Breaking News

ಸಂಸತ್ತಿನಲ್ಲಿ ನಿನ್ನೆ ನಡೆದ ಘಟನೆಯಮನೋರಂಜನ ಎಂಬ ವ್ಯಕ್ತಿಯು SFI ಸಂಘಟನೆಯವರು ಎಂದು ಸುಳ್ಳು ಸುದ್ದಿ ಹಂಚುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗಳಲುSFIಆಗ್ರಹ

SFI demands appropriate legal action against those who are spreading false news that SFI is an organization after yesterday’s incident in Parliament.

ಜಾಹೀರಾತು
IMG 20231214 WA01722 223x300


ಗಂಗಾವತಿ,13: ಈ ದೇಶದ ಪ್ರಜೆಗಳನ್ನು ಪ್ರತಿನಿಧಿಸುವ ಪವಿತ್ರ ಸ್ಥಳವಾದ ಲೋಕಸಭೆಯಲ್ಲಿ ಇಂದು ಕೆಲವು ಕಿಡಿಗೆಡಿಗಳು ನುಗ್ಗಿ ಕಲರ್ ಗ್ಯಾಸ್ ಸಿಂಪಡಿಸುವ ಮೂಲಕ ಭಾರಿ ಭದ್ರತಾ ಲೋಪವನ್ನು ಎಸಗಿದ್ದಾರೆ ಇದು ಅಕ್ಷಮ್ಯ ಅಪರಾಧ ಮತ್ತು ಖಂಡನೀಯ ಇದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ( ಎಸ್ಎಫ್ಐ ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.
ಈ ಕೃತ್ಯ ಎಸಗಿದವರನ್ನು ಈಗಾಗಲೇ ಬಂಧಿಸಿಲಾಗಿದೆ ಅವರನ್ನು ಸೂಕ್ತ ವಿಚಾರಣೆ ಒಳಪಡಿಸಿ ಕಾನೂನಿನ ಕ್ರಮಕ್ಕೆ ಮುಂದಾಗಬೇಕೆಂದು ಎಸ್ಎಫ್ಐ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸುತ್ತದೆ.

ಕೃತ್ಯ ಎಸಗಿದವರ ಪೈಕಿ ಇಬ್ಬರೂ ಕರ್ನಾಟಕ, ಒಬ್ಬರು ಹರಿಯಾಣ ಮತ್ತೋರ್ವರು ಮಹಾರಾಷ್ಟ್ರ ಮೂಲದವರೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇವರೆಲ್ಲ ಲೋಕಸಭೆ ಪ್ರವೇಶ ಮಾಡಲು ಇವರಿಗೆ ಪಾಸ್ ನೀಡಿದವರು ಯಾರು? ಇವರ ಹಿಂದೆ ಯಾರೆಲ್ಲಾ ಇದ್ದಾರೆ, ಇದಕ್ಕೆ ಕುಮ್ಮಕ್ಕು ನೀಡಿದವರು ಯಾರು? ಮತ್ತು ಇವರ ಉದ್ದೇಶ ಏನಾಗಿತ್ತು ಎಂಬುದರ ಕುರಿತು ಸಮಗ್ರ ತನಿಖೆ ನಡೆಯಲಿ.

ಎಸ್ಎಫ್ಐ ಸಂಘಟನೆ ತ್ಯಾಗ ಬದ್ದತೆ ಮತ್ತು ಸಿದ್ದಾಂತವನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳ, ಶಿಕ್ಷಣದ ಮತ್ತು ಸಮಾಜದ ಪ್ರಗತಿಗಾಗಿ ಹಾಗೂ ಸೌಹಾರ್ದ, ಸಾಮರಸ್ಯದ ಘನತೆಯ ಬದುಕಿಗಾಗಿ ದಶಕಗಳಿಂದ ವಿದ್ಯಾರ್ಥಿ ಸಮುದಾಯದ ಪರವಾಗಿ ದೇಶಾದ್ಯಂತ ಹೋರಾಟ ಮಾಡುತ್ತಾ ಬರುತ್ತಿದೆ. ಇದನ್ನು ಸಹಿಸದ ಈ ದೇಶದ ಕೋಮುವಾದಿ BJP ಪಕ್ಷದ ಕಾರ್ಯಕರ್ತರು ಸೈದ್ದಾಂತಿಕವಾಗಿ ಸಂಘಟನೆಯನ್ನು ಎದುರಿಸಲಾಗದೆ
ಈ ಪ್ರಕರಣದಲ್ಲಿ ‌ವಿನಾಕಾರಣ ಎಸ್ಎಫ್ಐ ಮೈಸೂರು ಜಿಲ್ಲಾ ಅಧ್ಯಕ್ಷರಾದ‌ ವಿಜಯ್ ಕುಮಾರ್ ಇವರ ಪೋಟೋವನ್ನು ದುರ್ಬಳಕೆ ಮಾಡಿಕೊಂಡು ಇವನೆ ಮನೋರಂಜನ ಎಂದು ಅಪ ಪ್ರಚಾರ ಮಾಡುತ್ತ ಇದ್ದಾರೆ ಸೈದ್ಧಾಂತಿಕವಾಗಿ ಎದುರಿಸಲಾಗದ BJP ಯವರು ಸೋಶಿಯಲ್ ಮೀಡಿಯಾದಲ್ಲಿ ಅಪ್ರಚಾರ ಮಾಡುತ್ತಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಕೃತ್ಯ ಎಸಗಿದ ವ್ಯಕ್ತಿಗಳ ಬಂಧನ ಆದರೂ ದುರುದ್ದೇಶದಿಂದ ಇಂತಹ ಕೆಲಸ ಮಾಡುತ್ತಿರುವ BJP ಯ ಐಟಿ ಸೆಲ್ ಗಳು ಹಾಗೂ ಅದನ್ನು ನಿರ್ವಹಿಸುವ
ಅಡ್ಮಿನ್ ಗಳನ್ನು ಮತ್ತು ಸುಳ್ಳು ಸುದ್ದಿಯನ್ನು ಶೇರ್ ಮಾಡುತ್ತಿರುವ ಎಲ್ಲಾ ವ್ಯಕ್ತಿಗಳು ಹಾಗೂ ಗುಂಪುಗಳ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಈ ಮನವಿ ಪತ್ರದ ಮೂಲಕ ಆಗ್ರಹಿಸುತ್ತಿದ್ದೇವೆ.ಎಂದು ರಾಜ್ಯ ಅಧ್ಯಕ್ಷರ ಅಮರೇಶ ಕಡಗದ,ರಾಜ್ಯ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಹಾಳ ಪ್ರಕಟಣೆ ಮೂಲಕ ತಿಳಿಸಿದ್ದಾರೆ.




About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.