Breaking News

ಮಾದಪ್ಪನ ಪಾದಯಾತ್ರಿಕರಿಂದ ಪಾದಯಾತ್ರಿಗಳಿಗಾಗಿ ಸದ್ಭಾವ ಸೇವಾ ಸಮಿತಿ ಉದ್ಘಾಟನೆ :ಅಧ್ಯಕ್ಷ ಗಂಗರಾಜು .

Inauguration of Sadbhava Seva Samiti for Padyatris by Madappa’s Padyatris: President Gangaraju.

ಜಾಹೀರಾತು


ವರದಿ:ಬಂಗಾರಪ್ಪ ಸಿ
ಹನೂರು: ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಾದಪ್ಪ ದರ್ಶನಕ್ಕೆಂದು ನಿತ್ಯ ಸಾವಿರಾರು ಜನ ತೆರಳುತ್ತಿದ್ದು ಕೆಲವು ತಿಂಗಳುಗಳಲ್ಲಿ ಪಾದಯಾತ್ರಿಗಳ ಸಂಖ್ಯೆಯು ಜಾಸ್ತಿಯಾಗಿರುತ್ತದೆ ಅದೆ ರೀತಿಯಲ್ಲಿ ನಮ್ಮ ಹನೂರು ನಿವಾಸಿಗಳು ಸಹ ಪಾದಯಾತ್ರೆಯ ಮುಖಾಂತರ ತೆರಳುತ್ತೇವೆ ಹಾಗೆಯೆ ನಮ್ಮೆಲ್ಲರ ಸದುದ್ದೇಶದಿಂದ ಸಮಿತಿಯನ್ನು ರಚಿಸಿದ್ದೇವಿ ಎಂದು ಅಧ್ಯಕ್ಷರಾದ ಗಂಗಾದರ್ ತಿಳಿಸಿದರು.
ಪಟ್ಟಣದ ಖಾಸಾಗಿ ಬಸ್ ನಿಲ್ದಾಣದಲ್ಲಿ ಸದ್ಭಾವ ಸೇವಾ ಸಮಿತಿಯನ್ನು ರಾಮಪುರ ಹೋಬಳಿಯ
ಗೋಪಿಶೆಟ್ಟಿಯೂರು ಮಠದ ಶ್ರೀ ಬಸವಣ್ಣ ಸ್ವಾಮೀಜಿಗಳು ಹಾಗೂ ಶಾಲಾ ಮಕ್ಕಳು ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಸಮಿತಿಯ ಅಧ್ಯಕ್ಷರಾದ ಗಂಗಾಧರ್ ರವರು ಮಾತನಾಡಿ, ಹನೂರಿನಿಂದ ಕಳೆದ 25 ವರ್ಷಗಳಿಂದ ಬೆರಳೆಣಿಕೆಯಷ್ಟು ಜನರಿಂದ ಪಾದಯಾತ್ರೆ ಕಾರ್ಯಕ್ರಮ ನಡೆಯುತ್ತಿದ್ದು ಕಳೆದ4.5 ವರ್ಷಗಳಿಂದ ಎರಡೂ ಸಾವಿರಕ್ಕೂ ಅಧಿಕ ಜನರಿಂದ ಪಾದಯಾತ್ರೆ ನಡೆಯುತ್ತಿರುವುದು ಸಂತಸ ತಂದಿದೆ, ಹನೂರಿನ ಹಲವು ಮುಖಂಡರು, ಭಕ್ತಾದಿಗಳು ಪಾದಯಾತ್ರೆಯ ಖರ್ಚು ವೆಚ್ಚಗಳಿಗೆ ಹಾಲು, ಮೊಸರು ಅಕ್ಕಿ ಹಾಗೂ ಹಣದ ರೂಪದಲ್ಲಿ ಸಹಾಯಮಾಡುತ್ತಿದ್ದು ಕಾರ್ಯಕ್ರಮ ಮುಗಿದ ನಂತರ ಉಳಿದ ಹಣವನ್ನು ಯಾವುದೇ ರೀತಿ ದುರ್ಬಳಕೆ ಮಾಡಿಕೊಳ್ಳದೆ ಬಂದಂತಹ ಹಣವನ್ನು ಸಮಿತಿಯ ಖಾತೆಯಲ್ಲಿರಿಸಿ ಮುಂದಿನ ದಿನಗಳಲ್ಲಿ ಕರ್ನಾಟಕದ ಯಾವುದೇ ಭಾಗದಿಂದ ಪಾದಯಾತ್ರಿಕರು ಬಂದರೆ ನಮ್ಮ ಸಮಿತಿಯ ಉಪಯೋಗವನ್ನು ಪಡೆದುಕೊಳ್ಳುವಂತೆ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು .
