Breaking News

ಶಾಲಾ ಮಕ್ಕಳಿಗಾಗಿ ಆರ್ಥಿಕ ಸಾಕ್ಷರತೆಯ ಪ್ರಾಮುಖ್ಯತೆ ಅವಶ್ಯ- ಟಿ.ಆಂಜನೇಯಆರ್ಥಿಕ ಸಾಕ್ಷರತಾ ಸಲಹೆಗಾರರು

Importance of Financial Literacy for School Children – T. Anjaneya Financial Literacy Advisor

ಜಾಹೀರಾತು

Screenshot 2023 10 12 08 02 14 83 6012fa4d4ddec268fc5c7112cbb265e7 300x181
  ಗಂಗಾವತಿ, ಆರ್ಥಿಕ ಸಾಕ್ಷರತೆ ಇಂದು ಅತ್ಯಗತ್ಯವಾಗಿದೆ. ಶಾಲಾ ಮಕ್ಕಳು ಪಠ್ಯಕ್ರಮದ ಜೊತೆಗೆ ಆರ್ಥಿಕ ಸಾಕ್ಷರತೆ ಹೊಂದುವುದು ಅವಶ್ಯವಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಟಿ. ಆಂಜನೇಯವರು ಇಂದು ಹಣವಾಳ ಸರಕಾರಿ ಪ್ರೌಢಶಾಲೆಯ ಮಕ್ಕಳ ಸಾಕ್ಷರತಾ ಶಿಬಿರದಲ್ಲಿ ಮಾತನಾಡಿದರು*
   *ಭಾರತೀಯ ರಿಸರ್ವ್ ಬ್ಯಾಂಕಿನ ಸೂಚನೆಯಂತೆ ಶಾಲಾ ಮಕ್ಕಳಲ್ಲಿ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಅರಿವು ಮೂಡಿಸುವುದು, ವಿದ್ಯಾರ್ಥಿಗಳಿಗೆ ವಿಶ್ಲೇಷಣೆ, ಚಿಂತಿಸುವ ಮನೋಭಾವ ಬೆಳೆಸುವುದು.ದೇಶದ ಆರ್ಥಿಕ ವ್ಯವಸ್ಥೆ ಬಗ್ಗೆ ಅರಿವು ಮೂಡಿಸುವುದು. ವಿದ್ಯಾರ್ಥಿಗಳಲ್ಲಿ ಸಹಕಾರ ಮನೋಭಾವ ಗುಂಪು ಚರ್ಚೆ ನಡೆಸುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ*

ಹಣ ನಿರ್ವಹಣೆ ಒಂದು ಕೌಶಲ್ಯ ,ಅದನ್ನು ಶಿಕ್ಷಣದ ಮೂಲಕ ಪಡೆಯುವುದು, ಬದುಕಿನ ಆರಂಭಿಕ ಹಂತದಲ್ಲಿ ಆರ್ಥಿಕತೆಯ ಮಾಹಿತಿಗಳನ್ನು ತಿಳಿಸಲಾಗುವುದು. ಠೇವಣಿ, ಉಳಿತಾಯ, ಬ್ಯಾಂಕ್ ಸೇವೆಗಳು ಮುಂದೆ ಶಾಲಾ ಮಕ್ಕಳಿಗೆ ಶೈಕ್ಷಣಿಕ ಸಾಲ ಯೋಜನೆ ಮತ್ತು ಹಣದ ನಿರ್ವಹಣೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಮಾರ್ಗದರ್ಶನಗಳನ್ನು ಈ ಶಿಬಿರದಲ್ಲಿ ನೀಡಲಾಯಿತು
ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಾಗಿ ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸುವ ಯೋಜನೆಗಳನ್ನು ಎಲ್ಲಾ ಶಾಲಾ ಮಕ್ಕಳು,ಗ್ರಾಹಕರು ಇನ್ನಿತರರಿಗೆ ಕ್ಯಾಶ್ ಲೆಸ್ ವ್ಯವಹಾರದ ಮೂಲಕ ವ್ಯವಹರಿಸವ ಮಾಹಿತಿ ನೀಡಲು ಈ ಶಿಬಿರಗಳು ಮಹತ್ವವಾಗಿವೆ
ಎಲ್ಲಾ ಗ್ರಾಹಕರಿಗೆ ಇವುಗಳ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುತ್ತಿದ್ದೇವೆ ಎಂದು ಶಿಬಿರದಲ್ಲಿ ತಿಳಿಸಿದರು
ಮುಖ್ಯ ಗುರುಗಳಾದ ಅಸ್ಲಾಂ ಖಾನ್ ರವರು ಎಸ್‌.ಬಿ.ಐ. ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಟಿ. ಆಂಜನೇಯರವರು ನಮ್ಮ ಶಾಲಾ ಮಕ್ಕಳಿಗೆ ಬ್ಯಾಂಕಿನ ಮಾಹಿತಿ ವಿವಿಧ ಠೇವಣಿಗಳ ಯೋಜನೆ, ಸಾಲ ಸೌಲಭ್ಯಗಳು ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಮಕ್ಕಳಿಗೆ ಭವಿಷ್ಯದ ಉಳಿತಾಯದ ಬಗ್ಗೆ ಉತ್ತಮ ಮಾರ್ಗದರ್ಶನ ನೀಡಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು
ಈ ಶಿಬಿರದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಕೆ.ವಿರೇಶಪ್ಪ, ಸುರೇಶ ಮತ್ತು ಬಸವರಾಜ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು🙏

About Mallikarjun

Check Also

ಉಪ ಲೋಕಾಯುಕ್ತರಿಂದ ಅ.30, 31 ರಂದು ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ

Public inquiry reception program by the Deputy Lokayukta on October 30th and 31st ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.