Breaking News

ವರ್ಗಾವಣೆಗೊಂಡ ಸಹಶಿಕ್ಷಕ ಬಸವರಾಜ್ ಅವರಿಗೆಭಾರವಾದ ಹೃದಯದಿಂದ ಮಕ್ಕಳು ಬೀಳ್ಕೊಡುಗೆ

To transferred associate teacher Basavaraj
Children bid farewell with a heavy heart

ಗಂಗಾವತಿ: ತಾಲೂಕಿನ ಸೂರ್ಯನಾಯಕನ ತಾಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಹೊಸಕೆರೆ ಡಗ್ಗಿ ಸರ್ಕಾರಿ ಶಾಲೆಗೆ ವರ್ಗಾವಣೆಯಾಗಿರುವ ಸಹ ಶಿಕ್ಷಕರಾದ ಬಸವರಾಜ್ ಅವರನ್ನು ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ಬಾಲಾಜಿ ಮೇಸ್ತಿç, ಅಧ್ಯಕ್ಷರಾದ ಅಂಬರೀಶ್, ವಿದ್ಯಾರ್ಥಿಗಳ ಪಾಲಕರಾದ ವೆಂಕಟೇಶ್, ಶಿವಪ್ಪ, ದಾವಲ್‌ಸಾಬ್, ತಾರಾಸಿಂಗ್ ಪವರ್, ಬಾಲಾಜಿ, ಗುಂಡಪ್ಪ, ಶಿವಪ್ಪ, ಯಮನೂರ ಹಾಗೂ ವಿದ್ಯಾರ್ಥಿಗಳು ಭಾರವಾದ ಹೃದಯದಿಂದ ಸನ್ಮಾನಿಸಿ ಬಿಳ್ಕೊಟ್ಟು, ಸಹ ಶಿಕ್ಷಕರಾದ ಬಸವರಾಜ್ ಅವರ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.
ಶಾಲೆಯ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ಹಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸೂರ್ಯನಾಯಕನ ತಾಂಡಾದ ಸಮಸ್ತ ನಾಗರಿಕರು ಪಾಲ್ಗೊಂಡು ವರ್ಗಾವಣೆಗೊಂಡ ಶಿಕ್ಷಕರಾದ ಬಸವರಾಜ್ ಅವರ ಸೇವೆಯನ್ನು ಸ್ಮರಿಸಿ ಕೊಂಡಾಡಿದರು.

ಜಾಹೀರಾತು

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.