Breaking News

ಬೆಂಗಳೂರು ಶಿಕ್ಷಕರ ಕ್ಷೇತ್ರದಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ ಪುಟ್ಟಣ್ಣ

Puttanna has filed nomination papers for the by-elections of the Bangalore Teachers Constituency

ಜಾಹೀರಾತು


ಭಾರೀ ಬಹುಮತದಿಂದ ಗೆಲುವು – ಸಚಿವರಾದ ಜಮೀರ್‌ ಅಹಮದ್‌ ಖಾನ್‌, ಡಾ. ಎಂ.ಸಿ. ಸುಧಾಕರ್ ವಿಶ್ವಾಸ

ಬೆಂಗಳೂರು, ಜ, 29; ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ ಗೆ ಫೆಬ್ರವರಿ 16 ರಂದು ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪುಟ್ಟಣ್ಣ ನಾಮಪತ್ರ ಸಲ್ಲಿಸಿದರು.

ಶಾಂತಿನಗರದ ಎಂಟಿಸಿ ಬಸ್‌ ನಿಲ್ದಾನದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ವಸತಿ ಮತ್ತು ವಕ್ಪ್‌ ಸಚಿವ ಜಮೀರ್‌ ಅಹಮದ್‌ ಖಾನ್‌, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಮಾಗಡಿ ಶಾಸಕ ಬಾಲಕೃಷ್ಣ ಮತ್ತಿತರರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಪಾದಯಾತ್ರೆಯಲ್ಲಿ ಸಾಗಿ ಬಂದ ಪುಟ್ಟಣ್ಣ ಅವರು ನಂತರ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಅಮಿತೋತ್ಸಾಹದ ನಡುವೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ವಿಧಾನಪರಿಷತ್‌ ಸದಸ್ಯರಾಗಿದ್ದ ಪುಟ್ಟಣ್ಣ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜೀನಾಮೆ ಸಲ್ಲಿಸಿದ್ದರು. ಇದೀಗ ಅವರಿಂದ ತೆರವಾಗಿರುವ ಸ್ಥಾನಕ್ಕೆ ಸ್ವತಃ ಪುಟ್ಟಣ್ಣ ಅವರೇ ಕಣಕ್ಕಿಳಿದಿದ್ದಾರೆ.

ಈ ಸಂದರ್ಭದಲ್ಲಿ ಸಚಿವ ಜಮೀರ್‌ ಅಹಮದ್‌ ಖಾನ್‌ ಮಾತನಾಡಿ, ಪುಟ್ಟಣ್ಣ ಅವರು ಶಿಕ್ಷಕರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವ ನಾಯಕರಾಗಿದ್ದು, ಅವರು ಈ ಬಾರಿ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಸುಧಾಕರ್‌ ಮಾತನಾಡಿ, ಈಗಾಗಲೇ ನಾಲ್ಕು ಬಾರಿ ಮೇಲ್ಮನೆಗೆ ಆಯ್ಕೆಯಾಗಿದ್ದ ಪುಟ್ಟಣ್ಣ ಅವರು ಶಿಕ್ಷಕರ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಿದೆ. ಶಿಕ್ಷಕರು ಮತ್ತು ಶಿಕ್ಷಣದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ‌. ಪಟ್ಟಣ್ಣ ಗೆಲುವು ನಿಶ್ಚಿತ ಎಂದು ಹೇಳಿದರು.

ಪುಟ್ಟಣ್ಣ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸ್ಪಂದಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಶಿಕ್ಷಕ ಸಮುದಾಯದ ಪ್ರತಿಯೊಂದು ಬೇಡಿಕೆಗಳನ್ನು ಈಡೇರಿಸಲು ಆದ್ಯತೆ ನೀಡುತ್ತೇವೆ. ಶಿಕ್ಷಕ ಸಮುದಾಯ ಮತ್ತೊಮ್ಮೆ ತಮ್ಮನ್ನು ಬೆಂಬಲಿಸಲಿದೆ ಎಂದು ಹೇಳಿದರು.

ಶಾಸಕ ಬಾಲಕೃಷ್ಣ ಮಾತನಾಡಿ, ಪುಟ್ಟಣ್ಣ ಸದಾ ಶಿಕ್ಷಕರ ಬಗ್ಗೆ ತುಡಿತ ಮತ್ತು ಕಾಳಜಿ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ಪುಟ್ಟಣ್ಣ ಅವರು ಶಾಸಕರಾಗಲು ಪ್ರಯತ್ನಿಸಿದರು. ಆದರೆ ಶಿಕ್ಷಕರ ಸೆಳೆತ ಅವರನ್ನು ಮತ್ತೆ ಶಿಕ್ಷಕರ ಕ್ಷೇತ್ರಕ್ಕೆ ವಾಪಸ್‌ ಕರೆತಂದಿದೆ ಎಂದರು.

ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾದ ಆನೇಕಲ್‌ ರಾಮೋಜಿಗೌಡ ಮಾತನಾಡಿ, ಪಟ್ಟಣ್ಣ ಜನಾನುರಾಗಿ. ಜನಪರ, ಜನಪ್ರಿಯ ನಾಯಕ. ಅವರ ಗೆಲುವಿಗೆ ಪ್ರತಿಯೊಬ್ಬರೂ ಶ್ರಮಿಸುತ್ತೇವೆ ಎಂದರು..


Congress Nominee Puttanna Submits Nomination Papers for Bangalore Teachers Constituency By-Elections; Ministers Dr. M. C. Sudhakar and Zameer Ahmed Khan Express Confidence in Massive Victory

Bengaluru, January 29: Puttanna, congress candidate, officially lodged his nomination papers for the upcoming by-elections to the Legislative Council from the Bangalore Teachers Constituency, scheduled for February 16.

Accompanied by Higher Education Minister Dr. M. C. Sudhakar, Housing Minister Zameer Ahmed Khan, Magadi MLA H. C. Balakrishnan, and several other leaders, Puttanna arrived at the Returning Officer’s office situated at Shantinagar Bus Stand. His arrival was marked by a vibrant padayatra, with hundreds of party supporters in tow.

Addressing the gathering, Zameer Ahmed Khan lauded Puttanna’s track record as a proactive legislator, quick to address the concerns of the populace. Expressing confidence, Khan asserted Puttanna’s inevitable victory by a substantial margin.

Dr. Sudhakar commended Puttanna’s past representation of teachers in the Upper House, highlighting his efficacy in resolving educators’ issues. He also pointed out the government’s successful resolution of guest lecturers’ concerns.

In his remarks, Puttanna acknowledged the support and dedication of Chief Minister Siddaramaiah and Deputy Chief Minister D. K. Shivakumar in addressing teachers’ grievances. He pledged to prioritize educators’ issues and appealed for public support in the upcoming elections.

Balakrishnan emphasized Puttanna’s unwavering commitment to the welfare of teachers, noting his return to the MLC arena despite aspirations for a legislative role. Congress candidate for the Graduates Constituency, Anekal Ramoji Gowda, echoed similar sentiments, pledging full support towards ensuring Puttanna’s victory, citing his popularity and pro-people stance.

About Mallikarjun

Check Also

ಗೋಕಾಕ್ ಚಳವಳಿಯ ಹಿನ್ನೋಟ- ಮುನ್ನೋಟ ಕಾರ್ಯಕ್ರಮದ ಅಂಗವಾಗಿ ವಿವಿಧ ಕಲಾ ತಂಡಗಳ ಮೆರವಣಿಗೆ ಕಾರ್ಯಕ್ರಮಕ್ಕೆ ಸಚಿವರಿಂದ ಅದ್ದೂರಿ ಚಾಲನೆ

As a part of Gokak movement retrospective program, various art troupes parade was launched by …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.