In the name of Rama, the movement of states is blissful
ಕೊಪ್ಪಳ : ಅಯೋಧ್ಯೆಯಿಂದ ರಾಮೇಶ್ವರವರಿಗೂ ಸೈಕಲ್ ಯಾತ್ರೆಯ ಮೂಲಕ ಹೊರಟಿರುವುದು ಅತ್ಯಂತ ಸಂತೋಷ ತಂದಿದೆ, ಜನರ ಸಹಕಾರ ಕಂಡು ರಾಮನ ಬಗ್ಗೆ ದೇಶದಲ್ಲಿ ಇರುವ ಪ್ರೀತಿ ಬೆರಗಾಗುವಂತೆ ಮಾಡುತ್ತದೆ ಎಂದು ಸೈಕಲ್ ಮೂಲಕ ರಾಮನ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ಅಯೋಧ್ಯೆಯ ಅಭಿಷೇಕ್ ಸಾವಂತ್ ಹೇಳಿದರು.
ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಪ್ಪಳ ಜಿಲ್ಲಾ ಯುವ ಸಂಘಗಳ ಒಕ್ಕೂಟದಿಂದ ಸನ್ಮಾನ ಸ್ವೀಕರಿಸಿದ ವೇಳೆ ಮಾತನಾಡಿದರು. ಅಯೋಧ್ಯೆಯಿಂದ ರಾಮೇಶ್ವರದವರೆಗೆ ಸುಮಾರು ೮೦೦೦ ಕಿ. ಮೀ. ಸೈಕಲ್ ಮೂಲಕ ಪ್ರಯಾಣ ಮಾಡುತ್ತಿದ್ದು, ಹಲವು ರಾಜ್ಯಗಳ ಮೂಲಕ ಇಲ್ಲಿಗೆ ಬಂದಿರುವೆ, ಕರ್ನಾಟಕದ ಜನ ಬಹಳÀ ಹೃದಯವಂತರು ಅವರ ಪ್ರೀತಿ ಸಹಕಾರ ಮತ್ತಷ್ಟು ಖುಷಿ ಉತ್ಸಾಹ ತಂದಿದೆ ಎಂದರು.
ಅಯ್ಯೋದ್ಯೆಯಿAದ ರಾಮೇಶ್ವರರಿಗೆ ಈಗಾಗಲೇ ಆರು ಸಾವಿರಕ್ಕೂ ಅಧಿಕ ಕಿಲೋಮೀಟರ್‌ಗಳನ್ನು ಪ್ರಯಾಣಿಸಿರುವ ಅಭಿಷೇಕ್‌ಗೆ ಇಂದು ನೂರನೇ ದಿನದ ಪ್ರಯಾಣ. ಜನ ನನ್ನನ್ನು ನೋಡುವುದಕ್ಕಿಂತ ಹೆಚ್ಚಾಗಿ ನಾನು ಮಾಡುತ್ತಿರುವ ಈ ರಾಮನ ಯಾತ್ರೆಯ ಬಗ್ಗೆ ರಾಮನ ಬಗ್ಗೆ ಅವರಿಗೆ ಹೆಚ್ಚು ಪ್ರೀತಿ ಕಳಕಳಿ ಇರುವುದು ಕಂಡುಬರುತ್ತದೆ ಅಯೋಧ್ಯೆಯಲ್ಲಿ ಬರುವಂತಹ ದೇಶವಿದೇಶಗಳ ಜನರಿಗೆ ರಾಮನ ಕುರಿತಾಗಿ ನಾನು ಮಾಹಿತಿಯನ್ನು ನೀಡುತ್ತಿದ್ದೇನೆ. ಅಲ್ಲಿ ಗೈಡ್ ಆಗಿ ಕೆಲಸ ಮಾಡುತ್ತಿದ್ದೇನೆ, ಈಗಿನ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರತರುವುದು ಮತ್ತು ತೀರ್ಥಕ್ಷೇತ್ರಗಳ ಪ್ರವಾಸ ಉದ್ಯಮ ಅಭಿವೃದ್ಧಿಗೆ ಏನೆಲ್ಲ ಮಾಡಬಹುದು ಹೇಗೆಲ್ಲ ಮಾಡಬಹುದು ಎಂಬ ಕುರಿತು ಮಾಹಿತಿಯನ್ನು ಉತ್ತರ ಪ್ರದೇಶದ ಸರಕಾರಕ್ಕೂ ಮತ್ತು ಕೇಂದ್ರ ಸರಕಾರಕ್ಕೂ ಮಾಹಿತಿ ನೀಡುವ ಉದ್ದೇಶವನ್ನು ಹೊಂದಿದ್ದೇನೆ. ಮನಸ್ಸೊಂದು ಗಟ್ಟಿ ಇದ್ದರೆ ನಿಶ್ಚಿತವಾಗಿ ಗುರಿಯನ್ನು ಸಾಧಿಸಬಹುದು ಎಂಬುದಕ್ಕೆ ನಾನು ಉದಾಹರಣೆ, ಕೇವಲ ಒಂದು ರೂಪಾಯಿಯನ್ನು ಹಿಡಿದುಕೊಂಡು ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆ ಸೈಕಲ್ ಸೇರಿ ನನಗೆ ಬೇಕಿರುವ ಎಲ್ಲಾ ವ್ಯವಸ್ಥೆಯನ್ನು ರಾಮನ ಭಕ್ತರು ಮಾಡಿದ್ದಾರೆ, ಪ್ರೀತಿ ತೋರಿಸಿದ್ದಾರೆ. ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಎಲ್ಲಾ ಕಡೆ ವ್ಯವಸ್ಥೆಗೆ ಸಹಕಾರ ಮಾಡಿಕೊಟ್ಟಿದೆ ಅವರಿಗೂ ಸಹ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು.
ಇದೇ ವೇಳೆ ಮಾತನಾಡಿದ ಕೊಪ್ಪಳ ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಜಿ. ಗೊಂಡಬಾಳ ಅವರು, ರಾಮನ ಹೆಸರಲ್ಲಿ ರಾಮ ಮತ್ತು ಹನುಮನ ಕ್ಷೇತ್ರಗಳಿಗೆ ಭೇಟಿ ಪ್ರಯಾಣ ಮಾಡಿ ದಾಖಲೀಕರಿಸಿ ಅದನ್ನು ಸಮರ್ಪಿಸುವಂತಹ ಆಲೋಚನೆ ನಿಜವಾಗಲೂ ದೊಡ್ಡ ಕಾರ್ಯ. ಅಂತಹ ಸೇವೆ ಮಾಡುತ್ತಿರುವ ಅಂತ ಪ್ರಯಾಣ ಮಾಡುತ್ತಿರುವ ಅಭಿಷೇಕ್ ಅಭಿನಂದನಾರ್ಹರು. ಯುವಜನರು ಇಂತಹ ಆಲೋಚನೆಗಳನ್ನ ಮಾಡಿ ಉತ್ತಮ ಮಾರ್ಗದಲ್ಲಿ ನಡೆಯಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕ್ರೀಡಾ ಶಾಲೆ ವಾಲಿಬಾಲ್ ಕೋಚ್ ಕಮಲ್‌ಸಿಂಗ್ ಬಿಸ್ಟ್, ಪತ್ರಕರ್ತ ಪ್ರಭು ಜಾಗಿರ್‌ದಾರ್ ಇತರರು ಇದ್ದರು.