A doctor saved the eyes of a girl whose eye ball had come out after piercing a stick.
ಗಂಗಾವತಿ:ಕಟ್ಟಿಗೆ ಚುಚ್ಚಿ ಕಣ್ಣು ಗುಡ್ಡೆ ಹೊರಬಂದಿದ್ದ ಕಣ್ಣನ್ನು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಶಾಶ್ವತವಾಗಿ ಎರಡು ಕಣ್ಣಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದ ಬಾಲಕಿಗೆ ಹೊಸ ಬೆಳಕನ್ನು ನೀಡುವಲ್ಲಿ ನಗರದ ಖ್ಯಾತ ನೇತ್ರ ತಜ್ಞ ಡಾ.ಮಹಾಂತೇಶ ಪಟ್ಟಣಶೆಟ್ಟಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ವಿರೂಪಾಪೂರ ಗಡ್ಡಿ ನಿವಾಸಿ ನಾಗರಾಜ ಇವರ ಪುತ್ರಿ ಧನುಬಾಯಿ(07) ಶಾಲೆಗೆ ಕಾಲುವೆಯ ಸೇತುವೆ ದಾಟಿ ಹೋಗುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ಪರಿಣಾಮವಾಗಿ ಎಡಭಾಗದ ಕಣ್ಣಿಗೆ ಕಟ್ಟಿಗೆ ತಾಕಿ ಕಣ್ಣುಗುಡ್ಡೆ ಹೊರಗೆ ಬಂದಿತ್ತು. ಗಾಬರಿಗೊಂಡ ನಾಗರಾಜ ದಂಪತಿಗಳು ಕೂಡಲೇ ನಗರದ ನೇತ್ರಜ್ಯೋತಿ ಕಣ್ಣಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಾಲಕರ ಪರವಾನಿಗೆಯೊಂದಿಗೆ ಬಾಲಕಿಯ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಒಳಗಿದ್ದ ಕಟ್ಟಿಗೆ ತುಂಡನ್ನು ಹೊರಗೆ ತೆಗೆದು ಪುನಹ ಕಣ್ಣು ಗುಡ್ಡೆಯನ್ನು ಅದೇ ಸ್ಥಳಲ್ಲಿಸಿರಿ ಹೊಲಿಗೆ ಹಾಕುವ ಮೂಲಕ ಯಶಸ್ವಿ ಶಸ್ತçಚಿಕಿತ್ಸೆ ನಡೆಸಿ ಮುಂದೆ ಎರಡು ಕಣ್ಣು ಕಳೆದುಕೊಂಡು ಅಂಧತ್ವಕ್ಕೊಳಗಾಗುತ್ತಿದ್ದ ಬಾಲಕಿ ಧನುಭಾಯಿ ಕಣ್ಣುಗಳನ್ನು ಸಂರಕ್ಷಣೆ ಮಾಡಿದ್ದಾರೆ.
ಮಕ್ಕಳ ಬಗ್ಗೆ ಪಾಲಕರು ಜಾಗೃತಿ ವಹಿಸಬೇಕು:ಮಕ್ಕಳ ಪ್ರತಿ ಚಲನವಲನವನ್ನು ಪಾಲಕರು ಎಚ್ಚರಿಕೆಯಿಂದ ಗಮನಿಸಬೇಕು. ವಿರೂಪಾಪೂರಗಡ್ಡಿ ಗ್ರಾಮದ ಧನುಬಾಯಿ ಎಡಗಣ್ಣಿಗೆ ಕಟ್ಟಿಗೆ ಬಡಿದ ಪರಿಣಾಮ ಕಣ್ಣುಗುಡ್ಡೆ ಹೊರಗೆ ಬಂದಿತ್ತು. ಪಾಲಕರು ಕೂಡಲೇ ಆಗಮಿಸಿದ್ದರಿಂದ ಸೂಕ್ತ ಶಸ್ತçಚಿಕಿತ್ಸೆ ಮೂಲಕ ಕಟ್ಟಿಗೆ ಚೂರನ್ನು ಹೊರಗೆ ತೆಗೆದು ಮುಂದೆ ಎರಡು ಕಣ್ಣಿನ ದೃಷ್ಠಿದೋಷವಾಗುವುದನ್ನು ತಡೆಯಲಾಗಿದೆ. ಮಕ್ಕಳ ವಯಸ್ಸಿನಲ್ಲಿ ಇಂತಹ ಅನಾಹುತಗಳಾಗುವುದು ಸಾಮಾನ್ಯ ಕೂಡಲೇ ತಜ್ಞ ನೇತ್ರ ವೈದ್ಯರನ್ನು ಸಂಪರ್ಕಿಸಬೇಕೆಂದು ನೇತ್ರ ವೈದ್ಯ ಡಾ.ಮಹಾಂತೇಶ ಪಟ್ಟಣಶೆಟ್ಟಿ ಮಾಹಿತಿ ನೀಡಿದ್ದಾರೆ.