Talents should be given a platform through cultural Ganeshotsavam
ಗಂಗಾವತಿ: ಸಾಂಸ್ಕೃತಿಕ ಗಣೇಶೋತ್ಸವದ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವಂತೆ ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಹೇಳಿದರು.
ಅವರು ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಕಿಷ್ಕಿಂಧಾ ಗಣೇಶೋತ್ಸವ ಸಮಿತಿ ಹಮ್ಮಿಕೊಂಡಿದ್ದ ಸಂಗೀತ ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಸಕ ಗಾಲಿ ಜನಾರ್ದನರೆಡ್ಡಿ ಇದೇ ಪ್ರಥಮ ಭಾರಿಗೆ ಗಾಂಧಿ ವೃತ್ತದ ಬಳಿ ಬೃಹತ್ ಗಣೇಶನ ಪ್ರತಿಷ್ಠಾಪಿಸಿ ತಿರುಪತಿ ವೈಕುಂಠ ಮಾದರಿಯಲ್ಲಿ ಟೆಂಟ್ ನಿರ್ಮಿಸಿ ಇದರಲ್ಲಿ ಗಣೇಶ-ವೆಂಕಟರಮಣನನ್ನು ಪ್ರತಿಷ್ಠಾಪಿಸಿರುವುದು ವಿಶೇಷವಾಗಿದೆ. ನಿತ್ಯವೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ಥಳೀಯರಿಗೆ ಮತ್ತು ಅನ್ಯ ಊರುಗಳಿಂದ ಕಲಾವಿದರನ್ನು ಆಹ್ವಾನಿಸುವ ಮೂಲಕ ಗಣೇಶೋತ್ಸವದ ವೈಭವ ಹೆಚ್ಚು ಮಾಡಿದ್ದಾರೆ. ಧರ್ಮ ಉಳಿಯಲು ಕಲೆ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗಣೇಶೋತ್ಸವ ಆಚರಣೆ ಮಾಡಬೇಕು. ಡಿಜೆ ಪದ್ಧತಿಯಿಂದಾಗಿ ಕಲೆಗಳು ಮರೆಯಾಗುತ್ತಿವೆ. ಗಣೇಶನ ಪ್ರತಿಷ್ಠಾಪಿಸುವ ಸ್ಥಳದಲ್ಲಿ ನೃತ್ಯ, ಕಲೆ, ಸಾಹಿತ್ಯ, ಪ್ರಬಂಧ, ರಂಗೋಲಿ ಸ್ಪರ್ಧೆಯಂತಹ ವೈಶಿಷ್ಠö್ಯಪೂರ್ಣ ಕಾರ್ಯ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಕರೋಕೆ ಹಾಡುಗಾರರಾದ ಪರಶುರಾಮ ದೇವರಮನೆ, ಶಂಭಣ್ಣ ದೊಡ್ಮನಿ ಸೇರಿ ಹಲವು ಕಲಾವಿದರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪತ್ರಕರ್ತ ಎಸ್.ಎಂ.ಪಟೇಲ್, ವೆಂಕಟೇಶ ಧೂಳ್, ತಿಪ್ಪೇಸ್ವಾಮಿ, ಟಿ.ನಬಿಸಾಬ, ಸತ್ಯನಾರಾಯಣ, ಖಾಜಸಾಬ,ವಿರೂಪಾಕ್ಷಗೌಡ ನಾಯಕ, ಸುಧಾ, ಅಂಬಿಕಾ, ಪ್ರಭಾ ಪಾಟೀಲ್, ಮಿರಾಜ್, ತಿಮ್ಮಣ್ಣ, ಅನೀಲ್, ಆನಂದ, ಅರ್ಜುನನಾಯಕ ಹಾಡಿ ನೆರೆದ ಜನರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಕೆಆರ್‌ಪಿ ಪಾರ್ಟಿ ಮುಖಂಡರಾದ ಪಂಪಾಪತಿ ಸಿಂಗನಾಳ, ರಮೇಶ ಚೌಡ್ಕಿ, ಚಂದ್ರಶೇಖರಗೌಡ ಹೇರೂರು, ಪಂಪಣ್ಣ ನಾಯಕ, ಬಾಷಾ, ಆನಂದಗೌಡ, ನಾಗರಾಜ ಚಳಗೇರಿ ಹಲವರಿದ್ದರು.