J. 08 Kkeka. Ra. Pr. 200 days work for protesting agricultural laborers across Coasta state, Rs. 600 Wages: Chandrappa Hoskera
ಗಂಗಾವತಿ: ಬರ ಆವರಿಸಿರುವ ಹಿನ್ನಲೆಯಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದ್ದು, ೨೦೦ ದಿನ ಉದ್ಯೋಗ ಖಾತ್ರಿ ಕೆಲಸ ಹಾಗು ದಿನಗೂಲಿ ೬೦೦ ರುಗೆ ಹೆಚ್ಚಿಸಿ, ಬರಪರಿಹಾರ ಒದಗಿಸಲು ಆಗ್ರಹಿಸಿ ಜನೆವರಿ ೦೮ ರಂದು ರಾಜ್ಯದಾದ್ಯಂತ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಹೇಳಿದರು.
ಅವರು ಮಂಗಳವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ತುಂಗಭದ್ರ ನದಿ ನೀರು ಬೇಸಿಗೆ ಬೆಳಗೆ ಹರಿಸದ ಹಿನ್ನೆಲೆಯಲ್ಲಿ ಕೂಲಿಕಾರರಿಗೆ ತೀವ್ರ ತೊಂದರೆಯಾಗಿದೆ, ಗ್ಯಾರಂಟಿ ಸ್ಕೀಂಗಳು ಕೊಂಚ ಮಟ್ಟಿಗೆ ಸಹಕಾರಿಯಾದರೂ, ಕಡು ಬಡತನದಲ್ಲಿರುವವರಿಗೆ ಜೀವನ ಸಾಗಿಸುವುದು ತುಂಬಾ ಕಷ್ಟವಾಗಿದೆ, ಕುಡಿಯುವ ನೀರಿಗು ಅಹಾಕಾರ ಏಳುವ ಸ್ಥಿತಿ ನಿರ್ಮಾಣವಾಗಿದ್ದು ಕೂಡಲೆ ಸರಕಾರ ಎಚ್ಚೆತ್ತುಕೊಂಡು ಸೂಕ್ತ ಪರಿಹಾರ ನೀಡಬೇಕು, ಇನ್ನೂ ಉದ್ಯೋಗ ಖಾತ್ರಿ ಕೆಲಸ ಯಂತ್ರದಿAದ ಮಾಡಿ ಹಣ ಎತ್ತುವುದು, ಕೂಲಿಕಾರರಿಗೆ ಸರಿಯಾಗಿ ಕೆಲಸ ನೀಡದ ವಂಚನೆ ಮಾಡುವುದು, ನೀಡುವ ದಿನಗೂಲಿ ವೇತನದಲ್ಲಿ ಕೆಲ ಭಾಗ ಜನಪ್ರತಿನಿಧಿಗಳು ಹಾಗು ಅಧಿಕಾರಿ ವರ್ಗ ಲೂಟಿ ಮಾಡುತ್ತಿದ್ದು ಇದಕ್ಕೆ ಜಿಲ್ಲಾಧಿಕಾರಿಗಳು ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ರಾಜ್ಯದ ೨೨೩ ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದ್ದು, ಕೇಂದ್ರ ಹಾಗು ರಾಜ್ಯ ಸರಕಾರಗಳ ಹಗ್ಗ ಜಗ್ಗಾಟದಲ್ಲಿ ರಾಜ್ಯದ ಜನತೆ ಕಂಗಾಲಾಗಿದ್ದಾರೆ. ೧೮೦೦೦ ಕೋಟಿ ರು ಪರಿಹಾರ ಕೋರಿ ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ ಆದರೆ ಅನ್ಯ ಪಕ್ಷದ ಸರಕಾರ ಕೇಂದ್ರದಲ್ಲಿರುವ ಕಾರಣ, ಹಣ ನೀಡುತ್ತಿಲ್ಲ. ಇಬ್ಬರ ಜಗಳದಲ್ಲಿ ಬಡವರಿಗೆ ಬಡವಾಗುತ್ತಿದ್ದಾರೆ. ರಾಜ್ಯ ಸರಕಾರ ಕುಟೀರ ಜ್ಯೋತಿ, ಭಾಗ್ಯಜ್ಯೋತಿ ವಿದ್ಯುತ್ ಬಳಕೆದಾರರಿಗೆ ಕೆಲ ಯುನಿಟ್‌ಗಳ ಬಳಕೆಗೆ ನಿಯಮ ತಂದಿದ್ದು ಹೆಚ್ಚುವರಿ ಬಳಸಿದರೆ ಹಣ ನೀಡಬೇಕೆಂಬುದು ತಾರತಮ್ಯ ನೀತಿಯಾದಂತಾಗಿದೆ. ಒಂದು ಕಡೆ ಉಳ್ಳವರಿಗೆ ವಿದ್ಯುತ್ ನೀಡಿ, ಹಸಿದವನಿಗೆ ನಿಯಮ ಪಾಲಿಸುವಂತೆ ಮಾರ್ಗಸೂಚಿ ಕೊಟ್ಟಿರುವುದು ಸರಿಯಾದ ಕ್ರಮವಲ್ಲ, ಕೂಲಿಕಾರರ ಬವಣೆ ನೀಗಬೇಕು ಒಂದು ವೇಳೆ ತಡವಾದರೆ ಹಂತಹಂತವಾಗಿ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದರು.
ಸಂಘದ ತಾಲೂಕಾ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷರಾದ ಹುಸೇನಪ್ಪ, ಬಾಳಪ್ಪ ಹುಲಿಹೈದರ ಪ್ರಧಾನ ಕಾರ್ಯದರ್ಶಿ ಸುಂಕಪ್ಪ ಗದಗ, ಕಾರ್ಯದರ್ಶಿ ದುರುಗೇಸ್ ಮರಕುಂಬಿ, ಜಂಟಿ ಕಾರ್ಯದರ್ಶಿ ಮರಿನಾಗಪ್ಪ, ಹೆಚ್.ಕನಕರಾಯ, ಹೇಮಣ್ಣ ಮತ್ತು ಜಿಲ್ಲಾ ಸಮಿತಿ ಸದಸ್ಯ ರಮೇಶ್ ಬಡಿಗೇರಾ, ಇದ್ದರು.