Breaking News

ಮನಸೊರೆಗೊಂಡ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

A cultural program for children with mental illness

ಜಾಹೀರಾತು


ನವಲಿ: ಇಲ್ಲಿನ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಬಿಳ್ಕೋಡಿಗೆ ಸಮಾರಂಭ ನಿಮಿತ್ಯ ಸಂಜೆ 6 ಘಂಟೆ ನಂತರ ಜರುಗಿದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರೇಕ್ಷಕರ ಮನ ರಂಜಿಸಿದವು, ಸರಕಾರಿ ಶಾಲೆಯ ಮಕ್ಕಳ ಪ್ರತಿಭೆ ಅಭೂತ ಪೂರ್ವ ನಗರಗಳಲ್ಲಿನ ಖಾಸಗಿ ಶಾಲೆಗಳ ಕಾರ್ಯಕ್ರಮಕ್ಕೆ ಸೆಡ್ಡು ಹೊಡದಂತೆ ಸ್ಟೇಜ್ ಹಾಕಲಾಗಿತ್ತು ಮತ್ತು ಯಾವುದಕ್ಕು ಕಮ್ಮಿ ಇಲ್ಲಾ ಎನ್ನುವಂತೆ ಹೆಸರಿಗೆ ತಕ್ಕಂತೆ ಮಾದರಿ ಸರಕಾರಿ ಶಾಲೆಯ ಈ ಮಕ್ಕಳು ನೃತ್ಯ ಹಾಗೂ ಕಿರು ನಾಟಕ ಪ್ರದರ್ಶನಗೋಳಿಸಿದರು,
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ಪ್ರಶಾಂತ ಬಂಕಾಪೂರ ರವರು ನವಲಿ ಗ್ರಾಮದ ಈ ಶಾಲೆ ಸ್ವಾತಂತ್ರ್ಯ ಪೂರ್ವದ 1934ರಲ್ಲಿ ಪ್ರಾರಂಭಗೊಂಡು 85 ವರ್ಷಗಳು ಪೂರ್ಣಗೊಂಡಿದ್ದು ಈ ಶಾಲೆಯಲ್ಲಿ ಕಲಿತವರು ಅನೇಕ ರೀತಿಯ ಜೀವನೋಪಾಯ ಬದಕನ್ನು ಕಟ್ಟಿಕೊಂಡಿದ್ದಾರೆ, ಸರಕಾರಿ ಸೇವೆ ಹಾಗೂ ತಮ್ಮದೆಯಾದ ಸ್ವಯಂ ವೃತ್ತಿ ಜೀವನ ತೋಡಗಿಸಿಕೊಂಡಿದ್ದಾರೆ ಇಗಲೂ ಇಲ್ಲಿ ಶಿಕ್ಷಣಕ್ಕೆ ಮಹತ್ವವಿದ್ದು ಈ ಶಾಲೆಯಲ್ಲಿ ಕಲಿತ

ಹಳೆವಿದ್ಯಾರ್ಥಿಗಳ ಸಹಕಾರ ಶಾಲಾ ಅಭಿವೃದ್ದಿ ಮಂಡಳಿಯವರ ಸಹಕಾರ ಮತ್ತು ಗ್ರಾಮದ ಮುಖಂಡರುಗಳ ಸಹಕಾರದಿಂದ ಇಂತ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಂಡಿದ್ದೆವೆ ಯಾವುದೇ ಶಾಲೆಗಳಿಗಿಂತ ನಮ್ಮ ಶಾಲೆ ಮಕ್ಕಳ ಪ್ರತಿಭೆಗೆ ಕೊರತೆಯಿಲ್ಲಾ ರಾಜ್ಯ ಮಟ್ಟದಲ್ಲು ನಮ್ಮ ಮಕ್ಕಳು ತಮ್ಮ ಪ್ರತಿಭೆ ಮೂಲಕ ಗುರತಿಸಿಕೊಂಡಿದ್ದು ನಾನು ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತೀರುವದಕ್ಕೆ ಸಂತಸ ತಂದಿದೆ ಎಂದರು,
ಶಾಲಾ ಕಾರ್ಯಕ್ರಮವನ್ನು ಯಾವುದೇ ಅಡೆತಡೆಯಾಗದಂತೆ ಮಕ್ಕಳಿಗೆ ನೃತ್ಯ ತರಬೇತಿ, ವಸ್ತ್ರ ವಿನ್ಯಾಸ ಮತ್ತು ಪರಿಕರಗಳನ್ನು, ಶಾಲೆಯ ಶಿಕ್ಷಕರು, ಅತಿಥಿ ಶಿಕ್ಷಕರು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಜನರಲ್ಲಿ ಪ್ರಶಂಸನಿಗೆ ಪಾತ್ರವಾಹಿತು.
ಕಾರ್ಯಕ್ರಮದಲ್ಲಿ, ಸಿಆರಪಿ ರಾಜ ಕುಮಾರ, ಎಸಡಿಎಂಸಿ ಅಧ್ಯಕ್ಷರಾದ ರಾಮಣ್ಣ ಗಾಳಿ, ಉಪಾಧ್ಯಕ್ಷ ವೀರಣ್ಣ ಮಡಿವಾಳ, ಹಾಗೂ ಸರ್ವ ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು, ಸಂಘ ಸಂಸ್ಥೆಗಳ ಮುಖ್ಯಸ್ಥರು, ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು,

About Mallikarjun

Check Also

ಭಗವಾನ್‌ಮಹಾವೀರರ 2624ನೇ ಜಯಂತಿ ಕಾರ್ಯಕ್ರಮದಲ್ಲಿ ನಿಕಟ ಪರ್ವಶಾಸಕರಾದ ಪರಣ್ಣ ಭಾಗಿ

Paranna, a close associate, participated in the 2624th Jayanti of Lord Mahavira. ಗಂಗಾವತಿ ನಗರದ ಶ್ರೀ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.