Asharya Colony Residents Call Headmaster to Pay Property Tax
ಯಲಬುರ್ಗಾ.ನ.6.: ಪಟ್ಟಣದ ಬೇವೂರು ರಸ್ತೆ ಹತ್ತಿರದ ಆಶ್ರಯ ಕಾಲೋನಿ ನಿವಾಸಿಗಳು ಪಟ್ಟಣ ಪಂಚಾಯತಗೆ ಆಸ್ತಿ ತೆರಿಗೆ ತುಂಬಿ ಫಾರಂ ನ.3 ಪಡೆಯಲು ಪಪಂ ಮುಖ್ಯಾಧಿಕಾರಿ ನಾಗೇಶ್ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಪತ್ರಿಕಾ ಮಾಧ್ಯಮದವರ ಜೊತೆ ಮಾತನಾಡಿದರು ಆಶ್ರಯ ಕಾಲೋನಿಯಲ್ಲಿ ಸುಮಾರು 400 ನೂರು ಮನೆಗಳಿದ್ದು ಬಡ ವರ್ಗದ ಜನತೆ ವಾಸವಾಗಿದ್ದು ಈ ಆಶ್ರಯ ಕಾಲೋನಿ ಮನೆ ಹಂಚಿಕೆ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು ಈ ವ್ಯಾಜ್ಯ ನ್ಯಾಯಾಲಯದಲ್ಲಿ ಇತ್ಯರ್ಥವಾಗಿ ಕಾಲೋನಿಯಲ್ಲಿ ವಾಸಿಸುವ ಜನತೆಯ ಅನುಕೂಲಕ್ಕಾಗಿ ಪಟ್ಟಣ ಪಂಚಾಯತನಿಂದ ಸೌಲಭ್ಯ ಪಡೆದುಕೊಳ್ಳಲು ಆಯಾ ಆಶ್ರಯ ಮನೆಯ ಫಲಾನುಭವಿಗಳು ಪಟ್ಟಣ ಪಂಚಾಯತಗೆ ತೆರಳಿ ಮಾಹಿತಿ ಪಡೆದು ಆಸ್ತಿ ತೆರಿಗೆ ಭರಿಸುವ ಮೂಲಕ ಫಾರಂ ನ.3 ಉತಾರ ಪ್ರತಿಯನ್ನು ಪಡೆದುಕೊಳ್ಳಲು ಮುಂದಾಗಬೇಕು ಅಂದಾಗ ಪಟ್ಟಣ ಪಂಚಾಯತ್ ನಿಂದ ಎಲ್ಲಾ ಸೌಲಭ್ಯಗಳು ದೊರೆಯಲಿವೆ ಕಾರಣ ಆಶ್ರಯ ಮನೆಯ ಫಲಾನುಭವಿಗಳು ನೇರವಾಗಿ ಪಂಚಾಯತಗೆ ತೆರಳಿ ಸಂಬಂಧಪಟ್ಟ ಆಸ್ತಿ ತೆರಿಗೆ ಅಧಿಕಾರಿಗಳ ಬಳಿ ಬಂದು ಮಾಹಿತಿ ಪಡೆಯಬೇಕು ಎಂದು ಕರೆ ನೀಡಿದರು.