Request to the District In-charge Minister to free the drivers of waste transporters from outsourcing and make them pay directly.

ಗಂಗಾವತಿ: ಕರ್ನಾಟಕ ರಾಜ್ಯಾಧ್ಯಂತ ಇರುವ ಹತ್ತು ಸಾವಿರ ಜನ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಹಾಗೂ ಸಹಾಯಕರನ್ನು ನೇರಪಾವತಿಗೊಳಪಡಿಸಲು ಒತ್ತಾಯಿಸಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ತಂಗಡಗಿಯವರಿಗೆ ಟಿ.ಯು.ಸಿ.ಎಲ್ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಮನವಿ ಸಲ್ಲಿಸಿದರು.
ಗಂಗಾವತಿಗೆ ಬರವೀಕ್ಷಣೆಗೆ ಆಗಮಿಸಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಇವರನ್ನು ಪೌರಕಾರ್ಮಿಕರೊಂದಿಗೆ ಭೇಟಿಯಾದ ಭಾರಧ್ವಾಜ್ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಹಾಗೂ ತ್ಯಾಜ್ಯ ಸಾಗಿಸುವ ವಾಹನ ಚಾಲಕರನ್ನು ನೇರಪಾವತಿಗೊಳಪಡಿಸಲು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವರು ಉತ್ತರಿಸಿ ಮುಂದಿನ ಅಧಿವೇಶನದಲ್ಲಿ ಈ ವಿಷಯವನ್ನು ಚರ್ಚಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಸಂಘದ ರಾಜ್ಯ ಕಾರ್ಯದರ್ಶಿ ಕೇಶವ ನಾಯಕ್, ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಪರಶುರಾಮ ಹಾಗೂ ಸಿ.ಪಿ.ಐ.ಎಂ.ಎಲ್ ಮುಖಂಡ ವಿಜಯ್ ದೊರೆರಾಜು ಹಾಗೂ ನೂರಾರು ಜನ ಪೌರಕಾರ್ಮಿಕರು ಉಪಸ್ಥಿತರಿದ್ದರು.