The forest department did not repair the destruction of the school building due to the elephant attack: the outrage of the villagers.


ವರದಿ : ಬಂಗಾರಪ್ಪ ಸಿ ಹನೂರು .
ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನ
ಸೂಳೆರಿ ಪಾಳ್ಯ ಗ್ರಾಮ ಪಂಚಾಯಿತಿಯ ಪಚ್ಚೆದೊಡ್ಡಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆನೆ ದಾಳಿಗೆ ಸುತ್ತು ಗೊಡೆ ಮತ್ತು ಗೇಟ್ ಮುರಿದು ಹೊಗಿರುವ ಘಟನೆ ನಡೆದು ಎರಡು ತಿಂಗಳು ಕಳೆದರು ದುರಸ್ತಿ ಕಾರ್ಯಮಾಡದ ಕಾರಣ ಅರಣ್ಯ ಇಲಾಖೆ ವಿರುದ್ದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಇದೇ ವಿಷಯವಾಗಿ ಪ್ರತಿಕ್ರಿಯಿಸಿ ಗ್ರಾಮ ಪಂಚಾಯತಿ ಅಧ್ಯಕ್ಷರಾದಿಯಾಗಿ ಗ್ರಾಮಸ್ಥರೆಲ್ಲ ಅರಣ್ಯ ಇಲಾಖೆಗೆ ಅನುದಾನ ನೀಡಲು ಅರ್ಜಿಯನ್ನು ನೀಡಿದರು ಯಾವುದೇ ಪ್ರಯೋಜನವಿಲ್ಲ ಇದರಿಂದ ಶಾಲಾ ಮಕ್ಕಳು ದಿನ ನಿತ್ಯ ಶಾಲೆಗೆ ತೆರಳಲು ತೊಂದರೆಯಾಗುತ್ತದೆ ಎಂದು ಗ್ರಾಮ ಪಂಚಾಯತಿ ಅದ್ಯಕ್ಷರಾದ ಮುತ್ತುರಾಜು ತಿಳಿಸಿದರು .
ಇದೇ ಸಮಯದಲ್ಲಿ ರೈತ ಮುಖಂಡ ಕರ್ನಾಟಕ ರಾಜ್ಯ ರೈತ ಸಂಘಟನೆ ಕಾರ್ಯದರ್ಶಿ ಬಸವರಾಜು , ಗ್ರಾಮದ ಯಜಮಾನರಾದ ಮನ್ನಾರೆ ಕ್ರಿಷ್ಣೆಗೌಡ್ರು, ಸುರೇಶ್ ,ರಾಜು ,ನಾರಯಣಗೌಡ್ರು.ಪಚ್ಚೆಗೌಡ್ರು. ಸೇರಿದಂತೆ ಗ್ರಾಮಸ್ತರು ಆಗ್ರಹಿಸಿದರು.