Irakallagada Fort Trek

ಕೊಪ್ಪಳ ಫೆ. ೧೦: ಕೊಪ್ಪಳ ಚಾರಣ ಬಳಗದಿಂದ ಕೊಪ್ಪಳ ತಾಲ್ಲೂಕಿನ ಇರಕಲ್ಲಗಡ ಕೋಟೆ ವೀಕ್ಷಣೆ ಮತ್ತು ಚರಿತ್ರೆ ಮನನ ಚಾರಣ ಕಾರ್ಯಕ್ರಮ ಫೆ. ೧೧ರ ಭಾನುವಾರ ಬೆಳಿಗ್ಗೆ ೭.೦೦ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಇರಕಲ್ಲಗಡ ಕೋಟೆ ಚರಿತ್ರೆ ಕುರಿತು ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ಮಂಜುನಾಥ ಕೀರ್ತಿಗೌಡರವರು ಉಪನ್ಯಾಸ ನೀಡಲಿದ್ದಾರೆ. ಸದರಿ ಚಾರಣದಲ್ಲಿ ಉಪನ್ಯಾಸಕರು, ಸಂಶೋಧಕರು, ವೈದ್ಯರು, ಪತ್ರಕರ್ತರು, ವಿದ್ಯಾರ್ಥಿಗಳು, ಇತಿಹಾಸ ಪ್ರಿಯರು ಮುಂತಾದವರು ಚಾರಣದಲ್ಲಿ ಭಾಗವಹಿಸಲಿದ್ದಾರೆ. ಈ ಇರಕಲ್ಲಗಡ ಕೋಟೆ ಚಾರಣವು ಐದನೇ ಚಾರಣವಾಗಿದ್ದು, ಈಗಾಗಲೇ ಕೊಪ್ಪಳ ಕೋಟೆ, ಮಳೆಮಲ್ಲೇಶ್ವರ ಪರ್ವತ, ಬಹದ್ದೂರಬಂಡಿ ಕೋಟೆ, ಇಟಗಿ ಮಹಾದೇವ ದೇವಾಲಾಯ ಚಾರಣಗಳನ್ನು ಮಾಡಲಾಗಿದೆ. ಸದರಿ ಚಾರಣದಲ್ಲಿ ಆಸಕ್ತರು ಆಗಮಿಸಬಹುದು. ಹೆಚ್ಚಿನ ಮಾಹಿತಿಗಾಗಿ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ೯೪೪೮೫೭೦೩೪೦, ಡಾ.ವಿಜಯ ಸುಂಕದ ೯೯೮೦೬೬೧೫೭೧ ಇವರನ್ನು ಸಂಪರ್ಕಿಸಬಹುದು.