Breaking News

ದಿನಾಂಕ 24ರಂದು ಅಂಜನ 2023 ಮಹಿಳಾ ವೈದ್ಯರ ಪ್ರಥಮ ಸಮ್ಮೇಳನ

ಗಂಗಾವತಿ 22 ಭಾರತೀಯ ವೈದ್ಯಕೀಯ ಸಂಘ ಹಾಗೂ ಮಹಿಳಾ ಘಟಕದ ನೇತೃತ್ವದಲ್ಲಿ ಇದೇ ದಿನ 24 ರಂದು ಪ್ರಥಮ ಬಾರಿಗೆ ಗಂಗಾವತಿಯಲ್ಲಿ ಮಹಿಳಾ ವೈದ್ಯರ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾಕ್ಟರ್ ಮಧುಸೂದನ್ ಹಾಗೂ ಮಹಿಳಾ ಘಟಕದ ಅಧ್ಯಕ್ಷರು ಡಾಕ್ಟರ್ ಸುಲೋಚ ನ ವಿ ಚಿನಿವಾ ಲರ್ ಹೇಳಿದರು ಅವರು ಶುಕ್ರವಾರದ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಉದ್ಘಾಟಿಸಿ ಮಾತನಾಡಿದರು ಐಎಂಎ ಭವನದಲ್ಲಿ ಜರುಗಲಿರುವ ಸಮಾರಂಭವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ನಿರ್ದೇಶಕರಾದ ಡಾಕ್ಟರ್ ಇಂದುಮತಿ ಸಮ್ಮೇಳನವನ್ನು ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆ ಅಧ್ಯಕ್ಷ ಡಾ. ಶಿವಕುಮಾರ್ ಬಿ ಲಕ್ಕೋಲ್ ಮತ್ತು ಕರ್ನಾಟಕ ರಾಜ್ಯ ಮಹಿಳಾ ವೈದ್ಯ ವಿಭಾಗ ಮುಖ್ಯಸ್ಥ ಡಾಕ್ಟರ್ ಮನ ಪ್ರೀತ್ ಕೌರ್ ತೆ ಹಲಿಯ ವಿಜಯಪುರ ಆಗಮಿಸು ವರು ರಾಜ್ಯದ ನಾನಾ ಭಾಗದಿಂದ ಎರಡು ನೂರು ಅಧಿಕ ಮಹಿಳಾ ವೈದ್ಯರು ಭಾಗವಹಿಸಿದ್ದು ವ್ಯಕ್ತಿತ್ವ ವಿಕಸ ನ ಗೆ ಸಂಬಂಧಿಸಿದಂತೆ ಹಾಗೂ ವೈದ್ಯಕೀಯ ಹೊರತುಪಡಿಸಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು ಆರೋಗ್ಯ ಹಾಗೂ ಸರ್ವಾಂಗೀನ ಅಭಿವೃದ್ಧಿಯ ಬಗ್ಗೆ ವಿಶೇಷ ಉಪನ್ಯಾಸಗಳು ಸಹ ಆಯೋಜಿಸಲಾಗಿದ್ದು ಈಗಾಗಲೇ ಸಾಕಷ್ಟುಮಹಿಳಾ ವೈದ್ಯರು ನೋಂದಣಿ ಆಗಿದ್ದಾರೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಡಾಕ್ಟರ್ ವಿವಿ ಚಿನಿವಾಲ ರ ಡಾ. ಅನಿತಾ ಡಾಕ್ಟರ್ ಶಿವಕುಮಾರ್ ಮಾಲಿ ಪಾಟೀಲ್ ಡಾಕ್ಟರ್ ವಿನಯ್ ಗುಂಜಳ್ಳಿ ಡಾಕ್ಟರ್ ಸುಲೋಚನಾ ವೆಂಕಟೇಶ್ ಉಪಸ್ಥಿತರಿದ್ದರು

About Mallikarjun

Check Also

76 ಮೈಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರ ಹೋರಾಟ ಒಣಗುವ ಸ್ಥಿತಿಯಲ್ಲಿರುವ ಜೋಳ ಬೆಳೆ ಉಳಿಸಿಕೊಡಿ ಎಂದ ರೈತರು.

The farmers have demanded that the 76-mile canal be drained of water, and the farmers …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.