Breaking News

ದೇವದಾಸಿಯರ ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ

Protest demanding various demands of Devadasis

ಜಾಹೀರಾತು

ಗಂಗಾವತಿ: ನಮ್ಮ ದೇಶ ಸ್ವಾತಂತ್ರ‍್ಯ ಪಡೆದು ೭೫ ವರ್ಷ ಕಳೆದರೂ, ಬ್ರಿಟಿಷರ ಕಾಲದಲ್ಲೇ ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ನಿಷೇಧಿಸಿದ್ದರೂ, ಈಗಲೂ ಇದು ಕರ್ನಾಟಕದಲ್ಲಿ ಮುಂದುವರೆದಿರಲು ಒಕ್ಕೂಟ ಹಾಗೂ ರಾಜ್ಯ ಸರಕಾರಗಳ ಉದಾಸೀನ ಹಾಗೂ ನಿರ್ಲಕ್ಷö್ಯವೇ ಪ್ರಮುಖ ಕಾರಣವಾಗಿದೆಯೆಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ವಿಷಾದ ವ್ಯಕ್ತಪಡಿಸಿದೆ.
ದೇವದಾಸಿಯರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ೬ನೇ ನವೆಂಬರ್ ೨೦೨೩ ರಿಂದ ಮೂರು ದಿನಗಳ ಕಾಲ ಬೆಳಿಗ್ಗೆ ೧೦ ರಿಂದ ಸಂಜೆ ೫ ರವರೆಗೆ ತಾ.ಪಂ ಕಛೇರಿ ಮುಂದೆ ಧರಣಿ ನಡೆಸಲು ತೀರ್ಮಾನಿಸಿ ಧರಣಿಯನ್ನು ಪ್ರಾರಂಭಿಸಲಾಯಿತು.
ಕಳೆದ ಎರಡು ದಶಕಗಳಿಂದ ಸಾಮಾಜಿಕ ದೌರ್ಜನ್ಯಕ್ಕೆ ಒಳಗಾದ ದೇವದಾಸಿ ಮಹಿಳೆಯರನ್ನು ಸಂಘಟಿಸಿ, ಈ ದೌರ್ಜನ್ಯದ ದೇವದಾಸಿ ಪದ್ದತಿಯ ವಿರುದ್ದ ದೇವದಾಸಿ ಮಹಿಳೆಯರನ್ನು ಅಣಿ ನೆರೆಸಿ ಸಾಮಾಜಿಕ ಸುಧಾರಣಾ ಚಳುವಳಿಯನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ನಡೆಸುತ್ತಿದೆ. ಈ ನಮ್ಮ ಚಳುವಳಿಗೆ ರಾಜ್ಯ ಹಾಗೂ ಒಕ್ಕೂಟ ಸರಕಾರಗಳು ಅಗತ್ಯ ಪುನರ್ವಸತಿ ಕಾರ್ಯಕ್ರಮಗಳು ಮತ್ತು ಕಾನೂನುಗಳ ಸಹಕಾರ ನೀಡದಿರುವುದು ಅವುಗಳ ನಿರ್ಲಕ್ಷö್ಯಕ್ಕೆ ಹಿಡಿದ ಕೈ ಗನ್ನಡಿಗಳಾಗಿವೆ.
ದಲಿತರ ಜನಸಂಖ್ಯೆಗನುಗುಣವಾದ ಅನುದಾನ ರಾಜ್ಯದಲ್ಲಿ ಪ್ರತಿವರ್ಷ ೩೪ ಸಾವಿರ ಕೋಟಿ ರೂ.