The fugitive pilgrims thanked those who rescued those who were drowned in the water.
ವರದಿ :ಬಂಗಾರಪ್ಪ ಸಿ . ಚಾಮರಾಜನಗರ : ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ದರ್ಗಾದ ಬಳಿ ನಡು ನೀರಿನಲ್ಲಿ ಸಿಲುಕಿದ ಒಂದು ಮಗು ಸೇರಿ ಆರು ಮಂದಿಯನ್ನು ಬೂಟ್ ಸಂಘದವರು ಪ್ರಾಣ ಉಳಿಸುವ ಮೂಲಕ ಸಾಹಸಮೆರೆದಿದ್ದಾರೆ.
ಶುಕ್ರವಾರ ಸಂಜೆ 4:30ರ ಸಮಯದಲ್ಲಿ ತಾಲೂಕಿನ ಶಿವನಸಮುದ್ರ ದರ್ಗಾದ ಜಲಪಾತದ ಬಳಿ ಬೆಂಗಳೂರು ಮೂಲದ ಆರು ಮಂದಿ ಅಂದರೆ ನಾಲ್ಕು ವರ್ಷದ ಹೆಣ್ಣು ಮಗು 8 ವರ್ಷದ ಬಾಲಕ ಮೂವರು ಮಹಿಳೆಯರು ಒಬ್ಬ ಪುರುಷ ಸೇರಿ 6ಮಂದಿ ಬಂಡಗಳನ್ನು ದಾಟಿ ಮಧ್ಯದಲ್ಲಿ ನೀರಿನಲ್ಲಿ ಆಟವಾಡುವಾಗ ದಿಡೀರನೆ ನೀರು ಪ್ರವಾಹದಲ್ಲಿ ಹೆಚ್ಚಾಗಿದೆ ವಾಪಸ್ ಬರಲಾಗದೆ ಗಾಬರಿಯಿಂದ ಬಂಡೆಗಳ ಮೇಲೆ ನಿಂತು ಕೂಗಿಕೊಂಡಿದ್ದಾರೆ. ತಕ್ಷಣವೇ ಸಮೀಪದಲ್ಲಿ ಇದ್ದಂತಹ ಶಿವನಸಮುದ್ರ ಬೊಟ್ ಸಂಘದ ಕುಳ್ಳಣ್ಣ ಮಹೇಶ ಸಿದ್ದರಾಜು ಪುನೀತ್ ಚೋಟು ಜಮೀರ್ ಇವರ ತಂಡ ಆಗ್ಗ ಬೋಟ್ ಸಹಾಯದಿಂದ ಅರಸಹಸ ಮಾಡಿ ಆರು ಮಂದಿಯನ್ನು ಸುರಕ್ಷಿತವಾಗಿ ದಡ ಸೇರಿಸಿ ಪ್ರಾಣ ಉಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ದರ್ಗಾದ ಬಳಿ ಇರುವಂತಹ ಜಲಪಾತ ತುಂಬಾ ಅಪಾಯಕಾರಿ ಇವರು ಹೋಗಿರುವ ಸ್ಥಳವು ಅಪಾಯಕಾರಿ ಸ್ವಲ್ಪ ಜಾರಿದರು ಪಕ್ಕದಲ್ಲಿ ಇರುವ ಜಲಪಾತಕ್ಕೆ ಬಿದ್ದರೆ ಮತ್ತೆ ಅವರ ದೇಹಗಳು ಸಹ ಕಾಣುವುದಿಲ್ಲ ಅಂತಹ ಜಲಪಾತ. ಅಪಾಯಕಾರಿಯದಂತಹ ಸ್ಥಳವಿದು.ಈ ಸ್ಥಳದಲ್ಲಿ ಆಗಿಂದಾಗೆ ಸಾವುಗಳು ನಡೆಯುತ್ತಲೇ ಇವೆ ಇವರಿಗೆ ರಕ್ಷಣೆ ಕೊಡುವವರು ಯಾರು? ಪ್ರವಾಹದ ಸಮಯದಲ್ಲಿ ಈ ಹೆಣ್ಣು ಮಕ್ಕಳು ಸಣ್ಣ ಮಕ್ಕಳ ಜೊತೆಯಲ್ಲಿ ಆಟವಾಡುವಂತಹ ಸಾಹಸ ಮೆರೆದಿರುವ ಇವರಿಗೆ ನೀವು ಏನಂತ ಹೇಳುತ್ತೀರಿ. ದಡ ಸೇರಿದವರು ತಮ್ಮ ವಿಳಾಸ ತಮ್ಮ ಪರಿಚಯವನ್ನು ಹೇಳಿಕೊಳ್ಳದೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.