ಜಮಖಂಡಿ: ಬಾಗಲಕೋಟೆ ಜಿಲ್ಲೆಯಲ್ಲಿ ಪಡಿತರ ಚೀಟಿ ತಿದ್ದುಪಡಿ ಪ್ರಕ್ರಿಯೆಯು ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು ತಕ್ಷಣ ಜಿಲ್ಲಾಧಿಕಾರಿಗಳು ಪಡಿತರ ಚೀಟಿ ಪ್ರಕ್ರಿಯೆಯನ್ನು ಸರಿಗೊಳಿಸಿ ಸಾರ್ವಜನಿಕರಿಗೆ ನ್ಯಾಯ ಸಿಗುವಂತೆ ಮಾಡದೆ ಹೋದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ದಸಂಸ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ ಎಚ್ಚರಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳು ಬಿಪಿಎಲ್ ಕಾರ್ಡನಲ್ಲಿ ಸಕಾಲದಲ್ಲಿ ಸೇರ್ಪಡೆ ಮಾಡಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಜನರು ಚಿಕಿತ್ಸೆ ಹಣ ಕಟ್ಟಲಾಗದೆ ಪ್ರಾಣ ಕಳೆದುಕೊಳ್ಳುವ ಜನರ ಸಂಖ್ಯೆ ಹೆಚ್ಚಾಗಿದೆ.
ಕುಟುಂಬಗಳು ವಿಭಜನೆಯಾದ ನಂತರ ಅವರವರ ಹೆಸರುಗಳನ್ನು ಬೇರ್ಪಡಿಸಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಕುಟುಂಬಗಳಲ್ಲಿ ಜಗಳಗಳು ಹೆಚ್ಚಾಗತೊಡಗಿದೆ…
ಸರಕಾರ ಪಡಿತರ ಚೀಟಿ ತಿದ್ದುಪಡೆಗೆ ಕೇವಲ 3 ದಿನ ಅವಕಾಶ ಮಾಡಿಕೊಟ್ಟರು ಸಹ ಎಷ್ಟೋ ಜನರಿಗೆ ಇದರ ಮಾಹಿತಿಯೇ ದೊರೆತಿರುವುದಿಲ್ಲ, ಮಾಹಿತಿ ತಿಳಿದ ಕೆಲವೊಂದು ಜನರಿಗೆ ಮಾತ್ರ ಅದರಲ್ಲಿಯೂ ಕೆಲವೇ ಜನರಿಗೆ ಇದರಿಂದ ಉಪಯೋಗವಾಗಿದೆ..
ದಿನಾಂಕ 8/10/2023 ರಿಂದ 10/10/2023 ರ ವರೆಗೆ ನಿಗದಿಪಡಿಸಿದ್ದರು ಕೂಡ ಸರ್ವರ ಸಮಸ್ಯೆಯಿಂದ ಇಲಾಖೆಯ ಸಿಬ್ಬಂದಿಗಳು ತೊಂದರೆ ಪಡೆಯುವುದಲ್ಲದೆ ಸಾರ್ವಜನಿಕರು ತಿದ್ದುಪಡಿಗಾಗಿ ದಿನಪೂರ್ತಿಯಾಗಿ ಪಾಳೆಹಚ್ಚಿ ಕಾಯ್ದು ಕುಳಿತರೂ ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗದೆ ನಿರಾಸೆಯಿಂದ ಜನ ಮರಳಿ ಮನೆಗೆ ತೆರಳುವಂತಾಗಿದೆ.
ಸಾರ್ವಜನಿಕರಿಗೆ ಸರಕಾರಿ ಸೌಲಭ್ಯ ಪಡೆಯಲು ಪಡಿತರ ಚೀಟಿ ಅಪ್ಡೇಟ್ ಅವಶ್ಯವಾಗಿದ್ದು ಅದು ಈಗ ಸಾಧ್ಯವಾಗದೆ ಇರುವುದರಿಂದ ಕುಟುಂಬಗಳ ಹೆಣ್ಣು ಮಕ್ಕಳ ಮಧ್ಯೆ ಮನಸ್ತಾಪವಾಗಿರುವ ಪರಿಸ್ಥಿತಿಗಳು ಆಯಾ ಹಳ್ಳಿಗಳಲ್ಲಿ ಮತ್ತು ನಗರಗಳಲ್ಲಿ ಕಂಡುಬಂದಿವೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟೋ ಜನರು ಪಿಂಚಣಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸದೆ ಹಾಗೆ ಉಳಿದುಕೊಂಡಿದ್ದು ಪಿಂಚಣಿ ಯೋಜನೆಯಿಂದ ವಂಚನೆಗೊಳಪಟ್ಟಿದ್ದು, ಒಟ್ಟಾರೆ ಸರಕಾರದ ಯೋಜನೆಗಳಿಂದ ಸಾರ್ವಜನಿಕರು ವಂಚಿತರಾಗುತ್ತಿದ್ದಾರೆ.
ಜಿಲ್ಲೆಯಲ್ಲಿನ ಜನರ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳದೆ ಹೋದರೆ, ಜನ ಬೀದಿಗಳಿದು ಹೋರಾಟ ಮಾಡುವ ಮುನ್ನ ಮಾನ್ಯ ಜಿಲ್ಲಾಧಿಕಾರಿಗಳು ಈ ಕುರಿತು ಸರಕಾರದ ಗಮನಕ್ಕೆ ತಂದು ಪಡಿತರ ತಿದ್ದುಪಡಿ ಕಾರ್ಯವನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು.
ಈ ಮನವಿಗೆ ಶೀಘ್ರವಾಗಿ ಸ್ಪಂದಿಸಲು ರಾಜ್ಯ ಸಂಚಾಲಕ ರಾಜು ಮೇಲಿನಕೇರಿ, ದಲಿತ ಧುರೀಣ ರವಿ ಬಬಲೇಶ್ವರ, ತಾಲೂಕ ಸಂಚಾಲಕ ವಕೀಲರಾದ ವಕೀಲ ದೊಡಮನಿ, ಸದಾಶಿವ ದೊಡಮನಿ, ಪುಂಡಲಿಕ ಕಾಂಬಳೆ ಮುಂತಾದವರು ಜಿಲ್ಲಾ ಆಡಳಿತಕ್ಕೆ ಎಚ್ಚರಿಸಿದ್ದಾರ.