An appeal to the MLA from the employees of the Taluk Hospital demanding appropriate action against the assaulted person

ಅಥಣಿ : ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಇತ್ತೀಚೆಗೆ ಕರ್ತವ್ಯ ನಿರತ ಸಿಬ್ಬಂದಿಯೊಬ್ಬರ ಮೇಲೆ ವ್ಯಕ್ತಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದು, ಹಲ್ಲೆ ಮಾಡಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳಬೇಕಾಗುತ್ತದೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ರಾಜ್ಯ ನೌಕರರ ಸಂಘದ ಅಥಣಿ ತಾಲೂಕು ಅಧ್ಯಕ್ಷರಾದ ಆರ್.ಎಸ್. ಪಾಟೀಲ ಹಾಗೂ ಜಿ.ಎಮ್. ಹಿರೇಮಠ ಅವರ ನೇತೃತ್ವದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರ ನಿವಾಸಕ್ಕೆ ದಿ. 5-1-24ರಂದು ಭೇಟಿ ನೀಡಿ ಶಾಸಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಟಿಎಚ್‌ಒ ಬಸಗೌಡ ಕಾಗೆ, ಹಾಗೂ ಆಸ್ಪತ್ರೆಯ ಎಲ್ಲ ನೌಕರರು ಉಪಸ್ಥಿತರಿದ್ದರು.