ಗಂಗಾವತಿ ಇನ್ನರ್ ವ್ಹೀಲ್ ಕ್ಲಬ್‌ನಿಂದ “ವಿಶ್ವಆನೆಗಳ ದಿನಾಚರಣೆ” ಅಂಗವಾಗಿ ಚಿತ್ರಕಲಾ ಸ್ಪರ್ಧೆಆಗಸ್ಟ್ ೧೨ ವಿಶ್ವ ಆನೆಗಳ ದಿನಾಚರಣೆ.
ಈಪ್ರಯುಕ್ತ ಗಂಗಾವತಿಯ ಇನ್ನರ್ ವ್ಹೀಲ್ ಕ್ಲಬ್ ಈ ದಿನದ ಮಹತ್ವವನ್ನು ತಿಳಿಸಿ ಮಕ್ಕಳಲ್ಲಿಕಾಡುಪ್ರಾಣಿಗಳ ಅದರಲ್ಲೂ ಆನೆಗಳ ಬಗ್ಗೆಸವಿಸ್ತಾರವಾದ ಮಾಹಿತಿಯನ್ನು ನೀಡಿ ಲಿಟಲ್ ಹಾರ್ಟ್ಸ್ಶಾಲೆಯ ೬ ಮತ್ತು ೭ನೇ ತರಗತಿಯ ಮಕ್ಕಳಿಗೆಆನೆಯ ಚಿತ್ರ ಬರೆಯುವ ಸ್ಪರ್ಧೆಯನ್ನುಹಮ್ಮಿಕೊಳ್ಳಲಾಗಿತ್ತು.
ಈ ಸ್ಪರ್ಧೆಯಲ್ಲಿ ಎರಡೂತರಗತಿಯ ಸುಮಾರು ೨೦೦ ಕ್ಕೂ ಹೆಚ್ಚುವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಹಾಗೂಗೋಣಿ ಚೀಲವನ್ನು ಉಪಯೋಗಿಸಿ ಬೃಹತ್ ಆನೆಯನ್ನುನಿರ್ಮಾಣ ಮಾಡಿದ ಲಿಟಲ್ ಹಾರ್ಟ್ಸ್ ಶಾಲೆಯ ಚಿತ್ರಕಲಾ ಶಿಕ್ಷಕಿಯಶೋಧ ಪತ್ತಾರ ಅವರನ್ನು ಇನ್ನರ್ ವ್ಹೀಲ್‌ಕ್ಲಬ್‌ನಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಕ್ಲಬ್‌ನ ಸದಸ್ಯಶ್ರೀಮತಿ ಸುಜಾತ ರೆಡ್ಡಿ ಮನೆಗಳಿಗೆ ಟೈಲ್ಸ್ ಹಾಕುವಕೆಲಸ ಮಾಡುವ ಕಾರ್ಮಿಕ ಶ್ರೀ ಸಂತೋಷ ಅವರಮಕ್ಕಳ ವಿದ್ಯಾಭ್ಯಾಸಕ್ಕಾಗಿ ೨೫೦೦೦=೦೦ ರೂ.ಗಳನ್ನುದೇಣಿಗೆಯಾಗಿ ನೀಡಿದರು.ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ಶ್ರೀಮತಿಪ್ರಿಯಾಕುಮಾರಿ ಹಾಗೂ ಕ್ಲಬ್‌ನ ಖಜಾಂಚಿ ಶ್ರೀಮತಿಮಂಜುಳ ಸಿಂಗನಾಳ ಹಾಗೂ ಎಡಿಟರ್ ಶ್ರೀಮತಿ ರಜನಿಆಲಂಪಲಿ ಮತ್ತು ಕ್ಲಬ್‌ನ ಸದ್ಯಸರಾದ ಶ್ರೀಮತಿಸುಜಾತ ರೆಡ್ಡಿ ಹಾಗೂ ಇತರೆ ಶಿಕ್ಷಕ ಶಿಕ್ಷಕಿಯರುಉಪಸ್ಥಿತರಿದ್ದರು.