Celebration of Saint Shiromani Rohidasa Jayanti in Madabavi village




ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಕೋಕಟನೂರ (ಮಾಂಜರಿ)ಕಾಡಸಿದ್ದೇಶ್ವರ ಮಠದ ಪರಮ ಪೂಜ್ಯ ಗುರುಶಾಂತ ದೇಶಿ ಕೇಂದ್ರ ಶಿವಾಚಾರ್ಯ ಇವರು ರೋಹಿದಾಸ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಸಂತ ಶಿರೋಮಣಿ ರೋಹಿದಾಸ ಮಹಾರಾಜರ ಆಚಾರ ವಿಚಾರ ಹಾಗೂ ಆದರ್ಶಗಳನ್ನು ಎಲ್ಲರು ರೂಡಿಸಿಕೊಳ್ಳಬೇಕು.
ಇಂದಿನ ಯುವಕರು ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕಾರ ಸಂಸ್ಕೃತಿ ಬೆಳೆಸಿ ಕೊಂಡು ಯಾವದೆ ಕೆಟ್ಟ ಚಟಕ್ಕೆ ಬಲಿಯಾಗದೆ ಉನ್ನತ ಸ್ಥಾನಮಾನ ಪಡೆಯಬೇಕೆಂದು ಆಶೀರ್ವಾಚನ ಮಾಡಿದರು.
ಸಂತ ರೋಹಿದಾಸ ಮಹಾರಾಜರಿಗೆ ಪಂಚಮಸಾಲಿ ಲಿಂಗಾಯತ ಸಮಾಜದ ವತಿಯಿಂದ ಭಕ್ತಿ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ವಿನಾಯಕ ಬಾಗಡಿ,ಕಾಂಗ್ರೆಸ್ ಪಕ್ಷದ ಮುಖಂಡ ಪ್ರವೀಣ ನಾಯಿಕ,ಪಿ ಕೆ ಪಿ ಎಸ್ ಬ್ಯಾಂಕಿನ ನಿರ್ದೇಶಕ ಭೀಮಗೌಡ ನಾಯಿಕ,ಗ್ರಾಮ ಪಂಚಾಯತ ಸದಸ್ಯರರಾದ ಸಂಜಯ ಆದಾಟೆ, ಪ್ರವೀಣ ಭಂಡಾರೆ, ಕೃಷ್ಣ ಶಿಂದೆ,ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ಬಾಪು ಅಭ್ಯಂಕರ, ಮಾರುತಿ ಭಂಡಾರೆ ಮುಖಂಡರಾದ ಸಂತೋಷ ನಾಯಿಕ, ಮುರಘೇಶ ಶ್ಯಾಮಣ್ಣವರ,ಸುಖದೇವ ಭಂಡಾರೆ, ಜ್ಯೋತಿಭಾ ಶಿಂಧೆ, ಶಂಕರ ಕೋಡತೆ, ಶಂಕರ ಮಾನೆ.ಸ್ವಾಮಿ ಕಾಂಬಳೆ, ಮನೋಹರ ಶಿಂದೆ, ಗೋವಿಂದ ರಾಜಮಾನೆ, ಪರಶುರಾಮ ರಾಜಮಾನೆ, ಗೋರಕ ಭಂಡಾರೆ ಸೇರಿದಂತೆ ಸಮಾಜದ ಎಲ್ಲಾ ಮುಖಂಡರು ಉಪಸ್ಥಿತರಿದ್ದರು ಇದೆ ಸಂದರ್ಭದಲ್ಲಿ ಹರಳಯ್ಯ ಸಮಾಜದ ವತಿಯಿಂದ ಎಸ್ ಎಸ್ ಎಲ್ ಸಿ, ಪಿ ಯು ಸಿ, ಡಿಗ್ರಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರ ಮೆರವಣಿಗೆ ನಡೆಯಿತು.