Breaking News

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮುಖ್ಯ : ಕ್ಯಾತನ

Scientific spirit is important in children : Katana

ಜಾಹೀರಾತು

ಸಾವಳಗಿ : ವಿದ್ಯಾರ್ಥಿಗಳಲ್ಲಿ ವಿನೂತನ ವೈಜ್ಞಾನಿಕ ಜ್ಞಾನ ಮೂಡಿಸುವುದು ಶಿಕ್ಷಕರ ಆದ್ಯ ಕರ್ತವ್ಯ. ವೈಜ್ಞಾನಿಕತೆಗೆ ಇರುವಷ್ಟು ಪ್ರಾಮುಖ್ಯತೆ ಬೇರೆ ಯಾವ ಕ್ಷೇತ್ರದಲ್ಲಿಯು ಸಿಗುವದಿಲ್ಲ ಎಂದು ನಿವೃತ್ತ ಮುಖ್ಯೋಪಾಧ್ಯರಾದ ಎಸ್.ಬಿ.ಕ್ಯಾತನ ಹೇಳಿದರು.

ಸಾವಳಗಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಹಮ್ಮಿಕೊಂಡ ವಿಜ್ಞಾನ ವಿಷಯಗಳ ಕುರಿತು ರಂಗೋಲಿ ಬಿಡಿಸುವ ಸ್ಪರ್ಧೆಯಲ್ಲಿ ವಿಜ್ಞಾನಕ್ಕೆ ಸಂಬಂದಿಸಿದ ವಿವಿಧ ಚಿತ್ರಗಳನ್ನು ವೀಕ್ಷಿಸಿ ಅವರು ಮಾತನಾಡಿದರು.

ಪ್ರಾಯೋಗಿಕವಾದ ಕಲಿಕೆ ಮಕ್ಕಳಲ್ಲಿ ಶಾಶ್ವತವಾಗಿರುತ್ತದೆ. ಪ್ರತಿ ನಿತ್ಯ ಪ್ರಯೋಗಗಳ ಮೂಲಕ ಮಕ್ಕಳ ಗಮನವನ್ನು ವಿಜ್ಞಾನದ ಕಡೆಗೆ ಸೆಳೆಯಬೇಕು. ರಂಗೋಲಿಯಿಂದ ವಿವಿಧ ಚಿತ್ರಗಳನ್ನು ಬಿಡಿಸಿದ್ದು ಮಕ್ಕಳಲ್ಲಿ ಕಲಿಕಾ ಸಾಮಾರ್ಥ್ಯ ಹೆಚ್ಚಾಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕಿ ಎಸ್.ಎಸ್.ಪೂಜಾರ ಆಯೋಜಿಸಿದ್ದರು. ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕರು ಹಾಜರಿದ್ದರು.

ಪೋಟೊ ವಿವರ : ಸಾವಳಗಿ ಸರಕಾರಿ ಗಂಡು ಮಕ್ಕಳ ಶಾಲೆಯಲ್ಲಿ ರಂಗೋಲಿಯಿಂದ ಬಿಡಿಸಿದ ವಿಜ್ಞಾನದ ವಿವಿಧ ಚಿತ್ರಗಳನ್ನು ವೀಕ್ಷಿಸಿದರು

About Mallikarjun

Check Also

ಹಿರೇಬೆಣಕಲ್ ಸೇತುವೆ ಗ್ರಾಮದ ಸಿದ್ಧಗಂಗಾಶ್ರೀ ಬೆಲ್ಲದಚಹಾಅಂಗಡಿಯ ನಾಮಫಲಕತುಮಕೂರು ಸಿದ್ಧಗಂಗಾ ಮಠದ ಶ್ರೀಗಳಿಂದ ಬಿಡುಗಡೆ.

The nameplate of Siddagangasree Jella Tea Shop in Hirebenakal Bridge Village was released by the …

Leave a Reply

Your email address will not be published. Required fields are marked *