Non-payment of wages for 17 months to outsourced workers working in tourist temples-circuit houses is condemnable: Bhardwaj
.
ಗಂಗಾವತಿ: ಗಂಗಾವತಿ, ಕಾರಟಗಿ, ಕನಕಗಿರಿ ತಾಲ್ಲೂಕುಗಳಲ್ಲಿ ಪ್ರವಾಸಿ ಮಂದಿರ-ಸರ್ಕೀಟ್ ಹೌಸ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ೧೪ ಜನ ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ ೧೭ ತಿಂಗಳುಗಳಿAದ ವೇತನ ಕೊಡದೇ ಇರುವುದು ಖಂಡನೀಯವಾಗಿದೆ ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ಸರ್ಕಾರದ ನಿಲುವಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರರಾದ ಸಂತೋಷ ತಂ. ಈರಣ್ಣ ಕಮಲಾಪುರ ಇವರು ೧೭ ತಿಂಗಳುಗಳಿAದ ಗಂಗಾವತಿ, ಕಾರಟಗಿ, ಕನಕಗಿರಿ ತಾಲ್ಲೂಕುಗಳಲ್ಲಿ ಪ್ರವಾಸಿ ಮಂದಿರ-ಸರ್ಕೀಟ್ ಹೌಸ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ೧೪ ಜನ ಹೊರಗುತ್ತಿಗೆ ಕಾರ್ಮಿಕರಿಗೆ ಸಂಬಳ ನೀಡದೇ ಇರುವುದರಿಂದ ಕಾರ್ಮಿಕರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟದಿAದ ಬೀದಿಪಾಲಾಗಿದ್ದಾರೆ. ಕೂಡಲೇ ಮೂಲ ಮಾಲಿಕರಾದ ಸರ್ಕಾರ ೧೪ ಜನ ಹೊರಗುತ್ತಿಗೆ ಕಾರ್ಮಿಕರಿಗೆ ಕನಿಷ್ಟ ವೇತನ ಕಾಯ್ದೆಯ ಪ್ರಕಾರ ಸಂಬಳ ನೀಡಬೇಕು. ಇವರೆಲ್ಲರಿಗೂ ಪಿ.ಎಫ್., ಇ.ಎಸ್.ಐ. ವಂತಿಕೆಗಳನ್ನು ತುಂಬಿ, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಬೇಕೆಂದು ಕ್ರಾಂತಿಚಕ್ರ ಬಳಗ ಸರ್ಕಾರವನ್ನು ಒತ್ತಾಯಿಸುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸದಿದ್ದಲ್ಲಿ ರಾಜ್ಯಾಧ್ಯಂತ ಕಾರ್ಮಿಕರಿಗೆ ನ್ಯಾಯಕ್ಕಾಗಿ ಕ್ರಾಂತಿಚಕ್ರ ಬಳಗ ಹೋರಾಟ ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