Anegundi Singakunte lake reclamation by Dharmasthala Village Development Corporation
ಕೆರೆಯ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ನೀರಿನ ಸ್ವಚ್ಛತೆ ಕಾಪಾಡಿಕೊಳ್ಳಿ-ಸದನಾಂದ ಬಂಗೇರ
ಗಂಗಾವತಿ: ಡಾ ವಿರೇಂದ್ರ ಹೆಗ್ಗಡೆ ಪರಿಕಲ್ಪನೆಯಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಕರೆಗಳನ್ನು ಹೊಳೆತ್ತುವ ಮೂಲಕ ಅಂತರ್ಜಲಮಟ್ಟ ಹೆಚ್ಚಿಸುವ ಕಾರ್ಯಕೈಗೋಳ್ಳಲು ಮುಂದಾಗಿರುವುದು ರೈತರಿಗೆ & ಗ್ರಾಮಾದವರಿಗೆ ಸಂತಸ ತಂದಿದೆ. ಆನೆಗುಂದಿ ಸಿಂಗಾರ ಕುಂಟೆ ಕೆರೆಯನ್ನು ಪುನರ್ಶ್ವೇತನಗೊಳಿಸಿ ಒಡಂಬಡಿಕೆ ಪತ್ರ ಗ್ರಾ.ಪಂಚಾಯಿತಿಗೆ ನೀಡುದುವುದರ ಮೂಲಕ & ಸಿಗಾರ ಕುಂಟೆ ಕೆರೆ ನಾಮಫಲಕ ಉದ್ಥಾಟನೆ ಮುಖಂತರ ಕಾರ್ಯಕ್ರಮವನ್ನು ಚಾಲನೆ ನೀಡಿದರು.
ಆನೆಗುಂದಿ ಗ್ರಾಮದಲ್ಲಿ ಸಿಂಗಾರ ಕುಂಟೆ ಕೆರೆ ದಶಕಗಳಿಂದ ಕಸ ಕಡ್ಡಿ, ಕೆಲವು ತ್ಯಾಜ್ಯದಿಂದ ಗಬ್ಬುನಾರುತ್ತಿತ್ತು. ಗಿಡ ಗಂಟೆಗಳಿಂದ ಅಸ್ತಿತ್ವ ಕಳೆದುಕೊಂಡು ಹೂಳು ತುಂಬಿ ಹೋಗಿತ್ತು. ಅಂತಹ ಕರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆರ್ಥಿಕ ಸಹಾಯದೊಂದಿಗೆ ಮತ್ತು ಸ್ಥಳಿಯ ಸಹಕಾರದೊಂದಿಗೆ ತಿಂಗಳು ಕಾಲ ಶ್ರಮದಾನ ನಡೆಸಿ ಶುದ್ದಗೊಂಡು ಸಿಂಗಾರಕುಂಟೆ ಸ್ವಚ್ಛಗೊಳಿಸಿದ್ದರು. ಕೆರೆಯ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ನೀರಿನ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಕೊಪ್ಪಳ ನಿರ್ದೇಶಕರಾದ ಸದಾನಂದ ಬಂಗೇರ ತಿಳಿಸಿದರು. ಪರಿಸರವನ್ನು ನಾವು ಸ್ವಚ್ಛತೆಯನ್ನು ಕಾಪಾಡಿದ್ದಲ್ಲಿ ಆರೋಗ್ಯ ಸಮೃದ್ಧಿಯಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಕೆರೆ ಸಮಿತಿ ಅಧ್ಯಕ್ಷರು ಸಂತೋಷ, ಗ್ರಾ.ಪಂ ಪಿಡಿಓ ಕೃಷ್ಣಪ್ಪ, ಗ್ರಾ.ಪಂ ಅಧ್ಯಕ್ಷರು ತಿಮ್ಮಪ್ಪ ಬಾಳಿಕಾಯಿ, ಗ್ರಾ.ಪಂ ಸದಸ್ಯರು ಮಲ್ಲಿಕಾರ್ಜುನ ಹೆಚ್. ಎಂ, ಹಾಗೂ ವೆಂಕಟೇಶ ಬಾಬು ಗ್ರಾಪಂ ಸದಸ್ಯರು, ಧ.ಗ್ರಾ ಯೋಜನೆ ಜಿಲ್ಲಾನಿರ್ದೇಶಕರಾದ ಸದಾನಂದ ಬಂಗೇರ, ಗಂಗಾವತಿ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ, ಕೃಷಿಧಿಕಾರಿ ದಿನೇಶ ಕುಮಾರ, ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ ಅಭಿಯಂತರರು ನಾಗೇಶ, ಮೇಲ್ಚಿಚಾರಕರಾದ ನೀಲರಾಜ & ಸೇವಾಪ್ರತಿನಿಧಿಗಳು, ಸಂಘದ ಒಕ್ಕೂಟ ಪದಾಧಿಕಾರಿಗಳು, ಸಂಘದ ಸದಸ್ಯರು ಭಾಗವಹಿಸಿದರು.