Breaking News

ಕರ್ಕಿಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕಾನೂನು ಅರಿವು ನೆರವು

Legal awareness assistance at Indira Gandhi Residential School, Karkihalli

ಜಾಹೀರಾತು

ಕೊಪ್ಪಳ ಆಗಸ್ಟ್ 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಕರ್ಕಿಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 24ರಂದು ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು. ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್ ಅವರು ಶಾಲಾ ಮಕ್ಕಳೊಂದಿಗೆ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಯಾದವನು ಖಾಲಿ ಪಾತ್ರೆಯಂತೆ ಬಂದು ಶಾಲೆಯಿಂದ ಜ್ಞಾನವೆಂಬ ಅರಿವನ್ನು ಪಡೆಯುತ್ತಾನೆ. ನಾವೇ ನಟಿಸಿ ನಾವೇ ನಿರ್ದೇಶಿಸಿ ನಾವೇ ನೋಡುವ ಬಣ್ಣ ಬಣ್ಣದ ಚಿತ್ರವೇ ನಮ್ಮ ಜೀವನ. ಪ್ರೌಢಾವಸ್ಥೆಯಲ್ಲಿ ವಿದ್ಯಾರ್ಥಿಗಳು ಮನಸನ್ನು ಹರಿಬಿಡಬಾರದು. ಹದಿ ವಯಸ್ಸಿನಲ್ಲಿ ಮನಸು ಚಂಚಲವಾಗುವುದು ಸಹಜ. ಆದರೆ, ಓದು ಮತ್ತು ಅಧ್ಯಯನದತ್ತ ಗಮನ ಹರಿಸಿದಲ್ಲಿ ಸಾಧನೆ ಸಾಧ್ಯವಿದೆ ಎಂದು ತಿಳಿಸಿದರು. ವಸತಿ ಶಾಲೆಯ ಪ್ರಭಾರ ಪ್ರಾಚಾರ್ಯರು ಹಾಗೂ ಹಿಂದಿ ಭಾಷಾ ಶಿಕ್ಷಕರಾದ ಸತ್ಯಪ್ಪ ಕಂಬಳಿ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಮುಖ್ಯ ಕಾನೂನು ಅಭೀರಕ್ಷಕರಾದ ರವೀಂದ್ರ ವಿ ಸಿಗನಳ್ಳಿ, ನಿಲಯ ಪಾಲಕರಾದ ಬಸವರಾಜ್ ಕಟಗಿ ಸೇರಿದಂತೆ ಮತ್ತಿತರರಿದ್ದರು. ಇಂಗ್ಲೀಷ್ ಶಿಕ್ಷಕರಾದ ಸಂಗಪ್ಪ ನವಲಿ ನಿರೂಪಿಸಿದರು. ಬೋಧಕ ಬೋಧಕೇತರ ಸಿಬ್ಬಂದಿಗಳು, ವಸತಿ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.