Village President Anjaney’s advice

ಗಂಗಾವತಿ : ನರೇಗಾ ಯೋಜನೆಯಡಿ ಸಮುದಾಯಿಕ ಕಾಮಗಾರಿಗಳ ಜೊತೆಗೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಬಹುದು ಎಂದು ಬಸಾಪಟ್ಟಣ ಗ್ರಾಪಂ ಅಧ್ಯಕ್ಷರಾದ ಆಂಜನೇಯ ಅವರು ಹೇಳಿದರು.
ತಾಲೂಕಿನ ಬಸಾಪಟ್ಟಣ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನದಡಿ ಬುಧವಾರ ಆಯೋಜಿಸಿದ್ದ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2024-25 ನೇ ಸಾಲಿನ ಕ್ರಿಯಾಯೋಜನೆ ತಯಾರಿಸಲು ಈಗಾಗಲೇ ವಾರ್ಡಸಭೆಗಳನ್ನು ಅಯೋಜಿಸಿ ಫಲಾನುಭವಿಗಳಿಂದ ಅರ್ಜಿಗಳನ್ನು ಪಡೆಯಲಾಗಿದೆ. ಜೊತೆಗೆ ಗ್ರಾಮಕ್ಕೆ ಅಗತ್ಯ ಇರುವ ಬೇಡಿಕೆಗಳ ಪಟ್ಟಿಯೂ
ಮಾಡಲಾಗಿದ್ದು, ಕ್ರಿಯಾಯೋಜನೆ ತಯಾರಿಸಲಾಗುವುದು ಎಂದರು.
ನರೇಗಾದಡಿ ಗ್ರಾಮೀಣ ಭಾಗದಲ್ಲಿ ಆಸ್ತಿಗಳ ಸೃಜನೆ ಆಗುತ್ತಿದ್ದು, ಜೊತೆಗೆ ಕೆರೆ, ನಾಲಾ ಹೂಳೆತ್ತುವ ಕಾಮಗಾರಿಯು ನಡೆಯುತ್ತಿವೆ ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ವಿದ್ಯಾವತಿ, ಗ್ರಾಪಂ ಉಪಾಧ್ಯಕ್ಷರಾದ ರತ್ನಮ್ಮ, ಸದಸ್ಯರಾದ ಗೌರಮ್ಮ, ಕನಕರಾಜು, ಗುರಯ್ಯ, ರಾಘವೇಂದ್ರ, ಬಸಮ್ಮ, ಖಾಸೀಂಬಿ, ಲಕ್ಷ್ಮಮ್ಮ, ಎಸ್ ಡಿಎ ಶ್ರೀನಿವಾಸ, ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ತಾಂತ್ರಿಕ ಸಹಾಯಕರಾದ ಲಕ್ಷ್ಮೀದೇವಿ, ಗ್ರಾಪಂ ಸಿಬ್ಬಂದಿಗಳು ಇದ್ದರು.
Kalyanasiri Kannada News Live 24×7 | News Karnataka
