Tipaturu – Distribution of learning materials to school children by Rotary organization.
ತಾಲೂಕಿನ ಎಸ್ ಲಕ್ಕಿಹಳ್ಳಿ ಸರ್ಕಾರಿ ಶಾಲೆ ಹಾಗೂ ಕೋಟನಾಯಕನಹಳ್ಳಿ ಸರ್ಕಾರಿ ಶಾಲೆಯ 150ಕ್ಕೂ ಅಧಿಕ ಮಕ್ಕಳಿಗೆ ತಿಪಟೂರು ರೋಟರಿ ಸಂಸ್ಥೆಯ ಅಧ್ಯಕ್ಷ ಕೃಷ್ಣಪ್ರಸಾದ್ ಹಾಗೂ ಕಾರ್ಯದರ್ಶಿ ಶ್ರೀಮತಿ ವನಿತಾ ಪ್ರಸನ್ನ ಹಾಗೂ ತಿಪಟೂರು ರೋಟರಿ ಸಂಸ್ಥೆಯ ಸದಸ್ಯರುಗಳು ಸೇರಿ 150ಕ್ಕೂ ಅಧಿಕ ಮಕ್ಕಳಿಗೆ ಉಚಿತವಾಗಿ ಬ್ಯಾಗ್ಗಳು ವಾಟರ್ ಬಾಟಲ್ ಗಳು ಪುಸ್ತಕಗಳು ಪೆನ್ಸಿಲ್ ಕೋಶ ಪುಸ್ತಕಗಳನ್ನು ವಿತರಿಸಲಾಯಿತು.
ಈ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕೃಷ್ಣಪ್ರಸಾದ್
64 ವರ್ಷದ ಇತಿಹಾಸ ಉಳ್ಳ ತಿಪಟೂರು ರೋಟರಿ ಸಂಸ್ಥೆ ಉತ್ತಮವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು ಇದೇ ರೀತಿ ಹಲವಾರು ಪ್ರಾಯೋಗಿಕ ಸೇವಾ ಕಾರ್ಯಕ್ರಮ ಗಳನ್ನು ಮಾಡುತ್ತಾ ಬರುತ್ತಿದೆ.
ಉದಾಹರಣೆಗೆ ರಕ್ತದಾನ ಶಿಬಿರ, ಅರೋಗ್ಯ ತಪಾಸಣೆ ಹಾಗೂ ಉಚಿತ ನೇತ್ರಾತಪಾಸಣೆ ಮತ್ತು ಕೆಲ ಶಾಲಾ ಮಕ್ಕಳಿಗೆ ಹಾಗೂ ವಯೋರುದ್ಧರಿಗೆ ಕಣ್ಣುಗಳನ್ನು ತಪಾಸಣೆ ಮಾಡಿ ಸ್ಥಳದಲ್ಲಿಯೇ ಕನ್ನಡಕಗಳನ್ನು ವಿತರಿಸುವ ಕೆಲಸ ಹೀಗೆ ಇನ್ನೂ ಅನೇಕ ಹತ್ತು ಹಲವು ಕಾರ್ಯಕ್ರಮಗಳನ್ನು ತಿಪಟೂರು ರೋಟರಿ ಸಂಸ್ಥೆ ಮಾಡುತ್ತಿದೆ ಅದರಲ್ಲಿ ಇದು ಒಂದು ಹೆಜ್ಜೆ ಹಾಗೂ ಅಕ್ಟೊಬರ್ ಎರಡನೇ ತಾರೀಕು ಪ್ರತಿವರ್ಷದಂತೆ ಈ ವರ್ಷವೂ 12ನೇ ವರ್ಷದ ತಿಪಟೂರಿನ 5 ಎಕರೆಯ ರುದ್ರಭೂಮಿ ಸ್ವಚ್ಛತಾ ಕಾರ್ಯಕ್ರಮವನ್ನು 150 ಶ್ರಮದಾನಿ ಗಳೊಂದಿಗೆ ಸಹ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಶಾಲಾ ಮುಖ್ಯಸ್ಥರು ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.