Kalakappa Talwar selected for National Art Ratna Award

ಯಲಬುರ್ಗಾ:ರಂಗಭೂಮಿ ಕಲಾವಿದರು.ಗಾಯಕರು,ಪಪಂ ಸದಸ್ಯರಾದ ಕಳಕಪ್ಪ ತಳವಾರ ಅವರಿಗೆ ಪ್ರಸಕ್ತ ಸಾಲಿನ ರಾಷ್ಟ್ರೀಯ ಕಲಾ ರತ್ನ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.ರಂಗಭೂಮಿ ಕಲಾವಿದರಾಗಿ,ಗಾಯಕರಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.ಹಲವಾರು ಕಡೆಗಳಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಕಂಚಿನ ಕಂಠದಿಂದ ಮ ನಸೂರೆಗೊಂಡಿದ್ದಾರೆ.ಅಲ್ಲದೇ ಜ್ಯೂನಿಯರ್ ಶಂಕರನಾಗ ಎಂದೇ ಖ್ಯಾತಿ ಪಡೆದಿರುವ ಕಳಕಪ್ಪ ತಳವಾರ,ಪಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಈಗ ಹಾಲಿ ಸದಸ್ಯರಾಗಿ ಕಾರ್ಯನಿರ್ವಹಿಸಿ, ಸಾಮಾಜಿಕ,ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.ಇವರ ಕ್ರೀಯಾಶೀಲತೆಯನ್ನು ಗುರ್ತಿಸಿ,ಧಾರವಾಡ ಜಿಲ್ಲೆಯ ಕುಂದಗೊಳದ ಚಿರಾಯು ಆಸೋಶಿಯೇಶನ್(ರಿ) ಕ ರ್ನಾಟಕ ಇವರು ಗಣರಾಜ್ಯೋತ್ಸವ ಅಂಗವಾಗಿ ಕೊಡಮಾಡುವ ರಾಷ್ಟ್ರೀಯ ಕಲಾ ರತ್ನ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.ಇದೇ ಜ.28 ರಂದು ಹುಬ್ಬಳ್ಳಿಯಲ್ಲಿ ನಡೆಯುವ ಪ್ರಶಸ್ತಿ ವಿತರಣ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಚಿರಾಯು ಅಸೋಶಿಯೇಶನ್(ರಿ) ಕರ್ನಾಟಕ ಅಧ್ಯಕ್ಷ ಡಾ.ಮಂಜುನಾಥ ಶಿವಕ್ಕನವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.