Applications invited for the award of ‘Great Farmer-Comprehensive Farming System’
ಕೊಪ್ಪಳ ಸೆಪ್ಟೆಂಬರ್ 29 (ಕರ್ನಾಟಕ ವಾರ್ತೆ): ಜಂಟಿ ಕಾರ್ಯದರ್ಶಿ, ಅಲುಮಿನಿ ಅಸೋಶಿಯೆಷನ್, ಕೃಷಿ ವಿಶ್ವ ವಿದ್ಯಾಲಯ, ಹೆಬ್ಬಾಳ, ಬೆಂಗಳೂರು ಇವರಿಂದ ಕರ್ನಾಟಕ ರಾಜ್ಯದಲ್ಲಿ ಸುಸ್ಥಿರ ಕೃಷಿಯ ಬೆಳವಣಿಗಾಗಿ “ಸಮಗ್ರ ಕೃಷಿ ಪದ್ಧತಿ’’ ಯನ್ನು ಉತ್ತೇಜಿಸುವ ಸಲುವಾಗಿ 2023-24ನೇ ಸಾಲಿಗೆ ಶ್ರೇಷ್ಠ ಕೃಷಿಕ-ಸಮಗ್ರ ಕೃಷಿ ಪದ್ಧತಿ’ ಪ್ರಶಸ್ತಿಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಅರ್ಹ ರೈತರು, ಅಲುಮಿನಿ ಅಸೋಶಿಯೆಷನ್, ಕೃಷಿ ವಿಶ್ವ ವಿದ್ಯಾಲಯ, ಹೆಬ್ಬಾಳ, ಬೆಂಗಳೂರು ರವರು ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಕಾರ್ಯದರ್ಶಿಗಳು, ಅಲುಮಿನಿ ಅಸೋಶಿಯೆಷನ್, ಯುಎಎಸ್ ಕನ್ವೆನ್‌ಶನ್ ಸೆಂಟರ್, ಹೆಬ್ಬಾಳ, ಬೆಂಗಳೂರು-560024, ಇಲ್ಲಿಗೆ ಅಕ್ಟೋಬರ್ 15ರ ಒಳಗೆ ಸಲ್ಲಿಸಬಹುದಾಗಿದೆ. ಪ್ರಶಸ್ತಿಯ ಮೊತ್ತವು 25,000 ರೂ.ಗಳು ಇರುತ್ತದೆ.
ಅರ್ಜಿ ನಮೂನೆಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದಾಗಿದೆ. ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka
