Breaking News

ಯಲಬುರ್ಗಾ: ಇಂದಿನಿಂದ ವಿವಿಧ ಗ್ರಾಮಗಳಲ್ಲಿ ಜನಪದ ಸಂಗೀತ

Yalaburga: Folk music in different villages from today

ಜಾಹೀರಾತು

ಕೊಪ್ಪಳ ಅಕ್ಟೋಬರ್ 16 (ಕ.ವಾ.): ಸರ್ಕಾರದ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಪ್ಪಳ ಇವರಿಂದ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜನಪದ ಸಂಗೀತದ ಮೂಲಕ ಜನ ಜಾಗೃತಿ ಕಾರ್ಯಕ್ರಮಗಳು ಅಕ್ಟೋಬರ್ 17 ರಿಂದ ಅಕ್ಟೋಬರ್ 29ರವರೆಗೆ ನಡೆಯಲಿವೆ.
ಪ್ರತಿ ದಿನ ಎರಡು ಗ್ರಾಮಗಳಂತೆ ಒಟ್ಟು ಹತ್ತು ದಿನಗಳ ಕಾಲ 20 ಗ್ರಾಮಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕುಷ್ಟಗಿ ತಾಲೂಕಿನ ಕಲ್ಪತರು ಸಾಂಸ್ಕೃತಿಕ ಯುವಕ ಸಂಘದ ಕಲಾವಿದರಿಂದ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಆಯಾ ಗ್ರಾಮಸ್ಥರು ಸಹಕಾರ ನೀಡಲು ಜಿಲ್ಲಾ ವಾರ್ತಾಧಿಕಾರಿಗಳಾದ ಗವಿಸಿದ್ದಪ್ಪ ಹೊಸಮನಿ ಅವರು ಮನವಿ ಮಾಡಿದ್ದಾರೆ.
ಕಾರ್ಯಕ್ರಮ ವೇಳಾಪಟ್ಟಿ: ಅಕ್ಟೋಬರ್ 17ರಂದು ಮುಧೋಳ ಮತ್ತು ಹಿರೇಮ್ಯಾಗೇರಿ, ಅಕ್ಟೋಬರ್ 18ರಂದು ಸಿರಗುಂಪಿ ಮತ್ತು ಸಂಕನೂರ, ಅಕ್ಟೋಬರ್ 19ರಂದು ಬಸಾಪುರ ಮತ್ತು ಬಂಡಿ, ಅಕ್ಟೋಬರ್ 20ರಂದು ಹೊಸಳ್ಳಿ ಮತ್ತು ಕರಮುಡಿ, ಅಕ್ಟೋಬರ್ 21ರಂದು ಬುಡಕುಂಟಿ ಮತ್ತು ತುಮ್ಮರಗುದ್ದಿ, ಅಕ್ಟೋಬರ್ 25ರಂದು ಬುಕ್ಕನಟ್ಟಿ ಮತ್ತು ಕಲ್ಲಬಾವಿ, ಅಕ್ಟೋಬರ್ 26ರಂದು ಹೊಸೂರ ಮತ್ತು ಮಕ್ಕಳ್ಳಿ, ಅಕ್ಟೋಬರ್ 27ರಂದು ಕೋಳಿಹಾಳ ಮತ್ತು ಚಿಕ್ಕಮ್ಯಾಗೇರಿ, ಅಕ್ಟೋಬರ್ 28ರಂದು ಯಪಲದಿನ್ನಿ ಮತ್ತು ಗದ್ದಿಗೇರಿ ಹಾಗೂ ಅಕ್ಟೋಬರ್ 29ರಂದು ತಿಪ್ಪನಾಳ ಮತ್ತು ವಜ್ರಬಂಡಿ ಗ್ರಾಮಗಳಲ್ಲಿ ಜನ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯ ಪ್ರಕಟಣೆ ತಿಳಿಸಿದೆ.

About Mallikarjun

Check Also

1001883611

ಗಿಣಿಗೇರಾ ಜಾನುವಾರು ಸಂತೆಯಲ್ಲಿ ವ್ಯಾಪಾವಿಲ್ಲದೆ ದನಕರುಗಳಿಗೆ ನೀರು ಮೇವಿಲ್ಲದೆ ಪರದಾಟ

Cattle are stranded without water or fodder at the Ginigera cattle fair due to lack …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.