Today’s mass communication campaign

ಗಂಗಾವತಿ: ಪ್ರಶಾಂತ ನಗರದ ಇಲಾಹಿ ಕಾಲೋನಿಯ ಬಿಎಡ್ ಕಾಲೇಜಿನಲ್ಲಿ ಅಂಚೆ ಇಲಾಖೆ ಗದಗ ವಿಭಾಗ ಹಾಗು ಗಂಗಾವತಿ ಉಪವಿಭಾಗದ ವಿಭಾಗದ ಸಹಯೋಗದೊಂದಿಗೆ ನಾಳೆ ಅಕ್ಟೋಬರ್ -೦೫ ಬೆಳಗ್ಗೆ ೧೦-೩೦ ಅಂಚೆ ಜನ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಶಾಸಕರಾದ ಗಾಲಿ ಜನಾರ್ದನರೆಡ್ಡಿ ಉದ್ಘಾಟಿಸುವರು, ಗದಗ ವಿಭಾಗ ಅಂಚೆ ಅಧೀಕ್ಷರಾದ ನಿಂಗನಗೌಡ ಭಂಗಿಗೌಡ್ರು ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಪರಣ್ಣ ಮುನವಳ್ಳಿ, ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಕೆ.ಸಿ. ಕುಲಕರ್ಣಿ ಹಾಗು ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಜಿ.ಶ್ರೀಧರ ಕೆಸರಹಟ್ಟಿ ಪಾಲ್ಗೊಳ್ಳುವರು. ಗಂಗಾವತಿ ಉಪವಿಭಾಗದ ಅಂಚೆ ನಿರೀಕ್ಷಿಕ ಸೋಮಶೇಖರ್ ಎಸ್ ಮುದಗಲಿ ನಿರ್ವಹಿಸುವರು.