of Sri Ramanagara. Farmers are desilting the canal at their own expense.

ಗಂಗಾವತಿ: ಶ್ರೀರಾಮನಗರದ ರೈತರು ಸ್ವಂತ ಖ ರ್ಚಿನಲ್ಲಿ ಕಾಲುವೆ ಹೂಳು ತೆಗೆಸುತ್ತಿರುವದು ಒಂದೆಡೆ ಬಿತ್ತನೆ ವಿಳಂಬ, ಮತ್ತೊಂದೆಡೆ ರಾಸಾಯನಿಕ ಗೊಬ್ಬರಗಳ ಏರಿಕೆ ಮತ್ತೊಂದೆ ಕಾಲುವೆಯಲ್ಲಿ ತುಂಬಿದ ಹೂಳಿನಿಂದಾಗಿ, ಶ್ರೀ ರಾಮನಗರ ಗ್ರಾಮ ಪಂಚಾಯಿತಿ, ಹಾಗೂ ಮುಸ್ಟೂರು ಮರಳಿ ದಣಾಪುರ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಭಾಗದ ರೈತರ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ ರೆಡ್ಡಿ ಶ್ರೀನಿವಾಸ್ ಹೇಳಿದರು,
ಈ ಸಂದರ್ಭದಲ್ಲಿ ಮಾಜಿ ಕನಕೆಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಎಪಿಎಂಸಿ ನಿರ್ದೇಶಕರು ರೆಡ್ಡಿ ಶ್ರೀನಿವಾಸ್ ಮಾತನಾಡಿ
ಕಳೆದ ವರ್ಷ ಬರಗಾಲದಿಂದ ಚೇತರಿಸುವಾಗಲೇ ಈ ವರ್ಷದ ಮುಂಗಾರು ಆರಂಭ ವಿಳಂಬವಾಗಿದ್ದು, ಈಗ ಉತ್ತಮ ಮಳೆ ಯಾಗುತ್ತಿದ್ದು ರೈತರು ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ತುಂಗಭದ್ರಾ ಎಡದಂಡೆ ಕಾಲುವೆಯ 25 ನೇ ಉಪ ಕಾಲುವೆ ಸುಮಾರಿ 25 ಕಿ.ಮೀ ವರೆಗೂ ಸಂಪೂರ್ಣ ಹೂಳು ತುಂಬಿಕೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಏನು ಪ್ರಯೋಜನವಿಲ್ಲದಂತಾಗಿದೆ, ಮುಂದಿನ ದಿನಗಳಲ್ಲಿ ಬೆಳೆಗೆ ನೀರು ಹರಿಸಲು ತಮ್ಮ ಸ್ವಂತ ಖರ್ಚಿನಲ್ಲಿಯೇ ಕಾಲುವೆಯಲ್ಲಿನ ಹೂಳು ತೆಗೆಸಿ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ,ಉಪ ಕಾಲುವೆ 25 ರ ವ್ಯಾಪ್ತಿಗೆ ಒಳಪಡುವ ರೈತರು ಸೇರಿಕೊಂಡು ಹಣ ಸಂಗ್ರಹಿಸಿಕೊಂಡು ಈ ಕೆಲಸವನ್ನು ಮಾಡುತ್ತಿದ್ದಾರೆ.
ಕಳೆದ ಸಲದಂತೆ ಮಳೆಯ ಕೊರತೆಯಿಂದ ಬೆಳೆಯಲ್ಲಿ ಇಳುವರಿ ಪ್ರಮಾಣ ಕಡಿಮೆಯಾಗಲಿದೆ ಎಂದು ರೈತರು ನೋವಿನಿಂದ ಹೇಳಿಕೊಳ್ಳುತ್ತಿದ್ದಾರೆ.ಕಾಲುವೆಗಳ ದು:ಸ್ಥಿತಿಯು ರೈತರಿಗೆ ಶಾಪವಾಗಿ ಪರಿಣಮಿಸಿದೆ.
ಕಾಲುವೆಯ ಸಂಪೂರ್ಣವಾಗಿ ಹೂಳು ತುಂಬಿದ್ದು ಕೂಲಿ ಕಾರ್ಮಿಕರಿಂದ ತೆರವು ಮಾಡುವುದು ಅಸಾಧ್ಯದ ಮಾತು ಹೀಗಾಗಿ ಜೆಸಿಬಿ ಯಂತ್ರದ ಸಹಾಯದಿಂದ ಕೆಲಸವನ್ನು ನಿರ್ವಹಿಸುತ್ತಿದ್ದೇವೆ, ಕಾಲುವೆ ಹೂಳು ತೆಗೆಯಲು ಸರ್ಕಾರ ವರ್ಷಕ್ಕೆ ಅನುದಾನ ಬಿಡುಗಡೆ ಮಾಡಬೇಕು, ಸಚಿವರಾದ ಡಿಕೆ ಶಿವಕುಮಾರ್ ಹಾಗೂ ಶಿವರಾಜ್ ತಂಗಡಿ ಯವರು ಪ್ರತಿ ವರ್ಷ ಕಾಲವೇ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರಟೂರಿ ಶ್ರೀನಿವಾಸ್, ವಿಜಯ್ ಧೋನಿಪುಡಿ, ಸಂಭವಮೂರ್ತಿ, ಮಿಲ್ ಶ್ರೀನಿವಾಸ್, ಸುರೇಶ್ ಗ್ರಾಮ ಪಂಚಾಯತಿ ಉಪಾಧ್ಯಕ್ಷರು, ನಿಂಗಪ್ಪ, ಹೇಮಸುಂದರಾವ್, ಉಮೇಶ್, ಶರಣಪ್ಪ, ಚನ್ನಬಸವ, ರಾಮಮೂರ್ತಿ, ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
