Breaking News

ಜಿಲ್ಲಾ ಮೀಸಲು ಪೋಲಿಸ್ ಪಡೆಗೆ ನಿಂಗಪ್ಪಡಿವೈಎಸ್‌ಪಿಸರ್ವರ ಕ್ಷೇಮ ಬಯಸುವ ಪೋಲಿಸ್ ಅಧಿಕಾರಿಗಳ ಅಗತ್ಯ : ಜ್ಯೋತಿ

Ningappa DySP of the District Reserve Police Force
Need for police officers who want everyone's well-being : Jyoti

ಕೊಪ್ಪಳ : ಸರ್ವರ ಕ್ಷೇಮ ಬಯಸುವ ಪೋಲಿಸ್ ಅಧಿಕಾರಿಯ ಅಗತ್ಯವಿದೆ, ಸಾಮಾನ್ಯ ಜನರ ಕಣ್ಣೀರ ಒರೆಸುವ ಪೊಲೀಸ್ ಅಧಿಕಾರಿಗಳು ಬೇಕಾಗಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಅಭಿಪ್ರಾಯ ಪಟ್ಟರು.
ಅವರು ನಗರದ ಜಿಲ್ಲಾ ಪೋಲಿಸ್ ಮೀಸಲು ಪಡೆಯ ಡಿವೈಎಸ್‌ಪಿ ಆಗಿ ಬಂದಿರುವ ನಿಂಗಪ್ಪ ಎನ್. ಅವರಿಗೆ ಸನ್ಮಾನಿಸಿ ಮಾತನಾಡಿ, ಸಾಮಾಜಿಕ ಕ್ಷೇತ್ರದಲ್ಲಿ ಸರಕಾರದ ಕಂದಾಯ ಇಲಾಖೆ, ಪೋಲಿಸ್ ಇಲಾಖೆ, ನ್ಯಾಯಾಲಯ ಮತ್ತು ಕೃಷಿ ಇಲಾಖೆಗಳು ಜನಪರವಾಗಿರಬೇಕು ಕಾರಣ ಅಲ್ಲಿ ಕೇವಲ ದುಡಿದು ತಿನ್ನುವವರ ಸಂಖ್ಯೆಯೇ ಬಹುದೊಡ್ಡದಾಗಿರುತ್ತದೆ ಎಂದರು.
ಸಾಮಾನ್ಯ ಜನರ ಕಣ್ಣಿರು ಒರೆಸು ಅಧಿಕಾರಿಗಳೇ ಇವತ್ತಿನ ಬಹುದೊಡ್ಡ ಅಗತ್ಯವಿದೆ, ಬ್ಯುರೋಕ್ರಸಿ ಎಂಬ ಪದ ಇಂದು ಬೇರೆಯಾಗಿ ಕಾಣುತ್ತಿದೆ, ಅಂತಹ ಸಂದರ್ಭದಲ್ಲಿ ಸರ್ವ ಸಮುದಾಯದ ಪೊಲೀಸರ ಹಿತಕ್ಕೆ ನಿಂಗಪ್ಪ ಅವರು ಶ್ರಮಿಸಿದ ಕಾರಣ ಅವರ ಮೇಲೆ ಎಲ್ಲರೂ ವಿಶ್ವಾಸವಿಟ್ಟಿದ್ದಾರೆ, ಅದಕ್ಕೆ ನಿಂಗಪ್ಪ ಅವರನ್ನು ಕೊಪ್ಪಳದಲ್ಲಿ ಉಳಿಸಲು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮತ್ತು ಸಚಿವ ಶಿವರಾಜ ತಂಗಡಗಿ ಅವರ ಶ್ರಮ ಮೆಚ್ಚುವಂತಹದು ಎಂದರು,
ಸರಕಾರದ ಭಾಗವಾಗಿರುವ ಶಾಸಕ ಸಚಿವರ ಜೊತೆಗೆ ಪೊಲೀಸ್ ಇಲಾಖೆಯ ಸ್ಥಳಿಯ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು. ಸನ್ಮಾನ ಸ್ವೀಕರಿಸಿದ ನಿಂಗಪ್ಪ ಮಾತನಾಡಿ, ಸಾರ್ವಜನಿಕ ಕ್ಷೇತ್ರದ, ಸಾಮಾಜಿಕ ಕ್ಷೇತ್ರದ ಜನರು ಶುಭ ಹಾರೈಸಿದ್ದು ಸಂತಸ ತಂದಿದೆ, ತಮ್ಮ ಸೇವಾವಧಿಯಲ್ಲಿ ನಿರಂತರವಾಗಿ ಶ್ರಮಿಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಮುಖಂಡರುಗಳಾದ ಅಂಬಿಕಾ ನಾಗರಾಳ, ಸೌಭಾಗ್ಯಲಕ್ಷ್ಮೀ ಗೊರವರ್, ಕಾವೇರಿ ರ್‍ಯಾಗಿ ಇತರರು ಇದ್ದರು.

ಜಾಹೀರಾತು

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.