On 13th in front of Suvarna Soudha, Belgaum, a protest was held by Kanipa Bhovi for the fulfillment of the demands of journalists of the country.
ಧರಣಿ :- ಇದೇ ತಿಂಗಳು ಅಂದರೆ ಡಿಶೆಂಬರ್ 13 ರಂದು ಚಳಿಗಾಲದ ಅಧಿವೇಶನದ ಸ್ಥಳವಾದ ಬೆಳಗಾವಿಯ ಸುವರ್ಣಾ ಸೌಧದ ಮುಂದೆ ಕಾನಿಪ ಧ್ವನಿ ವತಿಯಿಂದ ನಾಡಿನ ಪತ್ರಕರ್ತರು ಕಾರ್ಯನಿರ್ವಹಿಸಲು ಆಯಾ ಜಿಲ್ಲೆಯಾಧ್ಯಂತ ಓಡಾಡಲು ಉಚಿತ ಬಸ್ ಪಾಸ್ ಸೌಲಭ್ಯ, ಪ್ರಸ್ತುತ ವಾರ್ತಾ ಇಲಾಖೆಯಲ್ಲಿ ಖಾಲಿ ಇರುವ 300 ಕ್ಕೂ ಅಧಿಕ ಸಿಬ್ಬಂದಿಗಳನ್ನು ಕೂಡಲೇ ನೇಮಿಸಿಕೊಳ್ಳಬೇಕು, ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ 800 ಕ್ಕೂ ಅಧಿಕ ಪತ್ರಿಕೆಗಳನ್ನು ಕಾರ್ಮಿಕ ಇಲಾಖೆಯಲ್ಲಿ ನೊಂದಣಿಯಾಗುವಂತೆ ಸೂಕ್ತ ಕಟ್ಟು ನಿಟ್ಟಿನ ಕಾನೂನು ಕ್ರಮವಹಿಸಬೇಕು, ರಾಜ್ಯದ ಸಮಸ್ತ ಪತ್ರಕರ್ತರಿಗೆ ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಹಾಗೂ ಪ್ರತಿಯೊಬ್ಬ ವರದಿಗಾರರಿಗೂ ಜೀವ ವಿಮಾ ಸೌಲಭ್ಯವನ್ನು ಸರ್ಕಾರ ಭರಿಸಬೇಕು ಎಂಬ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆಯ ಧರಣಿಯನ್ನು ಕಾನಿಪ ಧ್ವನಿ ವತಿಯಿಂದ ಹಮ್ಮಿಕೊಂಡಿರುವ ಹೋರಾಟಕ್ಕೆ ಕಾನಿಪ ಧ್ವನಿ ಸದಸ್ಯರು,ಪದಾಧಿಕಾರಿಗಳು ಹಾಗೂ ನಾಡಿನಾಧ್ಯಂತ ಸೌಲಭ್ಯಗಳಿಂದ ವಂಚಿತರಾಗಿರುವ ಪ್ರತಿಯೊಬ್ಬ ಪತ್ರಕರ್ತರು ಈ ಹೋರಾಟದಲ್ಲಿ ಭಾಗವಹಿಸುವುದರ ಮುಖಾಂತರ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯನ್ನು ಮೊಳಗಿಸೋಣ. 4000 ಕೋಟಿ ರೂಗಳನ್ನು ಮಹಿಳೆಯರಿಗೆ ರಾಜ್ಯಾಧ್ಯಂತ ಓಡಾಡಲು ಮೀಸಲಿಟ್ಟಿರುವ ಈ ಸರ್ಕಾರ ಅನೇಕ ವರ್ಷಗಳಿಂದ ಉಚಿತ ಬಸ್- ಪಾಸ್ ಗಾಗಿ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದ್ದರೂ ಕೂಡ, ಪತ್ರಕರ್ತರು ಆಯಾ ಜಿಲ್ಲೆಯಾಧ್ಯಂತ ಓಡಾಡಲು ಕೇವಲ 10 ಕೋಟಿ ರೂ ಗಳು ಮೀಸಲಿಡದ ಹಾಗೂ ಮೀನ ಮೇಷ ಎಣಿಸಿತ್ತಿರುವ ಸಿದ್ದರಾಮಯ್ಯ ರ ಸರ್ಕಾರಕ್ಕೊಂದು ದಿಕ್ಕಾರ ವೆನ್ನುತ್ತಾ, ಇದೇನಾ ನಿಮ್ಮ ನಿಜವಾದ ಸಾಮಾಜಿಕ ಹರಿಕಾರತನ ವೆಂಬ ಯಕ್ಷ ಪ್ರಶ್ನೆ ಪ್ರತಿಯೊಬ್ಬ ಪತ್ರಕರ್ತರಲ್ಲಿ ಬೇರೂರುತ್ತಿರುವುದು ಸುಳ್ಳಲ್ಲ. ಈ ಹೋರಾಟಕ್ಕೆ ಸಂಬಂಧಿಸಿದಂತೆ ಇಂದು ನಾನು ಕಳುಹಿಸಿಕೊಟ್ಟ ಮನವಿ ಪತ್ರವನ್ನು ಬೆಳಗಾವಿ ಜಿಲ್ಲಾ ಕಿತ್ತೂರು ಕಾನಿಪ ಧ್ವನಿ ತಾಲೂಕು ಅಧ್ಯಕ್ಷರು ಉದಯವಾಣಿ ದಿನಪತ್ರಿಕೆಯ ವರದಿಗಾರರಾದ ಬಸವರಾಜ್ ಚಿನಗುಡಿ ಹಾಗೂ ತಾಲೂಕು ಉಪಾಧ್ಯಕ್ಷರಾದ ಮಹಂತೇಶ್ ಕರಿಬಸವಣ್ಣ ನವರ್ ತಮ್ಮ ಬಿಡುವಿಲ್ಲದ ಸಮಯದಲ್ಲಿಯೂ ಇಂದು ಬೆಳಗಾವಿಯ ಪೋಲೀಸ್ ಆಯುಕ್ತರ ಕಛೇರಿಗೆ ಹೋಗಿ ಮನವಿ ಪತ್ರ ಸಲ್ಲಿಸಿ ಸ್ವೀಕೃತ ಪತ್ರವನ್ನು ತೆಗೆದುಕೊಂಡು ನನಗೆ ವ್ಯಾಟ್ಸಫ್ ಮಾಡಿದ್ದಲ್ಲದೇ ದಿನಾಂಕ:- 13/12/2023 ರಂದೇ ಧರಣಿಗೆ ಪೋಲೀಸ್ ಆಯುಕ್ತರ ಕಛೇರಿಯಿಂದ ಅನುಮತಿಗೆ ಶ್ರಮ ವಹಿಸಿರುವ ಇವರಿಗೆ ನಮ್ಮ ಸಮಸ್ತ ಕಾನಿಪ ಧ್ವನಿ ವತಿಯಿಂದ ಹೃದಯ ಪೂರ್ವಕ ನಮನಗಳು. ಈ ಕುರಿತಂತೆ ಪೋಲೀಸ್ ಆಯುಕ್ತರ ಕಛೇರಿಯಿಂದ ಸ್ವೀಕೃತ ಪತ್ರದ ಪ್ರತಿ ತಮ್ಮೆಲರಿಗಾಗಿ.
ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯಾಧ್ಯಕ್ಷರು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ತಿಳಿದಿದ್ದಾರೆ.