Swachhta Hi Seva, Shramadana for cleanliness: MPs, officials involved

ಕೊಪ್ಪಳ ಅಕ್ಟೋಬರ್ 01 (ಕರ್ನಾಟಕ ವಾರ್ತೆ): ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 154ನೇ ಜನ್ಮ ದಿನಾಚರಣೆ ನಿಮಿತ್ತ ವಿವಿಧ ಇಲಾಖೆಗಳು, ಲೀಡ್ ಬ್ಯಾಂಕ್ ಮತ್ತು ನಗರಸಭೆ ಸಹಯೋಗದೊಂದಿಗೆ ಕೊಪ್ಪಳ ನಗರದ ಅಂಬಿಗರ ಚೌಡಯ್ಯ ಪಾರ್ಕಿನಲ್ಲಿ ಅಕ್ಟೋಬರ್ 01ರಂದು ಸ್ವಚ್ಛತಾ ಹೀ ಸೇವಾ ಹಾಗೂ ಸ್ವಚ್ಛತೆಗಾಗಿ ಶ್ರಮದಾನ ಕಾರ್ಯಕ್ರಮ ನಡೆಯಿತು.
ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ಪಾಲ್ಗೊಂಡು ಸ್ವಚ್ಛತಾ ಶ್ರಮದಾನ ಮಾಡಿದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರಾದ ಗಣಪತಿ ಪಾಟೀಲ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ವಿವಿಧ ಇಲಾಖೆಗಳು, ಬ್ಯಾಂಕಿನ ಸಿಬ್ಬಂದಿ, ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