ಗಳಷ್ಟು ಹಣವನ್ನು ರಾಜ್ಯ ಬಜೆಟ್‌ನಲ್ಲಿ ನಿಗದಿಪಡಿಸುತ್ತಿದ್ದರೂ ರಾಜ್ಯದಲ್ಲಿರುವ ಒಂದು ಲಕ್ಷ ದೇವದಾಸಿ ಮಹಿಳೆಯರ ಕುಟುಂಬಕ್ಕೆ ಆದ್ಯತೆಯ ಮೇರೆಗೆ ಪ್ರತಿವರ್ಷ ಕನಿಷ್ಠ ೧೦೦೦ ಕೋಟಿ ರೂ ಹಾಗೂ ಸರಕಾರದ ವಶದಲ್ಲಿರುವ ದಶ ಲಕ್ಷಾಂತರ ಜಮೀನಿನಲ್ಲಿ ತಲಾ ಐದು ಎಕರೆ ನೀರಾವರಿ ಜಮೀನು ಒದಗಿಸುವ ಮೂಲಕ ಅವರ ಕುಟುಂಬಗಳನ್ನು ಸ್ವಾವಲಂಬಿಯಾಗಿಸಲು ಕ್ರಮವಹಿಸುವಂತೆ ನಾವು ಒತ್ತಾಯಿಸುತ್ತಾ ಬಂದರೂ ಸರಕಾರಗಳು ಕಿವಿಯ ಮೇಲೆ ಹಾಕಿಕೊಳ್ಳದಿರುವುದು ವಿಷಾಧಕರವಾಗಿದೆ.
ಒಂದು ಲಕ್ಷ ಕೋಟಿ ರೂ ಬಂಡವಾಳ ಹೂಡುವುದಾಗಿ ಹೇಳುವ ಕಂಪನಿಗಳಿಗೆ ಶೇ ೩೦ ರಷ್ಠು ಅಂದರೇ, ಮುವ್ವತ್ತು ಸಾವಿರ ಕೋಟಿ ರೂ ಸಬ್ಸಿಡಿ ನೀಡಲು ತಯಾರಿರುವ ಸರಕಾರ ದೇವದಾಸಿ ಮಹಿಳೆಯರ ಸಾಲ ಸೌಲಭ್ಯಕ್ಕೆ ಕೇವಲ ಮೂವತ್ತು ಸಾವಿರ ನೀಡುತ್ತಿದೆ. ಈ ಹಣದಲ್ಲಿ ಅವರು ಸ್ವಾವಲಂಬಿಯಾಗಬೇಕೆAದು ಬಯಸುವುದು ಸರಕಾರದ ನೀತಿ ಕುಹಕವಾಗಿದೆ. ಮೇಲಾಗಿ ಬ್ಯಾಂಕುಗಳು ಈ ಲೂಟಿಕೋರ ಕಂಪನಿಗಳಿಗೆ ಲಕ್ಷಾಂತರ ಕೋಟಿ ರೂ ಸಾಲವನ್ನು ಸರಕಾರಗಳ ಗ್ಯಾರಂಟಿಯ ಮೇಲೆ ಒದಗಿಸುತ್ತವೆ. ಆದರೇ ದೇವದಾಸಿ ಮಹಿಳೆಯರಿಗೆ ಸಾಲ ನೀಡುವುದೇ ಇಲ್ಲ.
ನಮ್ಮ ಹೋರಾಟದ ಫಲವಾಗಿ ಮಹಿಳೆಯರಿಗೆ ಮಾಸಿಕ ಸಹಾಯಧನ ಅಥವಾ ಪಿಂಚಣಿಯನ್ನು ತಲಾ ಹದಿನೈದುನೂರು ನೀಡುತ್ತಿರುವರಾದರೂ ಅದರಲ್ಲಿ ಸಾವಿರಾರು ಮಹಿಳೆಯರಿಗೆ ಪ್ರತಿ ತಿಂಗಳು ಹಣ ಹಾಕದೇ ವಂಚಿಸಲಾಗುತ್ತಿದೆ. ದೇವದಾಸಿ ಮಹಿಳೆಯರ ಮಕ್ಕಳ ಮದುವೆಯ ಪ್ರೋತ್ಸಾಹ ಧನ ನೀಡಿಕೆಯಲ್ಲು ಭ್ರಷ್ಟಾಚಾರ ಹಾಗೂ ವಂಚನೆಗಳು ನಡೆಯುತ್ತಿವೆ.
ಕೆ.ಡಿ.ಪಿ ಸಭೆಗೆಂದು ತಾ.ಪಂ ಕಛೇರಿಗೆ ಬಂದ ಸಚಿವ ಶಿವರಾಜ ತಂಗಡಗಿಯವರು ನಮ್ಮ ದೇವದಾಸಿಯವರ ಸಮಸ್ಯೆಗಳ ಬಗ್ಗೆ ಮನವಿ ಸ್ವೀಕರಿಸಿ ಶೀಘ್ರದಲ್ಲಿ ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ಈಡೇರಿಸುವುದಾಗಿ ಭರವಸೆ ನೀಡಿದರು.
ಆದಾಗ್ಯೂ ನಮ್ಮ ಸಂಘದ ಮುಖಂಡತ್ವದ ಜೊತೆ ಸರ್ಕಾರ ಮಾತುಕತೆ ನಡೆಸಿ ಕೆಳಕಂಡ ಹಕ್ಕೊತ್ತಾಯಗಳನ್ನು ಒದಗಿಸುವಂತೆ ಅನಿರ್ಧಿಷ್ಠ ಧರಣಿಯನ್ನು ಮುಂದುವರೆಸಿದ್ದೇವೆ ಎಂದು ತಿಳಿಸಿದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.