19th annual trek to Sri Male Mahadeshwar Hill started..

ಹನೂರು ಸದ್ಭಾವ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ 19ನೇ ವರ್ಷದ ಪಾದಯಾತ್ರೆಗೆ ಚಾಲನೆ.. ಅಧ್ಯಕ್ಷ ಗಂಗಣ್ಣ
ಹನೂರು: ಪಟ್ಟಣದ ಬನ್ನಿಮರ ಬೀದಿಯಿಂದ ಪ್ರಾರಂಭವಾಗಿ ವಿವಿಧ ಬಡಾವಣೆಯ ಭಕ್ತರೆಲ್ಲರು ಅನ್ನಪೂರ್ಣೇಶ್ವರಿ ಹೋಟೆಲ್ ಅತ್ತಿರ ಒಟ್ಟುಗೂಡಿ ಅಲ್ಲಿಂದ ಪಾದಯಾತ್ರೆಯನ್ನು ಪ್ರಾರಂಭಿಸಿ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ತೆರಳಿದರು ಎಲ್ಲಾರಲ್ಲು ನಾವು ಒಬ್ಬರಾಗಿ ದೆವರ ಕೃಪೆಗೆ ಪಾತ್ರರಾಗೊಣವೆಂದು ಸದ್ಭಾವ ಸೇವಾ ಸಮಿತಿಯ ಅಧ್ಯಕ್ಷ ಗಂಗಾಧರ್ ತಿಳಿಸಿದರು.
ಹನೂರು ಪಟ್ಟಣದಲ್ಲಿ ಭಕ್ತರ ಸೇವೆ ಮಾಡಲೆಂದೆ ಭಕ್ತರಿಂದ ಭಕ್ತರಿಗಾಗಿ ರಚಿಸಿರುವ ನಮ್ಮ
ಸದ್ಭಾವ ಸೇವಾ ಸಮಿತಿ ವತಿಯಿಂದ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ 19ನೇ ವರ್ಷದ ಪಾದಯಾತ್ರೆಯನ್ನು ಬೆಳೆಸಿದ್ದೆವೆ ಎಲ್ಲಾರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂಬುದೆ ನಮ್ಮ ಆಸೆ ಎಂದು ಸಮಿತಿಯ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದರು. ನಂತರ ಮಾತನಾಡಿದ ಅವರು ಕಳೆದ 19 ವರ್ಷಗಳಿಂದ ಬೆರಳೆಣಿಕೆಯಷ್ಟು ಜನರಿಂದ ಮಾತ್ರ ಪಾದಯಾತ್ರೆ ಕಾರ್ಯಕ್ರಮ ನಡೆಯುತ್ತಿದ್ದು ಕಳೆದ ಎರಡು ಮೂರು ನಾಲ್ಕು ವರ್ಷಗಳಿಂದ 2000ಕ್ಕೂ ಅಧಿಕ ಭಕ್ತರು ಪಾದಯಾತ್ರೆಗೆ ಆಗಮಿಸುತ್ತಿದ್ದು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರಿದಂತೆ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಸಂತಸ ತಂದಿದೆ ಎಂದರು .
ಖರ್ಚುವೆಚ್ಚವನ್ನು ಹನೂರಿನ ಹಲವು ಮುಖಂಡರುಗಳು ಸೇರಿದಂತೆ ಹಲವು ಭಕ್ತರುಗಳು ಸ್ವಯಂ ಪ್ರೇರಿತರಾಗಿ ಮುಂದು ಬರುತ್ತಿದ್ದು ಪಾದಯಾತ್ರೆಗೆ ತೆರಳುವ ಪ್ರತಿಯೊಬ್ಬರೂ ಹಸಿವಿನಿಂದ ಬಳಲಬಾರದು ಎಂದು ಸಹಾಯ ಮಾಡುವ ಎಲ್ಲಾರಿಗೂ ಮಾದಪ್ಪ ಒಳಿತುಮಾಡಲಿ ಎಂದು ಸಮಿತಿಯವರು ತಿಳಿಸಿದರು .ಹಾಗೂ ಕಾರ್ಯಕ್ರಮ ಮುಗಿದ ನಂತರ ಉಳಿದ ಹಣವನ್ನು ಯಾವುದೇ ರೀತಿಯ ದುರ್ಬಳಕೆ ಮಾಡಿಕೊಳ್ಳದೆ ಸದ್ಭಾವ ಸೇವಾ ಸಮಿತಿ ಟ್ರಸ್ಟ್ ನ ಖಾತೆಯಲ್ಲಿ ಇರಿಸಲಾಗುತ್ತದೆ.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಶಂಕರ್, ಕಾರ್ಯದರ್ಶಿ,ಖಜಾಂಜಿ ನಾರಾಯಣ್, ಸಮಿತಿಯ ಪದಾಧಿಕಾರಿಗಳು ಗುತ್ತಿಗೆದಾರಾದ ನಿಂಗಣ್ಣ, ಹಾಗೂ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದಾರೆ.
Kalyanasiri Kannada News Live 24×7 | News Karnataka