Breaking News

ನದಾಫ್ ಸಂಘ ಯಲಬುರ್ಗಾದಲ್ಲಿ ಸುಮಾರು ವರ್ಷಗಳ ಕಾಲಸಂಘಟಿಸಲಾಗುತ್ತಿದೆ:ಎಮ್ ಎಫ್ ನದಾಫ್

Nadaf Sangh has been organizing in Yalaburga for about years: MF Nadaf

ಜಾಹೀರಾತು

ಯಲಬುರ್ಗಾ.ನ.18.:ಯಲಬುರ್ಗಾ ತಾಲೂಕಿನಲ್ಲಿ ನದಾಫ್ ಪಿಂಜಾರ ಸಂಘವನ್ನು 1994ರಿಂದ ಸಂಘಟಿಸುತ್ತಾ ಬರಲಾಗಿದೆ ಇನ್ನೂ ಹೆಚ್ಚು ಈ ಸಂಘವನ್ನು ಸಂಘಟಿಸಲು ನೂತನ ಅಧ್ಯಕ್ಷರಾಗಿ ಖಾದರಸಾಬ ಎಮ್ ತೋಳಗಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಯಲಬುರ್ಗಾ ತಾಲೂಕ ನದಾಫ್ ಸಂಘದ ಮಾಜಿ ಅಧ್ಯಕ್ಷ ಮರ್ತುಜಾಸಾಬ ಎಫ್ ನದಾಫ್ ಹೇಳಿದರು.
ತಾಲೂಕಿನ ಮುಧೋಳ ಗ್ರಾಮದ ಹಳೆಪೇಟೆ ಜಾಮಿಯಾ ಮಸ್ಜಿದ್ ನಲ್ಲಿ ಶನಿವಾರ ನದಾಫ್ ಸಂಘದ ಯಲಬುರ್ಗಾ ತಾಲೂಕ ಘಟಕಕ್ಕೆ ಅಧ್ಯಕ್ಷರ ಆಯ್ಕೆ ಕುರಿತ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನದಾಫ್ ಪಿಂಜಾರ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದು ನಧಾಫ್ ಸಂಘದ ಕುರಿತು ತಾಲೂಕಿನ ವಿವಿಧ ಗ್ರಾಮಗಳಲ್ಲಿ ನದಾಫ್, ಪಿಂಜಾರ ಸಮಾಜದ ಜನರನ್ನು ಜಾಗೃತಗೊಳಿಸಬೇಕಿದೆ ಈಗಾಗಲೇ ನದಾಫ್ ನಿಗಮ ಮಂಡಳಿ ರಚನೆಯಾಗಿದ್ದು ಇದಕ್ಕೆ ಸರಕಾರ ಅನುದಾನ ನೀಡಿದಾಗ ಮಾತ್ರ ಅಭಿವೃದ್ಧಿ ಹೊಂದಲಿದೆ ಎಂದ ಅವರು ನದಾಫ್ ಪಿಂಜಾರ ಪ್ರವರ್ಗ 1ರ ಜನತೆಗೆ ಕೇವಲ ಶೈಕ್ಷಣಿಕ ಸೌಲಭ್ಯ ಮಾತ್ರ ದೊರೆಯುತ್ತಿದೆ ಹೆಚ್ಚಿನ ಸೌಲಭ್ಯ ದೊರಕಿಸುವಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದ ಅವರು ನಾವು ಎಂದಿಗೂ ನದಾಫ್ ಪಿಂಜಾರ ಅಂದರೆ ಕೀಳರಿಮೆ ಅಂತಾ ಅಂದುಕೊಳ್ಳಬಾರದು ನಾವು ನಮ್ಮತನವನ್ನು ಎಂದಿಗೂ ಮರೆಯಬಾರದು ಎಂಬ ಕಿವಿ ಮಾತು ಹೇಳಿದರು. ನೂತನ ಯಲಬುರ್ಗಾ ತಾಲೂಕ ನದಾಫ್ ಪಿಂಜಾರ ಸಂಘದ ಅಧ್ಯಕ್ಷ ಖಾದರಸಾಬ ತೋಳಗಲ್ ಮಾತನಾಡಿ ನಮ್ಮ ಮೇಲೆ ವಿಶ್ವಾಸವಿಟ್ಟು ಸಮಾಜದ ಜನತೆ ಅಧ್ಯಕ್ಷರನ್ನಾಗಿ ಮಾಡಿದ್ದು ನದಾಫ್ ಪಿಂಜಾರ ಸಂಘದ ಸರ್ವತೋಮುಖ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡುತ್ತೇನೆ ಅದರಂತೆ ನದಾಫ್ ಸಮಾಜ ಬಾಂದವರ ಸಹಕಾರ ಅತ್ಯಗತ್ಯ ಮತ್ತು ಹಿರಿಯರಾದ ಎಮ್ ಎಫ್ ನದಾಫ್ ಮತ್ತು ಫಕೀರಸಾಬ ನದಾಫ್ ಅವರ ಮಾರ್ಗದರ್ಶನದಂತೆ ನಡೆಯುತ್ತೇನೆ ಎಂದರು. ಬಳಿಕ ನದಾಫ್ ಪಿಂಜಾರ ಸಮಾಜದವರು ಸಂಘದ ರಾಜ್ಯ ಸಮಿತಿ ಸದಸ್ಯರಾದ ಫಕಿರಸಾಬ ನದಾಫ್, ನೂತನ ಅಧ್ಯಕ್ಷ ಖಾದರಸಾಬ ತೋಳಗಲ್, ಮಾಜಿ ಅಧ್ಯಕ್ಷ ಎಮ್ ಎಫ್ ನದಾಫ್ ಅವರನ್ನು ಸನ್ಮಾನಿಸಿದರು. ನದಾಫ್ ಸಂಘಕ್ಕೆ ನೂತನ ಉಪಾಧ್ಯಕ್ಷರಾಗಿ ಪಕೀರಸಾಬ ನದಾಫ್, ಕಾರ್ಯದರ್ಶಿಯಾಗಿ ಖಾಜಾವಲಿ ಎಫ್ ಜರಕುಂಟಿ, ಕಾನೂನು ಸಲಹೆಗಾರರಾಗಿ ಹಸನಸಾಬ ಅಲ್ಲಾಸಾಬ ನದಾಫ್, ಸಂಘಟನಾ ಕಾರ್ಯದರ್ಶಿಗಳಾಗಿ ಅಲ್ಲಾಸಾಬ ರಾಜೇಸಾಬ ಸಿರಗುಂಪಿ, ನಿಜಾಮುದ್ದಿನ ಎಚ್ ನೂರಭಾಷ, ಸೇರಿ ಇತರ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಮುಖಂಡರಾದ ಅಬ್ದುಲಗನಿಸಾಬ ನೂರಾಬಾಷ, ರಸೂಲಸಾಬ ಕಿನ್ನಾಳ, ಕಾಸಿಮಸಾಬ ಕೊಪ್ಪಳ, ಮರ್ದಾನಸಾಬ ಎಮ್ ನೂರಭಾಷ, ಖಾದರಸಾಬ ನೂರಭಾಷ ಸೇರಿ ಇತರ ಪ್ರಮುಖರು ನದಾಫ್ ಪಿಂಜಾರ ಸಮಾಜ ಬಾಂಧವರೆಲ್ಲರೂ ಉಪಸ್ಥಿತರಿದ್ದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.