Students of Reddy Veeranna School who entered the business

ನವನಗರ್ : ಕಮ್ಮವಾರಿ ಶಿಕ್ಷಣ ಸಂಸ್ಥೆಯ ರೆಡ್ಡಿ ವೀರಣ್ಣ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಆಹಾರ ತಯಾರಿಕೆ ಹಾಗೂ ಮಾರಾಟ ಮೇಳ ಆಯೋಜಿಸಲಾಗಿತ್ತು, ಸಂಸ್ಥೆಯ ಅಧ್ಯಕ್ಷರು ಹಾಗೂ ಕಾಡ ಮಾಜಿ ಅಧ್ಯಕ್ಷರು
ಕೊಲ್ಲಾ ಶೇಷಗಿರಿ ರಾವ್ ಉದ್ಘಾಟಿಸಿ
ಪ್ರತಿನಿತ್ಯ ಕ್ಲಾಸಲ್ಲಿ ಪಾಠ ಕೇಳಬೇಕಾದ ವಿದ್ಯಾರ್ಥಿಗಳೆಲ್ಲಾ ಇವತ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ರು. ಶಾಲೆಯ ಕ್ಯಾಂಪಸ್ ಇವತ್ತು ವಿವಿಧ ಸ್ಟಾಲ್‌ಗಳಿಂದ ತುಂಬಿದ್ದು ವಿದ್ಯಾರ್ಥಿಗಳೇ ಬಗೆ ಬಗೆಯ ತಿಂಡಿ ತಿನಿಸುಗಳನ್ನ ತಯಾರಿಸಿ ಮಾರಾಟ ಮಾಡುತ್ತಿದ್ರು.ವಿದ್ಯಾರ್ಥಿಗಳಿಗೆ ವ್ಯವಹಾರದ ಪ್ರಾಯೋಗಿಕ ಜ್ಞಾನ ತಿಳುವಳಿಕೆ ಬರಬೇಕು ಮತ್ತು ಮನೆಯಲ್ಲಿ ಅಡುಗೆ ಮಾಡುವ ಸಂದರ್ಭದಲ್ಲಿ ಮಕ್ಕಳು ಪಾಲಕರಿಗೆ ಸಹಾಯ ಮಾಡುವ ಮನೋಭಾವನೆ ಬರಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ,
ವಿದ್ಯಾರ್ಥಿಗಳ ಜೊತೆ ಶಿಕ್ಷಕರೂ ಸಹ ಸ್ಟಾಲ್‌ಗಳಿಗೆ ಭೇಟಿಕೊಟ್ಟು ತಮ್ಮ ವಿದ್ಯಾರ್ಥಿಗಳು ತಯಾರಿಸಿದ ಆಹಾರಗಳನ್ನು ಖರೀದಿಸುತ್ತಿದ್ದಾರೆ ಎಂದರು.
ನಂತರ ಬೇಬಿ ಕ್ಲಾಸ್, ಎಲ್ ಕೆ ಜಿ, ಯುಕೆಜಿ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು, ಉತ್ಸಾಹದಿಂದ ಪುಟಾಣಿ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು,
ಈ ಸಂದರ್ಭದಲ್ಲಿ ಪ್ರಾಚಾರ್ಯರು ಕೆ ಎಸ್ ಗುರುಮಠ, ಉಪ ಪ್ರಾಚಾರ್ಯರು ವಸಂತ ದೇಸಾಯಿ, ಬಾಲ ಗುರುಕುಲ ಮುಖ್ಯಸ್ಥರು ಶ್ರೀದೇವಿ ಕೊಲ್ಲಾ, ಮತ್ತು. ಶಿಕ್ಷಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲಕರು ಉಪಸ್ಥಿತರಿದ್ದರು.