Navratri celebrations: Filling Udi is an age-old culture: Mataji Annapurna Singh

ಗಂಗಾವತಿ : ಮಹಿಳೆಯರೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮಹಿಳೆಯವರಿಗೆ ಉಡಿ ತುಂಬುವ ಪದ್ಧತಿ ಭಾರತೀಯ ಸಂಸ್ಕೃತಿಯ ಪ್ರತೀಕ. ಇಂತಹ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ’ ಎಂದು
ಮಾತಾಜಿ ಅನ್ನಪೂರ್ಣ ಸಿಂಗ್ ಇವರು ಹೇಳಿದರು.
ನಗರದ 21ನೇ ವಾರ್ಡ್ ಒಡೆಯರ್ ಓಣಿ ಗಾಂಧಿನಗರದ ಬನ್ನಿ ಮಾಂಕಾಳಮ್ಮ ಕಮಿಟಿ ವತಿಯಿಂದ 111 ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ಬನ್ನಿ ಮಾಂಕಾಳಮ್ಮ ದೇವಸ್ಥಾನದಲ್ಲಿ
ಜರಗಿತು.
ಮಾತಾಜಿ ಅನ್ನಪೂರ್ಣ ಸಿಂಗ್ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬನ್ನಿ ಮಾಂಕಾಳಮ್ಮ ಕಮಿಟಿ ಪದಾಧಿಕಾರಿಗಳು ಸದಸ್ಯರ ಕಾರ್ಯ ಶ್ಲಾಘನೀಯ.
ಉಡಿ ತುಂಬುವ ಪದ್ಧತಿ ಭಾರತೀಯ ಸಂಸ್ಕೃತಿಯ ಪ್ರತೀಕ.ಇಂತಹ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನೈತಿಕತೆ ಮೈಗೂಡಿಸಿಕೊಂಡರೆ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ. ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಉತ್ತಮ ನಾಗರಿಕರ ಅಗತ್ಯವಿದೆ. ಅದರಂತೆ ಮಗು ಬೆಳೆದು ಉತ್ತಮ ನಾಗರಿಕನಾಗಬೇಕಾದರೆ ತಾಯಿಯ ಪಾತ್ರ ಮಹತ್ವವಿದೆ ಎಂದರು.
ನಂತರ ಸಮಾಜ ಸೇವಕರು ಗೀತಾ ವಿಕ್ರಂ ಮಾತನಾಡಿ ಪುರುಷನ ಸಾಧನೆಯ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತೊಂದಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕೆಲಸದಲ್ಲೂ ಮಹಿಳೆ ಮುಂದಿರುವುದು ಸಂತಸದ ಸಂಗತಿ ಎಂದರು.
ನಂತರ 111 ಮಹಿಳೆಯರಿಗೆ ಸೀರೆ ಮತ್ತು ಉಡಿ ತುಂಬುವ ಮೂಲಕ ಗೌರವಿಸಿದ್ದರ.
ಈ ಸಂದರ್ಭದಲ್ಲಿ ಮುದಿಯಪ್ಪ, ಕನಕಗಿರಿ ದುರ್ಗಪ್ಪ, ಯು ಲಕ್ಷ್ಮಣಪ್ಪ, ಅಶೋಕಪ್ಪ, ಮೌಲಪ್ಪ, ಬದ್ರಿ, ಗುರುರಾಜ್, ಮೂಕಪ್ಪ,ಕಾಜಪ್ಪ, ನಾಗರಾಜ್, ವೀರೇಶ್, ರಾಘು, ಬಸವಣ್ಣ, ಹುಲಿಗೆಮ್ಮ,ದೇವಿ ರಾಜೇಶ್ವರಿ ದೇವಮ್ಮ ಗೌರಿ ಆಶಾ ಸುಧಾ ಶಾರದಮ್ಮ ಉಪಸ್ಥಿತರಿದ್ದರು.