Breaking News

ನಾನು, ನಾವು ಎಂದಾಗ ಸಮಾಜದ ಅಭಿವೃದ್ಧಿ ಸಾಧ್ಯ : ಡಾ|| ಅಭಿನವ ಮಲ್ಲಿಕಾರ್ಜುನ ಶ್ರೀ

Development of society is possible when I, we are: Dr|| Abhinava Mallikarjuna Mr

ಜಾಹೀರಾತು


ತಿಪಟೂರು : ನಾನು, ನನ್ನದು, ನನ್ನಿಂದಲೇ ಸಮಾಜ ಎನ್ನುವ ಹಮ್ಮ ಬಿಟ್ಟು ನಾವು, ನಮ್ಮದು ಎಂದಾಗ ಸಮಾಜದ ಅಭಿವೃದ್ಧಿ ಸಾಧ್ಯವೆಂದು ಕುಪ್ಪೂರು ತಮ್ಮಡಿಹಳ್ಳಿಯ ಡಾ|| ಅಭಿನವ ಮಲ್ಲಿಕಾರ್ಜುನದೇಶೀಕೇಂದ್ರ ಸ್ವಾಮೀಜಿಗಳು ಕರೆನೀಡಿದರು.
ತಾಲ್ಲೂಕಿನ ಬೆಳಗರಹಳ್ಳಿಯ ಶ್ರೀ ಬಸವೇಶ್ವರ ಸ್ವಾಮಿಯವರ ನೂತನ ಶಿಲಾದೇಗುಲ ಪ್ರವೇಶ, ಮತ್ತು ಶ್ರೀ ಬಸವೇಶ್ವರ ಶಿಲಾವಿಗ್ರಹ ಪ್ರತಿಷ್ಠಾಪನೆ ಹಾಗೂ ಶಿಖರ ಕಲಶ ಪ್ರತಿಷ್ಠಾಪನ ಮಹೋತ್ಸವದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಸುದೈವ ಕುಟುಂಬಕA ಎಂಬAತೆ ನಾವೆಲ್ಲರೂ ಒಂದೇ ಎಂದಿದೆ. ಅದಕ್ಕಾಗಿ ನಮ್ಮ ದೇವಾಲಯಗಳಲ್ಲಿ ದೇವರಿಗೆ ಯಾವುದೇ ಬಡವ-ಬಲ್ಲಿದ ಎಂಬ ಬೇದಭಾವವಿಲ್ಲ ದೇವರ ಮುಂದೆ ಎಲ್ಲರೂ ಸಾಮಾನ್ಯ, ಇಲ್ಲಿನ ಸಾಮರಸ್ಯವನ್ನು ನಾವು ಎಲ್ಲಾಕಡೆಯು ಬಳಸಿಕೊಂಡಾಗ ನಮ್ಮ ಅಭಿವೃದ್ಧಿ ಸಾಧ್ಯವೆಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಕೆರೆಗೋಡಿ-ರಂಗಾಪುರದ ಸುಕ್ಷೇತ್ರಾಧ್ಯಕ್ಷರಾದ ಶ್ರೀಶ್ರೀ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮೀಜಿಯವರು, ಪರಮಪೂಜ್ಯ ಶ್ರೀಶ್ರೀ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಮಹಾಸ್ವಾಮೀಜಿಯವರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.
ಇAದು ಬೆಳಗ್ಗೆ ನೂರಾರು ಮಕ್ಕಳು, ಸುಮಂಗಲಿಯರಿAದ ಗಂಗಾಪೂಜೆ ಮೂಲಕ ಕುಂಬವನ್ನು ಮೆರವಣಿಗೆಯ ಮೂಲಕ ತಂದು ಕಳಶಕ್ಕೆ ಕುಂಭಾಭಿಷೇಕ ನೆರವೇರಿಸಿದರು. ಹಾಗೂ ಎಲ್ಲಾ ಹೋಮ ಹವನಗಳು ನಿವಿಘ್ನವಾಗಿ ನೆರವೇರಿತು. ಕಳೆದ ಮೂರು ದಿನಗಳಿಂದ ಬಂದAತಹ ಭಕ್ತಾದಿಗಳಿಗೆ ನಿರಂತರವಾಗಿ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಪೊಟೋ : 23 ಟಿಪಿಆರ್ 1

About Mallikarjun

Check Also

ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಿ,ಶಿರಸ್ತೇದಾರ ರವಿಕುಮಾರ್ ನಾಯಕವಾಡಿ ಸಲಹೆ

Include the name in the voter list, Chief Ravikumar suggested ಜಿಎಚ್ ಎನ್ ಕಾಲೇಜಿನಲ್ಲಿ ಮತದಾರ ಪಟ್ಟಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.