೂತನ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಗಂಗಾವತಿ ದರೋಜಿ ಹೊಸ ರೈಲು ನಿರ್ಮಾಣಕ್ಕೆ ಅನುದಾನ ನೀಡಿ ಚಾಲನೆ ನೀಡಿದ್ದಾರೆ, ಇಂತಹ 10 ಹಲವಾರು ಕೇಂದ್ರ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಹೇಳಲು ಇವೆ, ಇಂತಹ ಧೀಮಂತ ನಾಯಕ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ನೀಡದಿರುವುದು ನಮಗೆ ಬೇಸರ ತಂದಿದೆ, ಟಿಕೆಟ್ ತಪ್ಪಿಸಲು ಬಿಜೆಪಿ ಹೈಕಮಾಂಡ್ ಸೂಕ್ತ ಕಾರಣಗಳನ್ನು ನೀಡಬೇಕು, ಜೊತೆಗೆ ಸಂಗಣ್ಣನವರಿಗೆ ಬಿಜೆಪಿ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ಪುನಃ ಪರಿಶೀಲನೆ ನಡೆಸಿ ಅವರಿಗೆ ಟಿಕೆಟ್ ಘೋಷಣೆ ಮಾಡಬೇಕೆಂದು ಗಂಗಾವತಿ ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಹನುಮಂತಪ್ಪ ನಾಯಕ ಆಗ್ರಹಿಸಿದ್ದಾರೆ.