ಕೊಪ್ಪಳ.ಅ 13- ಗಂಗಾವತಿ ತಾಲೂಕ ಕಾಂಗ್ರೆಸ್ ಮುಖಂಡ ಹನುಮಂತಪ್ಪ ಎಚ್ ಅರಸಿನಕೇರಿ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಒದಗಿಸದಿದ್ದರೆ ಕಾಂಗ್ರೆಸ್ ಗೆ ಗಂಗಾವತಿ ಕ್ಷೇತ್ರದಲ್ಲಿ ಪೆಟ್ಟು ಬೀಳಲಿದೆ, ನಿಗಮ ಅಧ್ಯಕ್ಷ ಸ್ಥಾನ ಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರವರಿಗೆ ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಅನುಮಂತಪ್ಪ ಕೌದಿ ನಗರದಲ್ಲಿಂದು ಆಗ್ರಹ ಮಾಡಿದರು.
ಹನುಮಂತಪ್ಪ ಅರಸಿನಕೇರಿಯವರು ತಾಲೂಕು ಪಂಚಾಯತ್ ಮಾಜಿ ಸದಸ್ಯರು, ಗಂಗಾವತಿ ಕ್ಷೇತ್ರದಲ್ಲಿ ನಿಷ್ಠಾವಂತ ಪ್ರಮಾಣಿಕ ಕಾರ್ಯಕರ್ತ ಹಲವು ವರ್ಷಗಳಿಂದ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತು ದುಡಿಯುತ್ತಿದ್ದಾರೆ 2023 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಅಭ್ಯರ್ಥಿ ಮನೆಯನ್ನು ಬಿಟ್ಟು ಹೊರಗೆ ಬರದಿದ್ದಾಗ ರಾಜ್ಯ ಕಾಂಗ್ರೆಸ್ ನಾಯಕರ ನಿರ್ದೇಶನದ ಮೇರೆಗೆ ಕ್ಷೇತ್ರದ ಕಾರ್ಯಕರ್ತರನ್ನು ಒಟ್ಟುಗೂಡಿಸಿ ತಾವೇ ಅಭ್ಯರ್ಥಿಯ ತರಹ ಇಡೀ ಕ್ಷೇತ್ರದಲ್ಲಿ ಕಾರ್ಯಕರ್ತರು ಮತದಾರರನ್ನು ಒಟ್ಟುಗೂಡಿಸಿ ಕಾಂಗ್ರೆಸಿಗೆ ಮತ ಹಾಕುವಲ್ಲಿ ಯಶಸ್ವಿಯಾದವರು ಕಾಂಗ್ರೆಸ್ ಅಭ್ಯರ್ಥಿಯ ಸ್ವಯಂಕೃತ ಲೋಪದಿಂದ ಸಹಿಸಲಾರದ ವರ್ತನೆಯಿಂದ ಕೆಲವು ಅಂತರದ ಮತಗಳಿಂದ ಪರಾಜಿತಗೊಂಡಿತು ಹನುಮಂತಪ್ಪ ಅರಸಿನಕೇರಿ ಅವರ ಬಣದ ನಿರಂತರ ಶ್ರಮವಿರದಿದ್ದರೆ ಕಾಂಗ್ರೆಸ್ ಇಷ್ಟೊಂದು ಮತಗಳು ಬರುತ್ತಿದ್ದಿಲ್ಲ ಹೀಗಾಗಿ ಕ್ಷೇತ್ರದ ಕಾರ್ಯಕರ್ತರ ಒತ್ತಾಯದ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಅವರ ಬೇಡಿಕೆಯನ್ನು ಪೂರೈಸಬೇಕು ಇಲ್ಲದಿದ್ದರೆ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಪೆಟ್ಟು ಬೀಳಲಿದೆ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ, ರಾಜ್ಯ ಸಂಘಟನೆ ಕಾರ್ಯದರ್ಶಿ ದ್ಯಾಮಣ್ಣ ಕರಿಗಾರ್, ಹನುಮಂತಪ್ಪ ಹನುಮಾಪುರ, ತಾಲೂಕಾಧ್ಯಕ್ಷ ಮುದ್ದಪ್ಪ ಗೊಂದಿಹೊಸಳ್ಳಿ, ತಾಲೂಕ ಗೌರವಾಧ್ಯಕ್ಷ ದ್ಯಾಮನಗೌಡ್ರು ಭೀಮನೂರು ಸಂಘಟನಾ ಕಾರ್ಯದರ್ಶಿಗಳಾದ ಮಂಜುನಾಥ್ ಬಂಗಾಳಿ, ಬಸವರಾಜ್ ಗುರಿಕಾರ, ಪರಶುರಾಮ ಅಣ್ಣಿಗೇರಿ, ಅನ್ನದಾನಿಸ್ವಾಮಿ ಬೂತಣ್ಣನವರು, ನಗರ ಘಟಕದ ನಗರಘಟಕದ ಗೌರವಾಧ್ಯಕ್ಷ ಹುಚ್ಚನ ಗೌಡರು ಭಾಗ್ಯನಗರ , ಅಧ್ಯಕ್ಷ ಮಲ್ಲೇಶ್ ಹದ್ದಿನ್ ಉಪಾಧ್ಯಕ್ಷ ಮಂಜು ಮ್ಯಾಗಳಮನಿ ಸಂಚಾಲಕರು ನಿಂಗಪ್ಪ ಮೂಗಿನ್ ಇತರರಿದ್ದರು,