Breaking News

ಗಂಗಾವತಿ ನಗರದಲ್ಲಿ ಡಿಸೆಂಬರ್-೨೨ನೇ ಶುಕ್ರವಾರದಂದು ಹನುಮಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ

Sankirtana Yatra by Hanuman Maladhari at Gangavati Nagar on 22nd Dec-Friday

ಜಾಹೀರಾತು

ಗಂಗಾವತಿ: ನಗರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ೨೨ನೇ ಡಿಸೆಂಬರ್ ಶುಕ್ರವಾರದಂದು ತಾಲೂಕಿನ ಹನುಮಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ, ಉತ್ತರ ಪ್ರಾಂತದ ಕೊಪ್ಪಳ ಜಿಲ್ಲಾ ಸಂಯೋಜಕರಾದ ಕೆ.ಎಂ ದೊಡ್ಡಬಸಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದರು.
ಅಂದು ಬೆಳಿಗ್ಗೆ ೧೦:೦೦ ಗಂಟೆಗೆ ಎ.ಪಿ.ಎಂ.ಸಿ ಚನ್ನಬಸವಸ್ವಾಮಿ ದೇವಸ್ಥಾನ (೧ನೇ ಗೇಟ್) ದಿಂದ ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಪ್ರಾರಂಭಗೊAಡು, ಯಾತ್ರೆಯು ಸಿ.ಬಿ.ಎಸ್ ವೃತ್ತ, ಮಹಾವೀರ ವೃತ್ತ, ಗಾಂಧಿವೃತ್ತ, ಬಸವಣ್ಣ ಸರ್ಕಲ್, ಅಂಬೇಡ್ಕರ್ ವೃತ್ತ, ಕೊಟ್ಟೂರುಬಸವೇಶ್ವರ ದೇವಸ್ಥಾನದವರೆಗೆ ನಡೆದು ಮುಕ್ತಾಯಗೊಳ್ಳಲಿದೆ.
ಈ ಯಾತ್ರೆಯಲ್ಲಿ ಗಂಗಾವತಿ, ಕನಕಗಿರಿ, ಕಾರಟಗಿ ಹಾಗೂ ಎಲ್ಲಾ ಸುತ್ತಮುತ್ತಲಿನ ಹನುಮಮಾಲಾಧಾರಿಗಳು, ಗಣ್ಯಮಾನ್ಯರು, ಸಾರ್ವಜನಿಕರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿಶ್ವಹಿಂದೂ ಪರಿಷತ್ ಭಜರಂಗದಳ ಕೋರಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ವಿನಯ ಪಾಟೀಲ್, ತಾಲೂಕ ಸಂಯೋಜಕರಾದ ರಾಮಾಂಜನೇಯ, ವಿಬಗ ಸಂಯೋಜಕರಾದ ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

ಹೊನ್ನಾವರಕಾಸರಕೋಡದ ಖಾಸಗಿ ವಾಣಿಜ್ಯ ಬಂದರುಯೋಜನೆಯನ್ನು ಕೈಬಿಡುವಂತೆ ಮುಖ್ಯಮಂತ್ರಿಗೆರಾಷ್ಟ್ರೀಯ ಮೀನುಗಾರರ ಸಂಘಟನೆಗಳ ಒತ್ತಾಯ

National fishermen organizations urge Chief Minister to abandon private commercial port project in Honnavar, Kasaragod …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.