Fire Disaster Prevention Program at Athani Sri Veerashaiva Vidyapeeth High School
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಅಗ್ನಿ ಅನಾಹುತ ತಪ್ಪಿಸಲು ಎಚ್ಚರಿಕೆ ಅಗತ್ಯ. * ಅಗ್ನಿ ಅನಾಹುತದಿಂದ ಪಾರಾಗಲು ಮುನ್ನೆಚ್ಚರಿಕೆ ಹಾಗೂ ಸಾಮಾನ್ಯ ಜ್ಞಾನ ಇರಬೇಕೆಂದು ಅಥಣಿ ಪ್ರಬಾರ ಅಗ್ನಿಶಾಮಕ ಠಾಣಾಧಿಕಾರಿ ಶ್ರೀ ಮಲ್ಲಿಕಾರ್ಜುನ ಬಂಧಾಳ ಹೇಳಿದರು.
ಅವರು ದಿನಾಂಕ 23/02/2024 ರಂದು ಅಥಣಿ ಪಟ್ಟಣದ ಶ್ರೀ ವೀರಶೈವ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಅಗ್ನಿ ಅವಘಡಗಳ ಮುಂಜಾಗೃತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶ್ರೀ ವೀರಶೈವ ವಿದ್ಯಾಪೀಠ ಪ್ರೌಢ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದೃಶ್ಯಾವಳಿಯಲ್ಲಿ ನೀವು ಕೂಡ ನೋಡಬಹುದು ಯಾವ ರೀತಿ ಅಗ್ನಿಯನ್ನು ಸಂಭವಿಸಿದರೆ ತಡೆಗಟ್ಟುವ ತನ್ನ ವಿಸ್ತರವಾಗಿ ತಿಳಿಸಿಕೊಟ್ಟರು.
ಅವರು ಬೆಂಕಿ ಹೊತ್ತಿದ್ದು ಗಮನಕ್ಕೆ ಬಂದ ತಕ್ಷಣ 08289- 251740 ಹಾಗೂ 112, 108 ಸಂಖ್ಯೆಗೆ ತ್ವರಿತವಾಗಿ ಸಂಪರ್ಕಿಸಬೇಕೆಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು .ಮಲ್ಲನಗೌಡ ನಾಯ್ಕ ಆಸಿಫ ಸನದಿ ಎಸ್.ಡಿ.ಶಿರಹಟ್ಟಿ , ರವಿ ಸಂಗಮ್, ಸಂತೋಷ ಚೌಗುಲಾ,ಮಲ್ಲಪ್ಪ ಎಸ್.ಭಿ. ಮೊಹಸಿನ್ ಪಠಾಣ, ಸಂಸ್ಥೆಯ ಶಿಕ್ಷಕರಾದ ಎಂ.ಭಿ. ಕುರಣೆ ಮುಖ್ಯೋಪಾಧ್ಯಾಯರು ಶ್ರೀ.ಎಸ್ ಎಂ ಸನದಿ,ಪ್ರಸಾದ ಇಂಗಳೇಶ್ವರ,ವಿನಯ ಟಕೋಡ, ಸಚಿನ, ಇತರರು ಉಪಸ್ಥಿತರಿದ್ದರು.