ಇದೇ ಸಂದರ್ಭದಲ್ಲಿ
ಗೋಪಿಶೆಟ್ಟಿಯೂರು ಮಠದ ಶ್ರೀಗಳು ಮಾತನಾಡಿ ಕಳೆದ 20 ವರ್ಷಗಳಿಂದ ಸತತವಾಗಿ ಹನೂರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಮಲೆ ಮಹದೇಶ್ವರನ ಸನ್ನಿಧಿಗೆ ಪಾದಯಾತ್ರೆ ಮಾಡುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದರು ಈ ಮಾರ್ಗ ಮಧ್ಯದಲ್ಲಿ ಪಾದಯಾತ್ರಿಕರಿಗೆ ಊಟ, ಮಜ್ಜಿಗೆ ,ಪಾನಕ, ನೀರಿನ ವ್ಯವಸ್ಥೆಗಳನ್ನು ಮಾಡಲಾಗುತ್ತಿತ್ತು. ಇದೀಗ ಮಹದೇಶ್ವರನ ಭಕ್ತರು ಸೇರಿ ಮಲೆ ಮಹದೇಶ್ವರನ ಭಕ್ತರಿಗೆ ಪಾದಯಾತ್ರೆ ಸಂದರ್ಭದಲ್ಲಿ ಅಳಿಲು ಸೇವೆ ಮಾಡಲು ಸದ್ಭಾವ ಸೇವಾ ಸಮಿತಿಯನ್ನು ರಚಿಸಿದ್ದಾರೆ,
ಈ ಸಮಿತಿಯು ನಿರಂತರವಾಗಿ ಕಾರ್ಯನ್ಮುಖವಾಗಲಿ ಎಂದು ತಿಳಿಸಿ ಮಹದೇಶ್ವರ ಸ್ವಾಮಿಯು ಎಲ್ಲರಿಗೂ ಆಯುಷ್ಯ ಆರೋಗ್ಯ ನೀಡಲಿ ಎಂದು ಆಶೀರ್ವದಿಸಿದರು.
ಸದ್ಭಾವ ಸೇವಾ ಸಮಿತಿಯ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ ನಮ್ಮ ಸಂಘವು ಕಳೆದ 20 ವರ್ಷಗಳಿಂದ ಸತತವಾಗಿ ನಮ್ಮ ಆತ್ಮೀಯ ಸ್ನೇಹಿತರು ತಂಡೋಪ ತಂಡದೊಂದಿಗೆ ಪಾದಯಾತ್ರೆಗಳಿಗೆ ಸೇವೆಯನ್ನು ಮಾಡುತ್ತ ಬಂದಿದ್ದು ಇದೀಗ ಸದ್ಭಾವ ಸೇವಾ ಸಮಿತಿ (ರಿ)ಯನ್ನು ಕಾನೂನಾತ್ಮಕವಾಗಿ ರಚಿಸಿಲಾಗಿದೆ , ಇದರ ಸಧೂಪಯೋಗವನ್ನು ಭಕ್ತರು ಹಾಗೂ ಪಾದಯಾತ್ರರ್ಥಿಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಶಂಕರ್, ಖಜಾಂಚಿ ನಾರಾಯಣ್ ಹಾಗೂ ಸಮಿತಿಯ ಪದಾಧಿಕಾರಿಗಳು, ಅರಕ್ಷಕ ಠಾಣೆಯ ಅಧಿಕಾರಿಗಳಾದ ಮಂಜುನಾಥ್ ಪ್ರಸಾದ್ ಸೇರಿದಂತೆ ಮುಖಂಡರಾದ ನಿಂಗಣ್ಣ, ಮಹೇಶ್, ಆನಂದ್, ರಾಜು, ವೆಂಕಟೇಗೌಡ, ಮಾದೇಶ್ ,ಮಲ್ಲೇಶ್, ಅನಿಲ್, ಸುಂದರ್, ಸಂತೋಷ್, ರವಿ ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.