Broken name board! Unopened road humps
ಕೊಪ್ಪಳ: ಹಲವು ರಸ್ತೆಗಳಲ್ಲಿ ತಗ್ಗು ದಿನ್ನಿಗಳೇ ಸಾಕಷ್ಟು ಇರುವಾಗ ರೋಡ ಹಂಪ್ಸ್ ಗಳನ್ನು ಹಾಕುವ ಅವಶ್ಯಕತೆಯೇ ಇರುವುದಿಲ್ಲ.ಆದಾಗ್ಯೂ ಹಾಳಾದ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಹರ ಸಾಹಸ
ಪಡುತ್ತಿರುವಾಗ ಕಿಲೋಮೀಟರ್ ಗೆ ನಾಲ್ಕಾರು ರೋಡ ಹಂಪ್ಸ್ ಗಳ ನಿರ್ಮಾಣ ಮಾಡಲಾಗಿರುತ್ತದೆ.
ಹಿಟ್ನಾಳ ಕ್ರಾಸ್,ಹುಲಿಗಿ ಕ್ರಾಸ್ ಮತ್ತು ಹೊಸಳ್ಳಿಯ ರಸ್ತೆಗಳಲ್ಲಿ ದೊಡ್ಡ ದೊಡ್ಡ ರಸ್ತೆ ತಡೆಗಳನ್ನು ನಿರ್ಮಿಸಿದ್ದು,ಇದರಿಂದ ಹಲವು ವಾಹನಗಳ ಸಂಚಾರಕ್ಕೆ ತುಂಬಾ ಅಡೆ ತಡೆಯಾಗಿದೆ.ಕಾರುಗಳಂತಹ ವಾಹನಗಳು ಈ ರೋಡ ಹಂಪ್ಸಗಳಿಗೆ ತಾಗಿ, ದುರಸ್ತಿಗೀಡಾಗುತ್ತಿವೆ.ಈ ಬಗ್ಗೆ ಪ್ರಯಾಣಿಕರು ಹಿಡಿ ಶಾಪ ಹಾಕುತ್ತಾ ಹೋರಾಡುತ್ತಾರೆಯೇ ಹೊರತು,ಧ್ವನಿ ಎತ್ತುತ್ತಿಲ್ಲ.
ಮುರಿದ, ಹರಿದ ನೇಮ್ ಬೋರ್ಡ್ ಗಳು ಸಹ ಕಂಡು ಬರುತ್ತವೆ.ಕೆಲವು ಪುಂಡರ ಹಾವಳಿಯಿಂದ ಕಿ.ಮಿ.ಕಲ್ಲುಗಳಲ್ಲಿನ ಮಾಹಿತಿ ಹಾಳಾಗಿರುತ್ತವೆ.ಆದರೆ ಮುಗಿಲೆತ್ತರಕ್ಕೆ ಹಾಕಿರುವ ನೇಮ್ ಬೋರ್ಡ್ ಗಳು ಮುರಿದು ಹಾಳಾಗಿ ಹೋಗಿದ್ದರೂ ಸಂಭಂದಿಸಿದ ಇಲಾಖೆ ಮೌನ ವಹಿಸಿರುವುದು ಅರಾಜಕತೆಗೊಂದು ಉದಾಹರಣೆ.
ಕೊಪ್ಪಳ ತಾಲೂಕಿನ ಬೂದಗುಂಪಾ ಕ್ರಾಸ್ ನಿಂದ ಹೊಸಪೇಟೆ ಮತ್ತು ಕೊಪ್ಪಳದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುರಿದ, ಮುಕ್ಕಾದ ನೇಮ್ ಬೋರ್ಡ್ ಗಳು ಪ್ರಯಾಣಿಕರನ್ನು ಸ್ವಾಗತಿಸುತ್ತವೆ.
ಸರಕಾರದಿಂದ ಆಗಬೇಕಾದ ಕೆಲಸವೇನೂ ಇದಲ್ಲ.ಈ ಕೆಲಸ ಬಿಟ್ಟು ಬಿಡದೆ ಟೋಲ್ ಹಣ ಸಂಗ್ರಹಿಸುವ ಕಂಪನಿಯದ್ದು.ಟೋಲ್ ಪಾವತಿದಾರರೇ ದೂರನ್ನು ನೀಡಬಹುದು.
ಗಂಗಾವತಿ ನಗರ ಸಭಾ ಸದಸ್ಯ ಮನೋಹರ ಸ್ವಾಮಿ ಹಿರೇಮಠ, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಶರಣೇಗೌಡ ಮಾಲಿ ಪಾಟೀಲ್ ಮತ್ತು ತಾವು ಟೋಲ್ ಗೇಟ್ ನ ಸಂಭಂದಿಸಿದವರಿಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ಅಶೋಕಸ್ವಾಮಿ ಹೇರೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕ್ರಮ ಜರುಗದಿದ್ದಲ್ಲಿ ಲಿಖಿತ ದೂರು ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ನ್ಯಾಷನಲ್ ಹೈವೇ ಅಥಾರಿಟಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸದಿರುವುದು ಆಶ್ಚರ್ಯಕರ.ಆ ಕಚೇರಿ ದೂರದ ಊರಲ್ಲಿಯೇನೂ ಇಲ್ಲ ,ಹತ್ತಿರದ ಹೊಸಪೇಟೆ ನಗರದಲ್ಲಿದೆ.ಆ ಕಚೇರಿಯ ಗಮನಕ್ಕೆ ತರುವ ಕೆಲಸವನ್ನು ಯಾವ ಅಧಿಕಾರಿ,ಯಾವ ರಾಜಕಾರಣಿ, ಯಾವ ಸಾರ್ವಜನಿಕ ವ್ಯಕ್ತಿಯೂ ಮಾಡದಿರುವುದು ವಿಷಾಧಕರ ಎಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.